Advertisement

Tag: ಕೆಂಡಸಂಪಿಗೆ

ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

ಅನಕೃ ಎಂಬ ಕನ್ನಡದ ಒನಪು! ಜುಲೈ ತಿಂಗಳ ಈ ನೆನಪು: ಎಲ್.ಜಿ.ಮೀರಾ ಅಂಕಣ

ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ

Read More

ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”

ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ಧೋರಣೆಯು ನನಗೇನೂ ಪರಿಣಾಮ ಬೀರದು.
ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ” ನಿಮ್ಮ ಈ ಭಾನುವಾರದ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ