ಕನ್ನಡ ಕವಿಗಳು ಹಚ್ಚಿದ ‘ಕಾವ್ಯದೀಪಾಲಂಕಾರ’ಗಳ ಚಿತ್ತಾರ: ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
ಮಣ್ಣು, ಬೆಳ್ಳಿ, ಬಂಗಾರ ಈ ಮೂರು ವಸ್ತುಗಳು ಭೂಮಿಯಿಂದಲೇ ಬಂದಂತವು. ಈ ವಸ್ತುಗಳು ನಮ್ಮ ಬದುಕಿನ ವಿಕಾಸಕ್ಕೆ ನಾಂದಿ ಹಾಡಬೇಕು. ಆದರೆ ಈ ವಸ್ತುಗಳಿಗಾಗಿ ಮನುಷ್ಯ ತನ್ನ ಮನಸ್ಸನ್ನು ವಿಶಮ ಮಾಡಿಕೊಳ್ಳುತ್ತಾನೆ. ಅದು ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ. ಮಣ್ಣಿನಿಂದ ಹಣತೆ ಇಡೀ ಜಗತ್ತನ್ನು ಬೆಳಗುವಂತೆ ನಮ್ಮ ಸುತ್ತಮುತ್ತಲಿನ ಸಮುದಾಯವನ್ನು ಕೂಡ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಬೇಕೆಂಬ ಸಂದೇಶ ನೀಡುವ ಈ ಕವಿತೆ ಭೂಮಿ ತೂಕದ್ದು. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿಗೆ ಮಣ್ಣು ಜೀವಸತ್ವ ಎಂದು ಸೇರಿಸಬೇಕಾಗಿದೆ.
ಕನ್ನಡ ಕಾವ್ಯದಲ್ಲಿ “ದೀಪಾವಳಿ” ಉಲ್ಲೇಖವಿರುವ ಕವಿತೆಗಳ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ


