Advertisement

Tag: ಕೆಂಡಸಂಪಿಗೆ

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ …
ಅಲಕಾ ಕಟ್ಟೆಮನೆ ಬರೆದ ಕತೆ “ನೋಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಇಂಧನಾಂತರಂಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾಲ್ಕನೆಯ ಕತೆ

Read More

ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ

ನನ್ನ ಸಮಯವನ್ನು ಜಾಣ್ಮೆಯಿಂದ ಬಳಸುವುದು ನನಗೆ ಅಗತ್ಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಎಐ ಬಳಕೆಗೇ ಅಧಿಕ ಸಮಯ ಹಿಡಿಸಿದ್ದು ನನಗೆ ಒಪ್ಪಿಗೆಯಾಗಲಿಲ್ಲ ಇರಿಸುಮುರಿಸಾಗಿತ್ತು.. ಆ ಸಮಯದಲ್ಲಿ ಯಾವುದೇ ಸಾಧನಗಳನ್ನು ಉಪಯೋಗಿಸದೆ ನಾನೇ ಪದ-ಕಡಿತ ಮಾಡಬಹುದಿತ್ತು ಎಂದೆನಿಸಿತು. ಬಹುಶಃ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎನ್ನುವುದರ ಬಗ್ಗೆ ನಾನು ಕಲಿಯಬೇಕಿದೆ. ಮುಂಬರುವ ನಿರೀಕ್ಷೆಗಳಿಗೆ, ಸನ್ನಿವೇಶಗಳಿಗೆ ತಯಾರಾಗಬೇಕಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಮಿಂಚುಳಗಳು ಮತ್ತು ಕಲ್ಬಾವಿ: ಎಸ್. ಗಂಗಾಧರಯ್ಯ ಅನುಭವ ಕಥನ

ಇವರು ಯಾರೊಬ್ಬರನ್ನು ಬೈದದ್ದಾಗಲಿ, ಯಾರ ಮೇಲೆ ಆಗಲಿ ಸಿಟ್ಟು ಮಾಡಿಕೊಂಡಿದ್ದನ್ನಾಗಲಿ ನಾನು ಯಾವತ್ತೂ ಕಂಡಿರಲಿಲ್ಲ. ಚಂದದ ನಗು ಹಾಗೂ ಮೌನ ಇವರ ಬಲು ದೊಡ್ಡ ಶಕ್ತಿಗಳಾಗಿದ್ದವು. ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಅಂತ ಯಾವಾಗಲೂ ಹೇಳುತ್ತಿದ್ದ ಗೋವಿಂದಪ್ಪ ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದರು. ಅಂತೆಯೇ ಯಾರಾದರೂ ಯಾವುದಾದರೂ ಕೆಲಸವನ್ನು ಹೇಳಿದರೆ ಒಂಚೂರೂ ಬೇಸರವಿಲ್ಲದೆ ಪಾಲಿಸುತ್ತಿದ್ದರು. ಒಂಥರಾ ನಿರುಮ್ಮಳ ಜೀವಿ. ಆದರೆ ಇಂಥ ಗೋವಿಂದಪ್ಪ ನಿದ್ದೆಗೆ ಜಾರಿದಾಗ ಮಾತ್ರ ಸಹಿಸಲಸಾಧ್ಯದ ವ್ಯಕ್ತಿಯಾಗಿಬಿಡುತ್ತಿದ್ದರು. ಏಕೆಂದರೆ ಇವರು ಹೊಡೆಯುತ್ತಿದ್ದ ಗೊರಕೆಯ ಸದ್ದು ಅವರು ಮಲಗಿದ್ದ ಮನೆಯವರಿಗೆ ಮಾತ್ರವಲ್ಲ ಸುತ್ತಲ ಯಾವ ಜೀವಿಯನ್ನೂ ಬಡಪಟ್ಟಿಗೆ ಬಿಡುತ್ತಿರಲಿಲ್ಲ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

 ರಿಚರ್ಡ್ ಫೇನ್ಮನ್ – ಅದ್ಭುತ ಪ್ರತಿಭೆಯ ವಿಲಕ್ಷಣ ವಿಜ್ಞಾನಿ: ಡಾ. ಎಲ್. ಜಿ. ಮೀರಾ ಅಂಕಣ

ಇಡೀ ಜೀವನವನ್ನು ಭೌತಶಾಸ್ತ್ರದ ಅಧ್ಯಯನ ಮತ್ತು ಆರಾಧನೆಯಲ್ಲಿ ಕಳೆದ ಫೇನ್ಮನ್ ಒಬ್ಬ ಅಸಾಧ್ಯ ಕುತೂಹಲಿ ಮತ್ತು ಮಹಾತುಂಟ. ವಿಜ್ಞಾನಿ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ `ಗಂಭೀರ, ನಗಲು ಬಾರದ, ಚಿಂತನಾಪರ, ಮಿತಭಾಷಿ ವ್ಯಕ್ತಿತ್ವ’ಕ್ಕೆ ಒಂದು ವಿರುದ್ಧಪದ ಇವರು! ಸದಾ ಯಾರದಾದರೂ ಕಾಲೆಳೆಯತ್ತಾ ನಗುತ್ತಾ ನಗಿಸುತ್ತಾ, ಚಿತ್ರ ಬರೆಯಲು ಕಲಿಯುತ್ತಾ, ವಾದ್ಯ ನುಡಿಸಲು ಪ್ರಯತ್ನಿಸುತ್ತಾ, ಕ್ಯಾಬರೆ ನೃತ್ಯಗಾತಿಯರ ಜೊತೆಯಲ್ಲಿ ಸಂಭಾಷಣೆ ಮಾಡುತ್ತಾ…..
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ