Advertisement

ನೆರೆಹೊರೆಯಾದ ಮಧ್ಯಪ್ರಾಚ್ಯ: ಕೆ. ಸತ್ಯನಾರಾಯಣ ಕಥಾ ಸರಣಿ

ಮಕ್ಕಳಾದ ನಮಗೆ ಇದರಿಂದ ಲಾಭವೂ ಇತ್ತು, ವಿನಾಯಿತಿಯೂ ಇತ್ತು. ನಮ್ಮನ್ನು ಮಾತಿಗೆ ನಿಲ್ಲಿಸಿಕೊಳ್ಳುವವರು ಕೊಬ್ಬರಿ, ಬೆಲ್ಲ, ಪುರಿ ಉಂಡೆ ಕೊಟ್ಟು ಮನೆಯ ಒಳಗೆ ಏನೇನು ಮಾತಕತೆ ನಡೆಯುತ್ತಿದೆ, ಓರಗಿತ್ತಿಯರ ಜಗಳ, ಸಣ್ಣ ವಾಲೆ ಜಜ್ಜಿಸಿ ಇನ್ನೊಬ್ಬ ಓರಗಿತ್ತಿಗೆ ತಿಳಿಯದಂತೆ ದೊಡ್ಡದು ಮಾಡಿಸಿಕೊಳ್ಳುವುದು, ಹೀಗೆ ತಿಳಿದಿರುವುದನ್ನೆಲ್ಲ ನಾವು ಹೇಳುತ್ತಿದ್ದೆವು. ತಿಂಡಿ ಆಸೆ ನಮಗೆ ಗೊತ್ತಿಲ್ಲದಂತೆ, ಗೊತ್ತಿರುವುದಕ್ಕಿಂತ ಜಾಸ್ತಿ ಕತೆ ಹೇಳುತ್ತಿದ್ದೆವು. ಈವತ್ತು ನಾವು ಹಾಗೆ ಹೇಳಿದ ಮಾತು ಮಾರನೇ ದಿವಸವೋ, ಅದರ ಮಾರನೇ ದಿವಸವೋ ಜಗಳದ, ಕದನದ ಪಟ್ಟುಗಳಾಗಿ ಪರಿವರ್ತನೆಯಾಗಿ ಹೊರಬರುತ್ತಿದ್ದವು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Loading

ಅಂಕಣ

Latest

ಆಸ್ಟ್ರೇಲಿಯಾದ ಮತ್ತು ಬೆಂಗಳೂರ ಸಂತೆಗಳು: ವಿನತೆ ಶರ್ಮ ಅಂಕಣ

ಜೀಬೀ ಮತ್ತು ನಾನು ಆಹಾರಖಾದ್ಯಗಳನ್ನು ಸವಿದು ಖುಷಿಪಟ್ಟೆವು. ಕಬ್ಬಿನ ಹಾಲು, ಕರಬೂಜ ಹಣ್ಣಿನ ಪಾನಕ, ನೀರು ಮಜ್ಜಿಗೆ, ಕೋಸಂಬರಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ, ಒಬ್ಬಟ್ಟು, ಎಲ್ಲವೂ ರುಚಿಯಾಗಿತ್ತು. ನಾನು ಆಸೆಪಟ್ಟ ಹಲಸಿನ ಹಣ್ಣು ಸಿಗಲಿಲ್ಲ. ಹಲಸಿನ ತೊಳೆಗಳನ್ನು ಕೊಳ್ಳಲು ಉದ್ದಾನುದ್ದ ಕ್ಯೂ ಇತ್ತು. ನನ್ನ ಸರದಿ ಬರುವಷ್ಟರಲ್ಲಿ ಹಣ್ಣು ಖಾಲಿ. ಮನಸ್ಸಿಗೆ ನಿರಾಸೆಯಾದರೂ, ಅಷ್ಟರಲ್ಲಿ ತುಂಬಿದ್ದ ಹೊಟ್ಟೆಗೇನೂ ನಿರಾಸೆಯಾಗಲಿಲ್ಲ. ಬಹುಕಾಲದ ಬಳಿಕ ತವರಿನಲ್ಲಿ ಸಂತೆಗೆ ಬಂದಿದ್ದು ಖುಷಿಯಾಗಿತ್ತು. ಚಿಕ್ಕದಾದರೂ ರಾಗಿ ಕಣ ಸಂತೆ ಚೊಕ್ಕವಾಗಿತ್ತು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಸಾಹಿತ್ಯ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. ಎಸ್‌. ರಾಮಮೂರ್ತಿ ಬರೆದ ಕತೆ "ಚೆಲುವೆ"

ಸರಣಿ

ಕಪ್ಪೆಂಚಿನ ಕಲ್ಡಿ ಮನೆ, ಕೆಂದೆತ್ತು ಮತ್ತು ಲಾಳ ಕಟ್ಟೋ ರೆಹಮಾನ್ ಸಾಬರು: ಎಸ್. ಗಂಗಾಧರಯ್ಯ ಅನುಭವ ಕಥನ

ಕೆಳಕ್ಕೆ ಬೀಳುತ್ತಲೇ ಎತ್ತೂ ತನ್ನ ಪ್ರತಿರೋಧವನ್ನು ಕಡಿಮೆ ಮಾಡಿತು. ಎತ್ತಿನ ಕಾಲುಗಳನ್ನು ಕಟ್ಟುತ್ತಲೇ ನಾನು ಮತ್ತೆ ಅದರ ಕೊಂಬು ಮತ್ತು ಮೂಗುದಾರಗಳ ಸಹಾಯದಿಂದ ಅದರ ಮೂತಿಯನ್ನು ಅಮುಕಿಕೊಂಡೆ. ಸಾಬರು ತಮ್ಮ ಕೆಲಸವನ್ನು ಶುರು ಮಾಡುತ್ತಲೇ ಮತ್ತೆ ಕೊಸರಾಡತೊಡಗಿತು. ನಾನು ಮೂತಿಯನ್ನು ಎಷ್ಟೇ ಅಮುಕಿಕಂಡರೂ ಅದರ ಅಲುಗಾಟವನ್ನು ಪೂರಾ ನಿಲ್ಲಿಸಲಾಗಲಿಲ್ಲ. ನನಗೂ ಕೈಗಳು ಸೋಲ ಹತ್ತಿದ್ದವು. ಕುಕ್ಕುರುಗಾಲಲ್ಲಿ ಕೂತಿದ್ದರಿಂದ ಕಾಲುಗಳೂ ಪದ ಹೇಳತೊಡಗಿದ್ದವು. ಸಾಬರು ನನ್ನನ್ನು ಎತ್ತಿನ ಮೂತಿನ ಮೇಲೆ ಕೂತು ಅಲುಗಾಡದಂತೆ ಹಿಡುಕೊಳ್ಳುವಂತೆ ಹೇಳಿದರು. ನಾನು ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಚಕ್ಕನೆ ಎತ್ತಿನ ಮೂತಿಯ ಮೇಲೆ ಅತ್ಲಾಗೊಂದು ಇತ್ಲಾಗೊಂದು ಕಾಲುಗಳನ್ನು ಹಾಕಿ ಕೂತೆ. ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತೆರಡನೆಯ ಕಂತು

ಪ್ರವಾಸ

ಕಂಗೆಡಿಸುವ ಕುಲಧಾರಾ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಹಾಲು ಹಾಕಿದರೆ ತನ್ನಷ್ಟಕ್ಕೆ ಮೊಸರಗುವ ಕಲ್ಲಿನ ಪಾತ್ರೆಯೊಂದು ನನ್ನನ್ನು ಅಚ್ಚರಿಗೆ ಕೆಡವಿತು. ನನ್ನ ವೈಜ್ಞಾನಿಕತೆ ಹೆಡೆಯೆತ್ತಿತು. ಅರೆ ನೋಡಿಯೇ ಬಿಡೋಣ ಎನ್ನುತ್ತ ಅದನ್ನು ತಿರುಗಿಸಿ ಮುರುಗಿಸಿ ನೋಡಿ ಮಾರುವಾತನಿಗೆ ನೂರಾರು ಪ್ರಶ್ನಾವಳಿಯ ಮಾಲೆ ಹಾಕಿ ಸುಸ್ತು ಹೊಡೆಸಿ ಕೊನೆಗೂ ಕೊಂಡುಕೊಂಡೆ. ಎಷ್ಟು ಬೈದುಕೊಂಡನೋ? ಮನೆಗೆ ಬಂದವನೆ ಪ್ರಯೋಗ ಮಾಡಿ ನೋಡಿದೆ. ಏನ್‌ ಅಚ್ಚರಿ ರಾತ್ರಿ ಹಾಕಿದ ಹಾಲು ಬೆಳಿಗ್ಗೆ ಮೊಸರಾಗಿತ್ತು. ಶತಮಾನಗಳ ಬ್ಯಾಕ್ಟೀರಿಯಾಗಳು ಇಲ್ಲಿ ದಂಡಿಯಾಗಿ ಸಂಗ್ರಹವಾಗಿ ಹಾಲನ್ನು ಮೊಸರುಮಾಡುತ್ತಿರಬೇಕು ಎಂದ ಗೆಳೆಯನೊಬ್ಬ!! ಬದುಕಿರುವ ಬ್ಯಾಕ್ಟೀರಿಯ ಮಾತ್ರ ಹಾಲನ್ನು ಮೊಸರು ಮಾಡುತ್ತದೆ ಮಾರಾಯ ಎಂದು ಸುಮ್ಮನಾದೆ. ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಚಿದಂಬರ ಜಂಬೆಯವರಿಗೊಂದು ವಿದಾಯ ಪತ್ರ: ಡಾ.ಶ್ರೀಪಾದ ಭಟ್‌ ಬರಹ

ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್‌ ಬರೆದ ಪತ್ರ

ಸಂಪಿಗೆ ಸ್ಪೆಷಲ್

ವಲಸಿಗರ ನಾಡಿನಲ್ಲಿ ಹಾಲೋವಿನ್: ದೇವಿಕಾ ಶೆಟ್ಟಿ ಬರಹ

ಯಾವುದೇ ಆಚರಣೆ ಆರಾಧನೆಯ ಹಿಂದಿನ ಕಾರಣ ಪರಿಣಾಮಗಳನ್ನು ಕೆದಕುವಾಗ ಮನುಷ್ಯ ಅತೀ ಇಂದ್ರಿಯ ಶಕ್ತಿಗಳ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಬದುಕಿಬಾಳುವ ಸ್ವಾಸ್ಥ್ಯಕ್ಕಾಗಿ ಎನ್ನುವ ವಾಸ್ತವ ಅರಿವಾಗುತ್ತದೆ. ಹುಟ್ಟು ಸಾವಿನ ಬಗ್ಗೆ ಇದು ಹೀಗೆ ಎಂದು ಹೇಳಲಾಗದ ಮನುಷ್ಯ ದೈವ ದೇವರ ಸ್ವರೂಪ ನೀಡಿ ಪ್ರಾರ್ಥನೆಯಲ್ಲಿ ಕಂಡ ನೆಮ್ಮದಿಯ ಫಲ ಸ್ವರೂಪಗಳಿವು. ಆದರೆ ಹುಟ್ಟು ಸಾವಿನ ಹಿಂದು ಮುಂದಿನ ಮೂಲವನ್ನು ಕೆದಕುವಾಗ ನನಗೆ ಹುಟ್ಟಿದ ಕುತೂಹಲವಿದು. ಪಾಶ್ಚಿಮಾತ್ಯರು ಆಚರಿಸುವ ಹಾಲೋವಿನ್‌ ಹಬ್ಬದ ಕುರಿತು ದೇವಿಕಾ ನಾಗೇಶ್ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

"ನಿದ್ದೆಗೆ ಜಾರುತ್ತಿರುವ ಗಂಡ ಹೊದಿಕೆ ಸರಿಸಿ ಕಿರುಗಣ್ಣಲ್ಲಿ ಗಮನಿಸಿ ಜಗಳದ ಪುಟ ಅಚಾನಕ್ ತೆರೆಯಬಹುದು! ಓದಿನಲ್ಲಿ ಮುಳುಗಿಹೋಗಿದ್ದ ಮಕ್ಕಳೂ ತಲೆಯೆತ್ತಿ ಮುಖ ಸಿಂಡರಿಸಬಹುದು ನಡುರಾತ್ರಿಯ ನೀರವದಲ್ಲಿ ನೀವು ಕಂಡೂ ಕಾಣದಂತೆ ಚಡಪಡಿಸಿ ಜೀವ ಹಿಡಿಯಾಗಿ ಇಡೀ ದಿನದ ನೆಮ್ಮದಿ ಕಳೆದುಹೋಗಬಹುದು.."- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. ಎಸ್‌. ರಾಮಮೂರ್ತಿ ಬರೆದ ಕತೆ "ಚೆಲುವೆ"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ