ಮಹಾ ಕುಂಭ 2025: ಶ್ರೀಧರ್ ಎಸ್. ಸಿದ್ದಾಪುರ ಪ್ರವಾಸ ಸರಣಿ
ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಾ ಕುಂಭಕ್ಕಾಗಿ ತಮ್ಮ ತಮ್ಮ ಗುರುಗಳ ಆಣತಿಯಂತೆ ಎಲ್ಲಿಂದೆಲ್ಲಾ ಹೊರಟು ಬರೋ ನಾಗಾಗಳು. ಕೆಲವರು ಮೌನಿ, ಕೆಲವರು ವಾಚಾಳಿಗಳು. ಕೆಲವರು ವಿಚಿತ್ರ ನಡವಳಿಕೆಯವರು. ಕೆಲವರು ಕಲ್ಲಂತೆ ಕಠಿಣ ಕೆಲವರು ಸಾಧು, ಸೌಮ್ಯ. ಇಂತಿಪ್ಪ ನಾಗಗಳ ದರುಶನಕ್ಕಾಗಿ ಹೊರಟಿತ್ತು ನಮ್ಮ ದಂಡು. ನಾಗಾಗಳೆಂಬ ವಿಚಿತ್ರ ಸನ್ಯಾಸಿಗಳು ಬೇರೆ ಬೇರೆ ಅಖಾಡಗಳಿಗೆ ಸೇರಿದವರು. ಪೂರ್ಣ ಸಾಧನೆ ಮಾಡಿದವರೆಷ್ಟೋ, ಕೇವಲ ತಾಂತ್ರಿಕ ಸಾಧನೆ ಮಾಡಿದವರೆಷ್ಟೋ. ಯಾವ ಆಲೋಚನೆಗೂ ಕೊನೆ ಮೊದಲಿಲ್ಲ. ಎಲ್ಲಿಂದ ಬಂದವರೋ ಎಲ್ಲಿಗೆ ಹೋಗುವವರೋ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಮಹಾ ಕುಂಭಕ್ಕೆ ಭೇಟಿ ನೀದಿದ್ದರ ಕುರಿತ ಬರಹ ಇಲ್ಲಿದೆ


