ದುಡಿಮೆ, ಬಿಡುವುಗಳ ಸಮೀಕರಣ… ನಮಗೆಂದಾದರೂ ಅರ್ಥವಾದೀತೇ ಹೇಳಣ್ಣ: ಎಲ್.ಜಿ.ಮೀರಾ ಅಂಕಣ
4. ಇಲ್ಲಿ ಇನ್ನೊಂದು ಗಮನೀಯ ವಿಷಯ ಇದೆ ನೋಡಿ. `ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಲೇ ಇರಬೇಕು. ಒಂದೇ ಒಂದು ನಿಮಿಷ ನನಗೆ ಸುಮ್ಮನಿರಲಾಗದು’ ಎನ್ನುವುದು ಸಹ ಆರೋಗ್ಯಕರವಾದ ಆಯ್ಕೆಯೇನಲ್ಲ. ಇಂಥಹ ಮನಃಸ್ಥಿತಿಯ ಜನರು ಮನೆಯವರೊಡನೆಯೋ, ಸ್ನೇಹಿತರೊಡನೆಯೋ ಉದ್ಯಾನವನಕ್ಕೋ, ಪ್ರವಾಸಕ್ಕೋ, ವಿಹಾರಕ್ಕೋ ಹೋದರೂ ಆ ಮನರಂಜನೆಯಲ್ಲಿ ಮನಸ್ಸಿಡಲಾಗದೆ ಒಂದೇ ಸಮ ಚಡಪಡಿಸುತ್ತಿರುತ್ತಾರೆ. ತಾವೂ ನೆಮ್ಮದಿಯಾಗಿರುವುದಿಲ್ಲ, ಉಳಿದವರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. ಇದೂ ಒಂದು ರೀತಿಯ ಅಸ್ವಾಸ್ಥ್ಯ ಅಲ್ಲವೆ? ಬಿಡುವೇ ತೆಗೆದುಕೊಳ್ಳಲು ಅರಿಯದ ಜನ ಇದ್ದಾರೆ. ಯಾವಾಗಲೂ ಓಡಾಡುತ್ತಲೇ, ಇರುವೆಗಳಂತೆ ಏನನ್ನೋ ಮಾಡುತ್ತಲೇ ಇರುವ ಅಭ್ಯಾಸದವರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತಾರನೆಯ ಬರಹ


