Advertisement

Tag: kendasampige

ಮಳೆ ಹಿಡಿಯೋ ಮೊದ್ಲು…..: ಭವ್ಯ ಟಿ‌. ಎಸ್. ಸರಣಿ

ಮಳೆಗಾಲ ಬಂತೆಂದರೆ ಮೀನುಗಳ ಕಾಲವೂ ಬಂದಂತೆಯೇ. ಹತ್ ಮೀನು, ಅವ್ಲು, ಗೌರಿ ಮೊದಲಾದ ಹೊಳೆ ಮೀನುಗಳು ಸಿಗುವಾಗ ರುಚಿಕರವಾದ ಮೀನು ಸಾರಿಗೆ ಬೇಕಾದ ತರತರದ ಹುಳಿಗಳು ಈ ಮೇ ತಿಂಗಳಲ್ಲಿ ತಯಾರಾಗಬೇಕು. ಮಲೆನಾಡಿನ ಕಾಡುಗಳಲ್ಲಿ ವಾಟೆ ಮರ ಇರುತ್ತದೆ. ಈ ವಾಟೆ ಕಾಯಿಗಳನ್ನು ಉದುರಿಸಿ ತಂದು ಸಣ್ಣಗೆ ಹೆಚ್ಚಿ, ಒಣಗಿಸಿ, ಬೀಜ ತೆಗೆದು ಉಪ್ಪು ಹಾಕಿ ಡಬ್ಬಿಗಳಲ್ಲಿ ಸಂಗ್ರಹಿಸಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆ ಶುರುವಾಗುವ ಮುಂಚೆ ಮಾಡಿಟ್ಟುಕೊಳ್ಳುವ ಸಿದ್ಧತೆಗಳ ಕುರಿತ ಬರಹ ಇಲ್ಲಿದೆ

Read More

ಮಂಜುನಾಥ್ ಕುಣಿಗಲ್ ಬರೆದ ಈ ಭಾನುವಾರದ ಕತೆ

ಅಮ್ಮನಿಗೆ ವಿಷಯ ತಿಳಿದರೆ ಎದೆಹೊಡೆದು ಕುಸಿದುಬಿದ್ದಾಳು! ಆಕೆ ತನ್ನ ಜೀವನ ಒತ್ತೆಯಿಟ್ಟು ಅದೂ-ಇದೂ ಚಾಕರಿ ಮಾಡುತ್ತಾ ನಮ್ಮನ್ನು ಸಾಕಿದ್ದು. ಆಕೆಗೆ ಏನು ಸುಖ ಕೊಟ್ಟಿದ್ದೆ? ಅದ್ಯಾವುದೋ ನನ್ನ ಕಂಪ್ಯೂಟರ್ ಕೋರ್ಸಿಗೆ ಹನ್ನೆರೆಡು ಸಾವಿರವನ್ನು ಹೊಂಚಲು ಎಲ್ಲೆಲ್ಲೋ ಹೊಟ್ಟೆಬಟ್ಟೆ ಕಟ್ಟಿ ಅದೆಷ್ಟು ಕಷ್ಟಪಟ್ಟಳು? ಆ ದುಡ್ಡನ್ನು ನಾನಿನ್ನೂ ವಾಪಸ್ ಕೊಟ್ಟಿಲ್ಲ! ಹೊಟ್ಟೆಯಲ್ಲಿ ಏನೋ ಕಟ್ಟಿಕೊಂಡ ಸಂಕಟ!
ಮಂಜುನಾಥ್ ಕುಣಿಗಲ್ ಹೊಸ ಕಥಾ ಸಂಕಲನ “ದೂರ ದೇಶದ ದೇವರು” ಕೃತಿಯ ಶೀರ್ಷಿಕೆ ಕತೆ

Read More

ಸೌದಿ ಡೇಟ್ಸ್ – 2: ದರ್ಶನ್‌ ಜಯಣ್ಣ ಸರಣಿ

ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಹೇಗೆ ಚಿಗುರೊಡೆಯಿತು ಈ ಸ್ನೇಹದ ಬಳ್ಳಿ..: ಎಸ್. ನಾಗಶ್ರೀ ಅಜಯ್ ಅಂಕಣ

ಆಕೆ ಸಿಕ್ಕದಿದ್ದರೂ ಊರು ನಿಧಾನಕ್ಕೆ ಅಮ್ಮನನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಪೊರೆಯುತ್ತಿತ್ತು. ಆದರೆ ಜಯಮ್ಮನ ಸ್ನೇಹದ ರುಚಿ ಸಿಗದೆ ನಷ್ಟವಾಗುತ್ತಿತ್ತು. ಯಾವುದೋ ಊರಿನ ಹೆಂಗಸು ಇಲ್ಲಿ ಬಂದಿಳಿದರೆ ನನಗೇನಾಗಬೇಕು? ನೆಂಟರಾ? ಇಷ್ಟರಾ? ಎಂದಾಕೆ ದೂರವುಳಿಯಬಹುದಿತ್ತು. ಹೊಸ ಊರಿನಲ್ಲಿ ಮನೆತನಕ ಬಂದು ಮಾತನಾಡುತ್ತಾ ಕೂರುವ ಈ ಹೆಂಗಸಿಗೆ ನನ್ನಿಂದ ಏನಾದರೂ ಸಹಾಯದ ನಿರೀಕ್ಷೆಯಿದೆಯೆ? ನಂಬಿಸಿ ಮೋಸ ಮಾಡಿದರೇನು ಗತಿ? ಎಳೆಮಗುವನ್ನು ಇವಳ ಕೈಗಿತ್ತು ಹೇಗೆ ಹೋಗಲಿ? ಎಂದೆಲ್ಲ ಅನುಮಾನಿಸಿ ಅಮ್ಮನೂ ಚಿಪ್ಪಿನೊಳಗೆ ಸೇರಬಹುದಿತ್ತು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ

Read More

ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂಭತ್ತನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ