ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ
ಆವತ್ತು ಸೋಮವಾರ. ಮುರುಡಯ್ಯನವರು ಸ್ನಾನ ಮುಗಿಸಿಕೊಂಡು ಕಾಲುದಾರಿಯನ್ನು ಹತ್ತಿ ಮೇಲೆ ಬರುತ್ತಿದ್ದರು. ‘ಅಂಕದ ಪರದೆ ಜಾರಿದ ಮೇಲೆ, ನಾಟಕವಿನ್ನು ಉಳಿದಿಹುದೇ?’ ಎಂದು ಹಾಡುತ್ತಾ ಮುರುಡಯ್ಯನವರು ಹೆಬ್ಬೆಟ್ಟು ಎಡವಿ ಧೊಪ್ಪೆಂದು ಕೆಳಗೆ ಬಿದ್ದಿದ್ದರು. ಅದನ್ನು ನೋಡಿದ ಕಂಪೆನಿಯ ಕೆಲವರು ಎತ್ತುವುದಕ್ಕೆಂದು ಮುಂದಾದರು. ಆಗ ಮುರುಡಯ್ಯನವರು ಏನೂ ಇಲ್ಲವೆಂಬಂತೆ ತಲೆಯಾಡಿಸುತ್ತಾ, ‘ವಹಿಸಿದ ಪಾತ್ರ ತೀರಿದ ಮೇಲೆ’ ಎಂದಿದ್ದಷ್ಟೇ, ಪ್ರಾಣಪಕ್ಷಿ ಹಾರಿಹೋಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿಮೂರನೆಯ ಕಂತು

