ಚಿತ್ತೂರು ಸುಬ್ಬು ಹೇಳಿದ ಕತೆ: ಕೆ. ಸತ್ಯನಾರಾಯಣ ಕಥಾ ಸರಣಿ
ಚಿತ್ತೂರಿನಲ್ಲಿ ಎರಡು ಬೀದಿಯವರು ಮಾತ್ರ ಚಿತ್ತೂರು ಬಿಟ್ಟು ಇನ್ನೆಲ್ಲಿಗೂ ಹೋಗೋಲ್ಲ. ಇನ್ನು ನಾಲ್ಕು ಜನ್ಮವಾದರೂ ಕೂಡ ಅವರು ಅಲ್ಲೇ ಇರ್ತಾರೆ, ಯಾಕೆ ಗೊತ್ತಾ? ಚಿನ್ನ ಬೆಳ್ಳಿ ಕಳ್ಳರು, ಖದೀಮರು ಅವರು. ಮನೆ ತುಂಬಾ ಕಬ್ಬಿಣದ ಪೆಟ್ಟಿಗೆಗಳು, ನೆಲಮಾಳಿಗೆಗಳು. ಮೂಟೆಗಟ್ಟಲೆ ಚಿನ್ನ, ಬೆಳ್ಳಿ. ಕೃಷ್ಣದೇವರಾಯನ ಕಾಲದಲ್ಲಿ ಸಂಸ್ಥಾನ ಕುಸೀತಿದ್ದಾಗ, ಇನ್ನೇನು ಯುದ್ಧದಲ್ಲಿ ಸೋಲು, ಸಾವು ಗ್ಯಾರಂಟಿ ಅಂತ ಆದಾಗ, ಅರಮನೆಯಲ್ಲಿದ್ದವರು, ಅರಮನೆ ಸಂಪರ್ಕ ಇದ್ದ ಶ್ರೇಷ್ಠಿಗಳೆಲ್ಲ ಕೈಗೆ ಸಿಕ್ಕ, ಕಾಲಿಗೆ ಸಿಕ್ಕ ಚಿನ್ನ, ಬೆಳ್ಳಿ ಎಲ್ಲವನ್ನೂ ಗಾಡಿಮೇಲೆ, ಕುದುರೆ ಮೇಲೆ ಹೊರಿಸಿಕೊಂಡು ಬಂದು ಈ ಕಡೆ ವ್ಯಾಪಾರ, ಜಮೀನು, ಲೇವಾದೇವಿ ಎಲ್ಲವನ್ನೂ ಶುರು ಮಾಡಿಕೊಂಡರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”


