Advertisement

Tag: ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”

Read More

ಡಾ. ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಡಾ. ಸುಭಾಷ್‌ ಪಟ್ಟಾಜೆ ಬರೆದ ಕತೆ “ಗತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ಭಾನುವಾರದ ಕತೆ

ಮಜೀದ್ ಕ್ಯಾಷಲ್‌ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್‌ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ

Read More

ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ

ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ “ಬಲೂನು”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ