Advertisement

ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಭಾಷಣ

ಇವತ್ತು ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಬಿರುಬಿಸಿಲ ಹೊತ್ತು ಅವರು ಯಾರೂ ಇಲ್ಲಿ ಇಲ್ಲ. ಆದರೆ ಅವರ ಹಾಗಿರುವ ಹಲವು ಹಾಡುಗಾರರೂ ಇಲ್ಲೇ ಅಕ್ಕಪಕ್ಕ ತೋಟದಲ್ಲಿ ಕೆಲಸ ಮಾಡುತ್ತಿರಬಹುದು. ಅಥವಾ ಅವರ ಜಾಗವನ್ನು ಅಸ್ಸಾಮಿನಿಂದ ಬಂಗಾಳದಿಂದ ಬಂದ ಕೆಲಸಗಾರರು ವಹಿಸಿಕೊಂಡಿರಬಹುದು. ಅವರಲ್ಲೂ ಇಂತಹ ಕಥೆಗಾರರಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಅಸ್ಸಾಮಿನಿಂದ ಜೇನುಪೆಟ್ಟಿಗೆಗಳನ್ನು ಇಡಲು ದಾಸ್ ಎಂಬ ಯುವಕ ಬಂದಿದ್ದ. ಅವನೂ ಆಗ ಬಾಲಕನಾಗಿದ್ದ ನನಗೆ ಕಥೆಗಳನ್ನು ಹೇಳುತ್ತಿದ್ದ. ಈಗ ಬಹುಶಃ ಆತ ಎಲ್ಲಿರಬಹುದೋ ಗೊತ್ತಿಲ್ಲ. ಆದರೆ ಆತ ನನ್ನ ಕಥಾ ಪಾತ್ರವಾದ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದ “ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ”ನ ಅಧ್ಯಕ್ಷರಾದ ಅಬ್ದುಲ್ ರಶೀದ್ ಭಾಷಣ ನಿಮ್ಮ ಓದಿಗೆ

Loading

ಅಂಕಣ

Latest

ಪದವಿರಲಿ ಎದೆಯಲ್ಲಿ, ಪ್ರೀತಿ ಹರಿದೀತು!: ಸುಕನ್ಯಾ ಕನಾರಳ್ಳಿ ಅಂಕಣ

ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ. ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

ಸಾಹಿತ್ಯ

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು. ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ಸರಣಿ

ಒಡಪು ಗೌರಮ್ಮ ಮತ್ತು ಆಕಿ: ಸುವರ್ಣ ಚೆಳ್ಳೂರು ಸರಣಿ

ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು. ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಹನ್ನೊಂದನೆಯ ಬರಹ

ಪ್ರವಾಸ

ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು! ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ರಾಜಸ್ಥಾನದಲ್ಲಿ ಓಡಾಡಿದ ಅನುಭವಗಳ ಕುರಿತ ಬರಹ

ವ್ಯಕ್ತಿ ವಿಶೇಷ

ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಹದಿನೈದನೆಯ ಕಂತು

ಸಂಪಿಗೆ ಸ್ಪೆಷಲ್

“ಹಳೆಯ ಪುಟಗಳಿಂದ…” ಸರಣಿಯಲ್ಲಿ ರಹಮತ್‌ ತರೀಕೆರೆ ಬರಹ

ಆದರೆ ಆ ಕುಣಿತದಲ್ಲಿ ದಲಿತ ತರುಣರು ಭಾಗವಹಿಸಿರಲಿಲ್ಲ. ಕುಣಿಯುವಾಗ ಮೈಕೈ ತಾಗುತ್ತದೆಯೆಂದೇ? ಇಡೀ ಊರು ಒಟ್ಟಾಗಿ ಸಂಭ್ರಮದಿಂದ ಹಬ್ಬ ಆಚರಿಸುತ್ತದೆ ಎಂಬುದು ಅರೆಸತ್ಯವಲ್ಲವೆ? ಊರ ಹೋಟೆಲು, ಗುಡಿಗಳಲ್ಲಿ ಇರುವಂತೆ ಮೊಹರಂ ಮಸೂತಿಯಲ್ಲೂ ಅವರಿಗೆ ಒಳಗಿನತನಕ ಪ್ರವೇಶವಿರಲಿಲ್ಲ. ಒಂದು ಅಂತರದಲ್ಲಿ ನಿಂತು ಎಡೆ ಮಾಡಿಸಿಕೊಂಡು ಹೋಗುತಿದ್ದರು. ಹಿಂದೆ ದಲಿತರು ಹೋಟೆಲುಗಳಲ್ಲಿ ತಮಗೂ ಸರಿಸಮವಾಗಿ ಚಹ ತಿಂಡಿ ಕೊಡಬೇಕೆಂದು ಒತ್ತಾಯಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ನಮಗೆ ಸಮಾನತೆ ಇಲ್ಲದಿದ್ದರೆ, ನಾವು ತಮಟೆ ಬಾರಿಸುವುದಿಲ್ಲ ಎಂದು ಅವರು ನಿರಾಕರಿಸಿದ್ದರಿಂದ, ಬಳ್ಳಾರಿ ಜಿಲ್ಲೆಯ ಮೂವತ್ತಕ್ಕೂ ಹೆಚ್ಚಿನ ಊರುಗಳಲ್ಲಿ ಮೊಹರಂ ಸಂಭ್ರಮ ಕಡಿಮೆಯಾಗಿದೆ. "ಹಳೆಯ ಪುಟಗಳಿಂದ..." ಸರಣಿಯಲ್ಲಿ ರಹಮತ್‌ ತರೀಕೆರೆ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

Verbinden test ಚೈತ್ರಾ ಶಿವಯೋಗಿಮಠ ಅನುವಾದಿಸಿದ ಹಿಂದಿ ಭಾಷಾ ಕವಿ ಅನಾಮಿಕ ಅನು ಎಂಟು ಕವಿತೆಗಳು

"ಎಲೆಗಳಾಗಲು ಬಯಸುವರು ಕಂಡು ಕೇಳರಿಯದ ಮರದ ಎಲೆಯಾಗಲು ಜಾತಿ ಉಪಜಾತಿ ಹೆಸರಿನ ಗೊಡವೆ ಇರದ ಮರಗಳು ಎಲ್ಲೆಂದರಲ್ಲಿ ಪುತಪುತನೆ ತಲೆಯೆತ್ತುವ ಮರಗಳು ಕಸಕಡ್ಡಿ ಕಳೆಯ ಭಯವಿರದ ಮರಗಳು ಯಾರೂ ಬೆಳೆಸಿ ರಕ್ಷಿಸದ ಮರಗಳು ಪೂರ್ಣಾಯುಷ್ಯ ಕಳೆದು ಕೊನೆಗೆ ಮಣ್ಣಲ್ಲಿ ಮಣ್ಣಾಗುವ ಮರಗಳು"- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಹಿಂದಿ ಭಾಷಾ ಕವಿ ಅನಾಮಿಕ ಅನು ಎಂಟು ಕವಿತೆಗಳು

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು. ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ