ದೊಡ್ಡಹಬ್ಬದ ಬೋರಜ್ಜಿ ಮತ್ತು ಬಲೀಂದ್ರರಾಯ: ಅಕ್ಷತಾ ಕೃಷ್ಣಮೂರ್ತಿ ಬರಹ
ಕುಂಬಾರನಿಂದ ತಂದ ಹೊಸ ಕರಿಗೆಯನ್ನು ಸೇಡಿ ಹಾಗೂ ಕೆಂಪು ಜಾಂಜಿನಿಂದ ಸುಂದರವಾಗಿ ಹಲಿಹೊಯ್ದು, ಹೊಸ ಇರಿಕೆಯ ಮೇಲೆ ತುಲಸಿ ಮನೆಯಲ್ಲಿ ಇಡುತ್ತಾರೆ. ಒಂದು ಕರಿಗೆಗೆ ನೀರು ತುಂಬಿ, ಅದರೊಳಗೆ ಗಿಡಮೂಲಿಕೆಗಳನ್ನು ಹಾಕಿ, ಕರಿಗೆಯ ಬಾಯಿಗೆ ಮಾವಿನ ಕುಡಿಗಳನ್ನಿಟ್ಟು ಅದರ ಮೇಲೆ ಮೊಗೆಕಾಯಿಯಿಟ್ಟು, ಮುಖದಾಕೃತಿ ಬರುವಂತೆ ಕಾಡಿಗೆ ಹಚ್ಚಿ ಬೋರಜ್ಜಿಯನ್ನು ಮಾಡುತ್ತಾರೆ. ಈ ಬೋರಜ್ಜಿ ಬೇರುಬಳ್ಳಿಗಳ ದೇವತೆ. ಬೋರಜ್ಜಿ ಕರಿಗೆಯ ಸುತ್ತ ಬಳ್ಳಿಗಳ ಹಲಿ ಇರಲೇಬೇಕು. ಈ ಬಳ್ಳಿಗಳ ಹಲಿಯೇ ಔಷಧಿಗುಣದ ಬಳ್ಳಿಬೇರುಮರಗಳ ಸಂಕೇತವಾಗಿದೆ.
ದೀಪಗಳ ಹಬ್ಬ ದೀಪಾವಳಿಯಾದ ಇಂದು ದೊಡ್ಡಹಬ್ಬದ ಬೋರಜ್ಜಿ ಮತ್ತು ಬಲೀಂದ್ರರಾಯ ಕುರಿತು ಅಕ್ಷತಾ ಕೃಷ್ಣಮೂರ್ತಿ ಬರಹ


