Advertisement

ಸಂಪಿಗೆ ಸ್ಪೆಷಲ್

ಬರಹದ ಭಾವನೆ: ಓದಿನ ಕುರಿತು ಕಿಟ್ಟು ಬರಹ

ಬರಹದ ಭಾವನೆ: ಓದಿನ ಕುರಿತು ಕಿಟ್ಟು ಬರಹ

ಬರಹ ಬರೆದವನ ತಿಳುವಳಿಕೆಯ, ಅವನ ಅನಿಸಿಕೆಯ, ಅವನ ಬಯಕೆಯ, ಭಾವನೆಯ ಪ್ರತಿಬಿಂಬವಲ್ಲವೇ? ಅವನ ಸಂತಸ, ಅವನ ದುಗುಡ, ಅವನ ನೆಮ್ಮದಿ, ಅವನ ಆತಂಕ, ಅವನ ಎದೆಗಾರಿಕೆ, ಅವನ ಪುಕ್ಕಲುತನ, ಅವನ ಪ್ರೇಮ ಕಾಮಗಳೆಲ್ಲ ಅದರಲ್ಲಿ ಪದಗಳಾಗಿರುವುದಿಲ್ಲವೇ? ಹಾಗಾದರೆ ಕವಿತೆ ಅಥವಾ ಬರಹ ಬರೆದವನಿಂದಲೇ ಅರ್ಥ ಪಡೆಯುವುದು ಎಂದಾಯಿತಲ್ಲವೇ? ಹಾಗೆ ಬರೆದವನಿಂದಲೇ ಪಡೆದುಕೊಂಡ ಅರ್ಥ ಓದುಗನಿಗೆ ಸರಿಯಾಗಿ ಅರ್ಥವಾಗಬೇಕಾದರೆ ಪ್ರತಿ ಬರಹದ ಇಲ್ಲಾ ಕಾವ್ಯದ ಜೊತೆಗೊಂದು ಬರೆದವನ ಹಿನ್ನೆಲೆ ಮತ್ತು ಬರಹದ ಹಿನ್ನೆಲೆಯನ್ನೂ ಬರೆಯಬೇಕಾಯಿತಲ್ಲವೇ?
ಓದಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ

read more
ಅಮ್ಮನಿಗೆ ಅಂತಿಮ ವಿದಾಯ…: ವಿಜಯಕುಮಾರಿ ಬಿ. ಬರಹ

ಅಮ್ಮನಿಗೆ ಅಂತಿಮ ವಿದಾಯ…: ವಿಜಯಕುಮಾರಿ ಬಿ. ಬರಹ

ಇನ್ನೊಂದು ನನಗೆ ಬೇಸರವನ್ನು ಉಂಟುಮಾಡಿದ್ದು, ಅಮ್ಮ ತುಂಬಾ ಚೆನ್ನಾಗಿ ಉಪ್ಪಿನಕಾಯಿ ಹಾಕುತ್ತಿದ್ದರು, ಒಂದು ದೊಡ್ಡ ಪಿಂಗಾಣಿ ಜಾಡಿ ಇತ್ತು, ಅದನ್ನು ನೋಡಿ ಅಯ್ಯೋ ಉಪ್ಪಿನ ಕಾಯಿಯ ರೆಸಿಪಿಯನ್ನೇ ನಾವು ಕಲಿಯಲಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು. ತಿಥಿಎಲ್ಲಾ ಮುಗಿಸಿ ಹೊರಡುವಾಗ ನನ್ನ ಮನದಲ್ಲಿ ಇದ್ದದ್ದು ಒಂದೇ ಕೊರಗು, ಅಮ್ಮನಿಗೆ ಆಪರೇಷನ್ ಆಗಿ ಮತ್ತು ಕರೋನ ಟೈಮ್‌ನಲ್ಲಿ ಎಲ್ಲಾ ಕಡೆ ಓಡಾಡಲು ಕಷ್ಟವಿದ್ದಾಗ ಅಮ್ಮನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಎನ್ನುವ ಕೊರಗು ನನ್ನ ಮನದಲ್ಲಿ ಉಳಿದಿತ್ತು, ಕಡೆಯದಾಗಿ ಅಮ್ಮ ಬಳಸುತ್ತಿದ್ದ ಚಪ್ಪಲಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದೆ…
ವಿಜಯಕುಮಾರಿ ಬಿ. ಬರಹ ನಿಮ್ಮ ಓದಿಗೆ

read more
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಪ್ಯಾಪಿಲಾನ್ ಬರಹ

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಪ್ಯಾಪಿಲಾನ್ ಬರಹ

ಒಬ್ಬನ ಪ್ರವಾಸ ಕಥನದ ಭಿನ್ನತೆಯೇನು? ಅದೂ ಹತ್ತು ಹದಿನೈದು ದಿನಗಳ ಪ್ಯಾಕೇಜ್ಡ್ ಪ್ರವಾಸದ ಸಮಯದಲ್ಲಿ ಒಬ್ಬ ತನ್ನ ಪೂರ್ವಗ್ರಹಗಳಿಗಿಂತ ಭಿನ್ನವಾದ ಹೊಸ ಬದುಕನ್ನು ಹೇಗೆ ನೋಡಬಲ್ಲ, ಗ್ರಹಿಸಬಲ್ಲ ಮತ್ತು ಚಿತ್ರಿಸಬಲ್ಲ? ನಿಮ್ಮಲ್ಲಿ ಅನೇಕರಿಗೆ ಸಕಾರಣವಾಗಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಿರುವ ಐಟಿ ಸ್ನೇಹಿತನಿದ್ದಾನು. ಅವನಿಗೆ ಆತ ತನ್ನ ವೀಕೆಂಡ್ ಗಳಲ್ಲಿ ಯಾರ ಜೊತೆ ಬಿಯರ್ ಕುಡಿಯುತ್ತಾನೆ ಮತ್ತು ಯಾವ ಅಮೇರಿಕನ್ ಶೋಕೇಸ್ಡ್ ಸಿಟಿಗಳಲ್ಲಿ ಅಮೇರಿಕಾವನ್ನು ನೋಡುತ್ತಾನೆ ಕೇಳಿನೋಡಿ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಪ್ಯಾಪಿಲಾನ್ ಬರಹ

read more
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೆ.ಟಿ. ಗಟ್ಟಿ ಬರಹ

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೆ.ಟಿ. ಗಟ್ಟಿ ಬರಹ

ಹಾಗಾದರೆ ಉಳಿದಲ್ಲಿ ಏನಾದೀತು? ‘ಗ್ಲೋಬಲ್ ವಾರ್ಮಿಂಗ್’ನಿಂದಾಗಿ ಕಡಲು ಹೆಚ್ಚು ಬಿಸಿಯಾಗುವುದರಿಂದ, ಹೆಚ್ಚು ಮೋಡಗಳುಂಟಾಗಿ, ಆಕಾಶದಲ್ಲಿ ಹೆಚ್ಚು ಮೋಡ ಶೇಖರಣೆಯಾಗಿ ಹೆಚ್ಚು ಮಳೆ ಸುರಿಯುತ್ತದೆ, ಹೆಚ್ಚು ಸಿಡಿಲು ಮಿಂಚು ಭೂಮಿಗೆ ಬಡಿಯುತ್ತದೆ. ಹಾಗಾದರೆ ಎತ್ತರದಲ್ಲಿ ಮನೆ ಕಟ್ಟಿ, ಮನೆಗೆ ಭದ್ರವಾದ ಗೋಡೆ ಕಟ್ಟಿ, ಹೆಚ್ಚು ಅರ್ಥಿಂಗ್ ಮತ್ತು ಲೈಟ್ನಿಂಗ್ ಅರೆಸ್ಟರ್ ಹಾಕಿಕೊಂಡು ಬಚಾವಾಗಬಹುದೆ? ಆಗಬಹುದೇನೊ ಸ್ವಲ್ಪ ಕಾಲ! ಆದರೆ ಜಾಗತಿಕ ತಾಪಮಾನ ಇನ್ನೂ ಕೆಲವು ಡಿಗ್ರಿ ಮೇಲಕ್ಕೆ ಹೋದರೆ?
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೆ.ಟಿ. ಗಟ್ಟಿಯವರ ಬರಹ

read more
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ರಾಜೇಂದ್ರ ಚೆನ್ನಿ ಬರಹ

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ರಾಜೇಂದ್ರ ಚೆನ್ನಿ ಬರಹ

ಅಂಗಡಿ ಎಂದರೆ ಒಂದು ಗುಡಿಸಲು. ಅದಕ್ಕೆ ಸಿನಿಮಾ ಟಿಕೇಟ್ ಕೌಂಟರ್‌ನಂಥ ಒಂದೇ ಕಿಟಕಿ. ಅದರ ಹಿಂದೆ ಮೆಕ್ಸಿಕೊ ದೇಶದವರಂಥ ಕಟೆದು ಮಾಡಿದಂತಹ ಮುಖದ ಗಿರಿಜಾ ಮೀಸೆಯ ಒಬ್ಬನು ಕುಳಿತಿದ್ದ. ಅವನು ಮಾತೇ ಆಡುತ್ತಿರಲಿಲ್ಲ. ಮುಖದ ಮೇಲೆ ಯಾವ ಭಾವವೂ ಇರಲಿಲ್ಲ. ಬೆರಳಿನಲ್ಲೇ ಇಷ್ಟು ರೂಪಾಯಿ ಎಂದು ತೋರಿಸುತ್ತಿದ್ದ. ಅಷ್ಟು ರೂಪಾಯಿ ಕಿಟಕಿಯಲ್ಲಿ ತೂರಿದರೆ ಆ ಕಡೆಯಿಂದ ಒಂದು ಗ್ಲಾಸ್ ನಲ್ಲಿ ಬಿಳಿ ಬಣ್ಣದ ದ್ರವವನ್ನು ಸುರಿದುಕೊಡುತ್ತಿದ್ದ. ಷೇಕ್ಸಪೀಯರ್ ಹೆಸರಿನಲ್ಲಿ ಅದನ್ನು ಗುಟುಕರಿಸಿದೆವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ರಾಜೇಂದ್ರ ಚೆನ್ನಿ ಬರಹ

read more
ಅಡಿಗರ ‘ವರ್ಧಮಾನ’ ಮತ್ತು ಭಾರತದ ವರ್ತಮಾನ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಅಡಿಗರ ‘ವರ್ಧಮಾನ’ ಮತ್ತು ಭಾರತದ ವರ್ತಮಾನ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕವಿತೆಯ ಕೊನೆಯ ಭಾಗ ಭೌತಿಕ ನೆಲೆಯ ಇಲ್ಲವೇ ಮೂರ್ತ ರೂಪದ ವಿಕಾಸ ಕ್ರಮವನ್ನು ಮೀರಿದ ಆಂತರಂಗಿಕವಾದ ಬೆಳವಣಿಗೆಯ ಕಡೆಗೆ ಬೆರಳು ತೋರುತ್ತದೆ. ವ್ಯಕ್ತಿತ್ವದೊಳಗಿನ ಹಲವು ಅಂಶಗಳು ಸಂಘರ್ಷಕ್ಕೆ ಒಳಗಾಗುತ್ತಲೇ ಕೆಡುಕನ್ನು ಕಳಚಿಕೊಂಡು ಒಳಿತಿನ ಬೆಳಕು ಉದಯಿಸುವುದರ ಕಡೆಗೆ ಕವಿತೆ ತುಡಿಯುತ್ತದೆ. ಬಾಹ್ಯ ಗೋಚರವೆನಿಸಿಕೊಳ್ಳಬಹುದಾದ ಬದುಕಿನ ಸಾಧನೆ ಆಂತರಂಗಿಕವಾದ ಪರಿಧಿಯಲ್ಲಿ ಪ್ರಕಟಗೊಂಡು ಜೀವನ ವಿಕಾಸಕ್ಕೆ ನೆಲೆಯಾಗುವ ಬಗೆ ಇಲ್ಲಿ ಗೋಚರವಾಗುತ್ತದೆ.
ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕವಿತೆಯ ಕುರಿತು ಡಾ. ವಿಶ್ವನಾಥ ನೇರಳಕಟ್ಟೆ ಬರಹ

read more
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ಎಚ್.ಎಸ್. ಅನುಪಮಾ ಬರಹ ಬರಹ

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ಎಚ್.ಎಸ್. ಅನುಪಮಾ ಬರಹ ಬರಹ

ಹಂದಿ ಹಾವಳಿಯಿಂದ ಬೇಸತ್ತ ಹೆಗಡೇರು, ಈಗ ಹದಿನೈದು ದಿನದಿಂದ ತೋಟದ ಸುತ್ತ ಇರೋ ಮರಗಿಡ ಕಡಿಸಿ, ಐಬೆಕ್ಸ್ ಬೇಲಿ ಎಳೆಸಿ, ಅಲ್ಲೇ ಹತ್ತಿರ ಇರುವ ಕರೆಂಟು ಕಂಬದಿಂದ ರಾತ್ರಿ ಹೊತ್ತು ಬೇಲಿಗೆ ಕರೆಂಟು ಹರಿಸುವ ವ್ವವಸ್ಥೆ ಮಾಡಿಕೊಂಡಿದ್ದಾರೆ. ಕರೆಂಟು ತಾಗಿಯೋ, ಹೇಗೋ, ಅವರ ಬೇಲಿ ಹಾರಿಸಿದ್ದೆ ದಿನಾ ಮೂರು ನಾಕು ಮಂಗ ಸತ್ತು ಬೀಳತೊಡಗಿದವು. ಮೂವತ್ತು ಕೆ.ಜಿ. ಹತ್ತಿರವಿರುವ ಒಳ್ಳೆ ಗಟ್ಟಿಮುಟ್ಟಾದ ಮಂಗಗಳು! ಐಬೆಕ್ಸ್ ಬೇಲಿ ತಾಗಿಸಿಕೊಳ್ಳುವಷ್ಟು ದಡ್ಡ ಪ್ರಾಣಿಗಳೆಲ್ಲ ಮಂಗಗಳು ಎಂದುಕೊಳ್ಳುತ್ತಿರುವಾಗಲೇ, ಹೆಗಡೇರಿಗೆ ವಿಪರೀತ ಜ್ವರ ಬಂತು. ಕಂಗಾಲಾಗುತ್ತಾಳೆಂದು ಮೊದಲು ಹೆಂಡತಿಗೆ ಹೇಳದೇ, ಮನೆಯಲ್ಲಿದ್ದ ಕ್ರೋಸಿನ್, ವಿಕ್ಸ್ ಆಕ್ಷನ್ ನುಂಗುತ್ತ ಉಳಿದರು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ಎಚ್.ಎಸ್. ಅನುಪಮಾ ಬರಹ

read more
ಮರೆವು ಎಂಬ ಅದ್ಭುತ ಅಸ್ತ್ರ: ವಿನಾಯಕ ಎಸ್.‌ ನಾಯಕ ಬರಹ

ಮರೆವು ಎಂಬ ಅದ್ಭುತ ಅಸ್ತ್ರ: ವಿನಾಯಕ ಎಸ್.‌ ನಾಯಕ ಬರಹ

ಹದಿಹರೆಯದವರನ್ನೊಮ್ಮೆ ಮಾತನಾಡಿಸಿ ಅವರ ಮಾತಿನ ಮಧ್ಯೆ ಹಲವಾರು ಸಾರಿ ಆದರು ನನಗೆ ನೆನಪೆ ಇಲ್ಲ ಎಂಬ ಶಬ್ಧ ಪುನರಾವರ್ತಿತವಾಗುತ್ತಾ ಇರುತ್ತದೆ. ಇದು ಯಾವ ಜಾಣ ಕುರುಡು ಅಲ್ಲ ಹಾಗೆ ವಿಷಯದ ತಿರುಚುವಿಕೆಯೂ ಅಲ್ಲ ಇಲ್ಲಿ ಕೇವಲ ಮಾತಿನ ನುಣುಚುವಿಕೆ ಅಷ್ಟೆ. ಹಳೆ ರೋಗಿಗೆ ವೈದ್ಯರ ಚೀಟಿ ಮರೆತು ಬಂದೆನೆಂಬುದು ಆ ಕ್ಷಣದ ಸಬೂಬು ವೈದ್ಯರ ಸಿಡುಕಿನಿಂದ ತಪ್ಪಿಸಿಕೊಳ್ಳಲು. ಎಲ್ಲಾ ವೃತ್ತಿಯವರಲ್ಲು ತಮ್ಮ ವೃತ್ತಿಗೆ ಸಂಬಂದಪಟ್ಟಂತೆ ಕಾರ್ಯಕಾರಣ ಮರೆವು ಸಂದರ್ಭಕ್ಕೆ ಅನುಗುಣವಾಗಿ ಸರ್ವೆಸಾಮಾನ್ಯ ಇದಕ್ಕೆ ಉಪಶಮನದ ಅವಶ್ಯಕತೆಯು ಇಲ್ಲಾ. ಇದು ರೋಗವು ಅಲ್ಲ.
ವಿನಾಯಕ ಎಸ್.‌ ನಾಯಕ ಬರೆದ ಪ್ರಬಂಧ ನಿಮ್ಮ ಓದಿಗೆ

read more
“ಹಳೆಯ ಪುಟಗಳಿಂದ…” ಸರಣಿಯಲ್ಲಿ ವೈದೇಹಿ ಬರಹ

“ಹಳೆಯ ಪುಟಗಳಿಂದ…” ಸರಣಿಯಲ್ಲಿ ವೈದೇಹಿ ಬರಹ

ಏನು ಕಾರಣವೋ, ಮದುವೆಯಾಗಿಯೂ ಒಬ್ಬಂಟಿಯಿದ್ದರು. ಬರೆಯುತ್ತಿದ್ದಂತೆ, ಉಸಿರನ್ನು ನಡುನಡುವೆ ಸಶಬ್ದ ಒಳಗೆಳೆದುಕೊಂಡು ಸೇಂಕಿ ಮಾತಾಡುವ ಅವರ ಪರಿ ಅಚ್ಚ ನೆನಪಿನಿಂದ ಹೇಗೆ ಎದ್ದು ಬರುತ್ತಿದೆ! ಹೋಗಲಿ, ಹೊಲಿಗೆ ದುಡ್ಡು ಇಷ್ಟಾಯಿತು ಅಂತ ಹೇಳುವುದರಲ್ಲಾದರೂ ಸಂಕೋಚ ಬಿಡುವರೆ? ಇಲ್ಲ. ಹೇಳಿದ ಮೇಲೆ ಈಗ ಇಟ್ಟುಬಿಡಿ ಅಂತ ಅಂದವರೂ ಅಲ್ಲ. ಸ್ವಲ್ಪ ಕೊಟ್ಟು ಉಳಿದದ್ದು ಎರಡುದಿನ ಬಿಟ್ಟು ಕಳಿಸಿಕೊಡುತ್ತೇನೆ ಎಂದರೆ ‘ಆಯಿತಪ್ಪ, ಅಡ್ಡಿಲ್ಲ ಅಡ್ಡಿಲ್ಲ’. ಕೊಟ್ಟ ದುಡ್ಡನ್ನು ಎದುರೇ ಎಣಿಸಿದವರೂ ಅಲ್ಲ. ನನಗೆ ತಿಳಿದಂತೆ ದುಡ್ಡಿನ ಮಟ್ಟಿಗೆ ಅವರಿಗೆ ಮೋಸಮಾಡಿದ ಮನೆಗಳೂ ಇಲ್ಲ. ಬಿಡಿ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕನ್ನಡದ ಅನುಪಮ ಲೇಖಕಿ ವೈದೇಹಿ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ