ಇರಾನಿನ ಮಕ್ಕಳ ಸ್ವರ್ಗ ಈಗ ಹಿಂದಿಯಲ್ಲಿ: “ಹಳೆಯ ಪುಟಗಳಿಂದ…” ಸರಣಿಯಲ್ಲಿ ವಿಕಾಸ್ ನೇಗಿಲೋಣಿ ಬರಹ
`ಚಿಲ್ಡ್ರನ್ ಆಫ್ ಹೆವನ್’ ಚಿತ್ರವನ್ನು ಇರಾನಿ ಪರಿಸರದ ಹಿನ್ನೆಲೆಯಲ್ಲಿ ಸೃಷ್ಟಿಸಿದಾಗ ಆದ ಪರಿಣಾಮಕ್ಕೂ ಭಾರತದ ಹಿನ್ನೆಲೆಯಲ್ಲಿ ಚಿತ್ರಿಸಿದಾಗ ಆಗುವ ಪರಿಣಾಮಕ್ಕೂ ಬಹಳ ವ್ಯತ್ಯಾಸವಿದೆ. ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಬದುಕುತ್ತಿದ್ದ ಅಣ್ಣ- ತಂಗಿಯರು ಶೂ ಕಳೆದುಕೊಳ್ಳುವುದು ಮತ್ತು ಅಂಥ ಶೂ ಅನ್ನು ತಂಗಿಗೆ ತಂದು ಕೊಡಲು ಅಣ್ಣ ಹರಸಾಹಸ ಪಡುವುದು `ಹೆವನ್’ನ ಕತೆ. ಕತೆ ಸರಳವಾಗಿದ್ದರೂ ಅದು ಹೇಳುವ ಮೌಲ್ಯ, ಬಾಲ್ಯದ ಹತಾಶೆ, ಹತಾಶೆಯ ನಡುವಲ್ಲೂ ಆ ಪಾತ್ರಗಳು ತಮ್ಮ ಮಿತಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ರೀತಿ ಅಸಾಧಾರಣವಾದುದು. ಇಡೀ ಚಿತ್ರದಲ್ಲಿ ವಿಷಾದ ಮೂಲ ದ್ರವ್ಯವೆಂದು ಕಂಡುಬಂದರೂ ನಿಜವಾದ ಸತ್ವವೆಂದರೆ ಜೀವನ ಪ್ರೀತಿ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ವಿಕಾಸ್ ನೇಗಿಲೋಣಿ ಬರಹ


