Advertisement

Tag: ಕೆಂಡಸಂಪಿಗೆ

ಮೊಬೈಲ್ ಬಂದುದು.‌..: ವಿನಾಯಕ ಅರಳಸುರಳಿ ಅಂಕಣ

ದೂರವಿದ್ದಷ್ಟೂ ನಕ್ಷತ್ರದ ಅಂದ ಜಾಸ್ತಿಯಂತೆ. ಪಕ್ಕದ ಮನೆಯಲ್ಲಿದ್ದಾಗ ಯಕ್ಷಲೋಕದ ಮಾಯಾಗೋಲದಂತೆ ಭಾಸವಾಗುತ್ತಿದ್ದ, ಮರದ ಕೊರಡಿನಲ್ಲಿ ಕೆತ್ತಿ ಆಡುವಂತೆ ಪ್ರೇರೇಪಿಸಿದ್ದ ಮೊಬೈಲು ತನ್ನದೇ ಅಂಗೈಗೆ ಬಂದ ಕೆಲವೇ ದಿನಗಳಲ್ಲಿ ಮರದ ಕೊರಡಿನಷ್ಟೇ ಸಾಮಾನ್ಯ ಸಂಗತಿಯಾಗಿಹೋಯಿತು. ಅದರಲ್ಲಿ ಬರುತ್ತಿದ್ದ ಮೆಸೇಜ್, ಕಾಲ್‌ಗಳ ಜೊತೆ ಆಚೆ ಬದಿಯಿಂದ ಅವನ್ನು ಕಳಿಸುತ್ತಿದ್ದ ವ್ಯಕ್ತಿಗಳೂ ಹಳಸಿಹೋಗಿದ್ದರಿಂದ ಮೊಬೈಲು ಹಳೆಯ ಹೆಂಡತಿ/ಹಳೆಯ ಗಂಡನಂತೆ ತನ್ನಲ್ಲಿನ ಹೊಸತನವನ್ನು ಕಳೆದುಕೊಂಡುಬಿಟ್ಟಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕುಸುಮಾ ಶಾನಭಾಗ ಬರಹ

ಕೊನೆಗೂ ಗಾಂಧೀಜಿ ಗೌರಮ್ಮನಿಗೆ ಕಿತ್ತಳೆ ಹಣ್ಣು ಕೊಟ್ಟು, ಅವರ ಮನೆಗೆ ಬಂದರು. ಗೌರಮ್ಮ ಅವರನ್ನು ಮಣೆಯಿಟ್ಟು ಕೂರಿಸಿದರು. ಇದೆಲ್ಲ ಯಾಕೆಂದು ಗಾಂಧೀಜಿ ಕೇಳಿದರೂ ಅವರು ಉತ್ತರಿಸಲಿಲ್ಲ. ಒಳಗಿನಿಂದ ಒಂದು ಪಾತ್ರೆಯಲ್ಲಿ ತಮ್ಮಲ್ಲಿದ್ದ ಎಲ್ಲಾ ಚಿನ್ನದ ಆಭರಣಗಳನ್ನು ತುಂಬಿಸಿ ತಂದು ಗಾಂಧೀಜಿ ಎದುರಿನಲ್ಲಿಟ್ಟರು. ಆ ಚಿನ್ನವನ್ನು ಹರಿಜನ ಉದ್ಧಾರ ಕಾರ್ಯಕ್ಕೆ ಬಳಸುವಂತೆ ಗಾಂಧೀಜಿಯನ್ನು ಕೇಳಿಕೊಂಡರು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೊಡಗಿನ ಗೌರಮ್ಮನವರ ಕುರಿತು ಕುಸುಮಾ ಶಾನಭಾಗ ಬರಹ

Read More

ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್‌ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

Read More

ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ ಈಕೆ ಮನೆಯಿಂದ ಆಚೆ ಹೋಗಿ ದುಡಿದರೂ ಸಹ ಮನೆಯನ್ನು ನಿಭಾಯಿಸುವುದು ಕೊನೆಗೂ ಈಕೆಯ ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ