Advertisement

ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’. ಅವಳ ಮಾತೊಳಗಿದ್ದ ಗಟ್ಟಿತನಕ್ಕ ಅದೆಂಥಾ ದೊಡ್ಡೊರಾದರೂ ಅಂಜಿಕ್ಯಂತಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಎಂಟನೆಯ ಬರಹ

Loading

ಅಂಕಣ

Latest

ಮನೆಮನೆ ಕೈತೋಟದಲ್ಲಿದೆ ಸಮುದಾಯ ಸೌಖ್ಯ: ಡಾ. ವಿನತೆ ಶರ್ಮ ಅಂಕಣ

ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಸಾಹಿತ್ಯ

ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು. ಬಾಮೈದ ಗಟ್ಟಿಯಾಗಿ ಕೈ ಹಿಡಿದು ತೊಡಿಸಲು ನೋಡಿದಾಗ ಮಂಜ ಇನ್ನೂ ಜೋರಾಗಿ ತಲೆಯನ್ನು ಒದರಿ, ಕೈ ಹಿಂದಕ್ಕೆ ತೆಗೆದುಬಿಟ್ಟ. ಪ್ರವೀಣ್ ಕುಮಾರ್ ಜಿ. ಬರೆದ ಕತೆ "ಈಡು ಜೋಡು" ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಸರಣಿ

ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ. ಡಾ. ಎಸ್.ವಿ. ನರಸಿಂಹನ್‌ ಬರೆಯುವ "ಹಕ್ಕಿಪಕ್ಷಿ ಚಿತ್ರ ಸಂಪುಟ" ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ

ಪ್ರವಾಸ

ತುಂಬಾ ಕುಡಿದರೂ ತಲೆಗೇರದ `ತುಂಬಾ’: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

`ಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ಭಕ್ತರು ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರೇ ಇಲ್ಲಿನ ದೇವರಿಗೆ ನೈವೇದ್ಯ. ಅದನ್ನೇ ಬಂದವರಿಗೆಲ್ಲಾ ತೀರ್ಥವಾಗಿ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಹನ್ನೆರಡನೆಯ ಕಂತು

ಸಂಪಿಗೆ ಸ್ಪೆಷಲ್

ಮಿಸ್ಟರ್‌ ಇಡ್ಲಿಯ ಮನಸಿನ ಮಾತು… : ಗುರುರಾಜ ಕುಲಕರ್ಣಿ ಪ್ರಬಂಧ

ಒಂದು ಕಾಲ್ಪನಿಕ ಸಂದರ್ಭದಲ್ಲಿ ಜಗತ್ತಿನ ಎಲ್ಲರೂ ಅಳಿದು, ಒಬ್ಬನೇ ಮನುಷ್ಯನು ಉಳಿದನೆಂದು ಕಲ್ಪಿಸಿಕೊಳ್ಳಿ. ಅವನಿಗೆ 'ಸರಳ ತಿನಿಸಾದ' ಇಡ್ಲಿಯನ್ನು ತಯಾರಿಸಲು ಸಾಧ್ಯವಾಗುತ್ತದೆಯಾ? ಊಹೂಂ.. ಇಲ್ಲ. ಯಾಕೆಂದರೆ ನನ್ನ ತಯಾರಿಕೆಯ ಪೂರ್ಣ ಚಿತ್ರಣ ಒಬ್ಬನಿಗೂ ಪೂರ್ತಿಯಾಗಿ ತಿಳಿದಿಲ್ಲ. ಎಲ್ಲರಿಗೂ ತಮ್ಮ ಭಾಗ ಮಾತ್ರ ಗೊತ್ತು.. ರೈತನಿಗೆ ಇಡ್ಲಿ ತಟ್ಟೆಯ ತಯಾರಿಕೆ ತಿಳಿದಿಲ್ಲ, ಗಣಿಗಾರನಿಗೆ ಸಾಂಬಾರಿನ ಮಸಾಲೆಯ ಕತೆ ಗೊತ್ತಿಲ್ಲ, ಇಂಧನ ಒದಗಿಸಿದವನಿಗೆ ಹುಳಿಯಾಗುವಿಕೆಯ ವಿಜ್ಞಾನ ತಿಳಿದಿಲ್ಲ. ಕೆಲವರಿಗೆ ಇಡ್ಲಿಯೆಂದರೆ ಏನೆಂದೇ ಗೊತ್ತಿಲ್ಲ! ಈ ಜನರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಾರೆ, ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ, ವಿಭಿನ್ನ ಧರ್ಮಗಳನ್ನು ಪಾಲಿಸುತ್ತಾರೆ. ಗುರುರಾಜ್‌ ಕೆ. ಕುಲಕರ್ಣಿ ಪ್ರಬಂಧ ನಿಮ್ಮ ಓದಿಗೆ

ಈ ದಿನದ ಚಿತ್ರ

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

"ಬೆಂದು ಬೂದಿಯಾಗಿ ಬಿಡಬೇಕೆಂಬ ಜಿದ್ದಿಗೆ ಬೀಳದೆ ನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಕಡುಕಪ್ಪು ಇದ್ದಿಲಿನಂತಾಗುವ ಕಳಂಕವನ್ನು ಸುಲಭದಲ್ಲಿ ಕಳಚಿಕೊಳ್ಳಲಾಗದೆ ಪ್ರೇಮದ ಹೆಸರಲ್ಲಿ ಸುಮ್ಮನೆ ಉರಿಯುತ್ತೇನೆ..!"-ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ “ಈಡು ಜೋಡು”

ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು. ಬಾಮೈದ ಗಟ್ಟಿಯಾಗಿ ಕೈ ಹಿಡಿದು ತೊಡಿಸಲು ನೋಡಿದಾಗ ಮಂಜ ಇನ್ನೂ ಜೋರಾಗಿ ತಲೆಯನ್ನು ಒದರಿ, ಕೈ ಹಿಂದಕ್ಕೆ ತೆಗೆದುಬಿಟ್ಟ. ಪ್ರವೀಣ್ ಕುಮಾರ್ ಜಿ. ಬರೆದ ಕತೆ "ಈಡು ಜೋಡು" ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ