ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ
ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. ಸಭೆಗಳಲ್ಲಿ ಮಾತ್ರವಲ್ಲದೆ ಜೈಲಿನ ಒಳಗೂ ‘ಪಾಂಚಜನ್ಯ’ ಕವಿತೆ ಕ್ರಾಂತಿಗೀತೆಯಾಗಿ ಕೇಳತೊಡಗಿತು.
“ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ


