ಅಲೆಮಾರಿ ಗುಡಾರಗಳು, ಮುಂಗುಸಿ ಭದ್ರ ಮತ್ತು ಮಂಚಿಗೆ: ಎಸ್. ಗಂಗಾಧರಯ್ಯ ಅನುಭವ ಕಥನ
ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಮೂರನೆಯ ಕಂತು

