Advertisement

Tag: ಕೆಂಡಸಂಪಿಗೆ

ಅಲೆಮಾರಿ ಗುಡಾರಗಳು, ಮುಂಗುಸಿ ಭದ್ರ ಮತ್ತು ಮಂಚಿಗೆ: ಎಸ್. ಗಂಗಾಧರಯ್ಯ ಅನುಭವ ಕಥನ

ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಮೂರನೆಯ ಕಂತು

Read More

ಹೆಣ್ಣು ನೋಡಲೆಂದು ಬಂದವರು!: ಸುಕನ್ಯಾ ಕನಾರಳ್ಳಿ ಅಂಕಣ

ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

Read More

ಮೊದಲ ಶಾಲೆಯ ಪ್ರಾರಂಭದ ಅನುಭವಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ  

ನಾನು ಆ ಮನೆಗೆ ಹೋಗುತ್ತೇನೆ ಎಂದು ತಿಳಿದು ಅವರು ಬಾಕಿ ಇರುವ ಕರೆಂಟ್ ಬಿಲ್ ಕಟ್ಟಿದ್ದರಂತೆ ಹಾಗೂ ಕ್ಲೀನ್ ಮಾಡಿಸಿದ್ದರಂತೆ. ಯಾವಾಗ ನಾನು ಹೋಗೋದಿಲ್ಲ ಎಂದು ತಿಳಿದ ಮೇಲೆ ನನ್ನ ಮೇಲೆ ಗರಂ ಆದರು. ಆದರೆ ಇದನ್ನು ತೋರಿಸಿಕೊಳ್ಳುವ ಹಾಗಿರಲಿಲ್ಲ. ಮನದಲ್ಲಿ ನನ್ನ ಬಗ್ಗೆ ಕೋಪವು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಆಗ ಇವರೇ ನಮ್ಮ ಹೆಚ್ಚೆಂ ಆದ್ದರಿಂದ ನನಗೆ ಕಿರಿಕ್ ಕೊಡಲು ಶುರು ಮಾಡಿದರು. ರಜಾ ಕೇಳಿದಾಗ ತಕ್ಷಣ ಪ್ರತಿಕ್ರಿಯೆ ನೀಡದೇ ಇರುತ್ತಿದ್ದುದು, ಸುಖಾ ಸುಮ್ಮನೇ ಅದು ಮಾಡಿಲ್ಲ ಇದು ಮಾಡಿಲ್ಲ ಎಂದು ಹೇಳುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಅಡಿಗರ ‘ವರ್ಧಮಾನ’ ಮತ್ತು ಭಾರತದ ವರ್ತಮಾನ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕವಿತೆಯ ಕೊನೆಯ ಭಾಗ ಭೌತಿಕ ನೆಲೆಯ ಇಲ್ಲವೇ ಮೂರ್ತ ರೂಪದ ವಿಕಾಸ ಕ್ರಮವನ್ನು ಮೀರಿದ ಆಂತರಂಗಿಕವಾದ ಬೆಳವಣಿಗೆಯ ಕಡೆಗೆ ಬೆರಳು ತೋರುತ್ತದೆ. ವ್ಯಕ್ತಿತ್ವದೊಳಗಿನ ಹಲವು ಅಂಶಗಳು ಸಂಘರ್ಷಕ್ಕೆ ಒಳಗಾಗುತ್ತಲೇ ಕೆಡುಕನ್ನು ಕಳಚಿಕೊಂಡು ಒಳಿತಿನ ಬೆಳಕು ಉದಯಿಸುವುದರ ಕಡೆಗೆ ಕವಿತೆ ತುಡಿಯುತ್ತದೆ. ಬಾಹ್ಯ ಗೋಚರವೆನಿಸಿಕೊಳ್ಳಬಹುದಾದ ಬದುಕಿನ ಸಾಧನೆ ಆಂತರಂಗಿಕವಾದ ಪರಿಧಿಯಲ್ಲಿ ಪ್ರಕಟಗೊಂಡು ಜೀವನ ವಿಕಾಸಕ್ಕೆ ನೆಲೆಯಾಗುವ ಬಗೆ ಇಲ್ಲಿ ಗೋಚರವಾಗುತ್ತದೆ.
ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕವಿತೆಯ ಕುರಿತು ಡಾ. ವಿಶ್ವನಾಥ ನೇರಳಕಟ್ಟೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ