ಶರ್ಮಾ ಡಾಕ್ಟರ್, ಯೆಝ್ಡಿ ಬೈಕ್ ಮತ್ತು ಕೊಂಬಿನ ರಾಮಣ್ಣ: ಎಸ್. ಗಂಗಾಧರಯ್ಯ ಅನುಭವ ಕಥನ
ಅವರು ತಂದಿದ್ದ ಮೂಟೆಗಳ ಪೈಕಿ ಒಂದರಲ್ಲಿ ತೆಂಗಿನ ಕಾಯಿ ಉಳಿದವುಗಳಲ್ಲಿ ಧವಸ ಧಾನ್ಯಗಳನ್ನು ತುಂಬಿರುವುದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಬಸ್ಸಿನಲ್ಲಿ ಅಷ್ಟು ಜನವಿರದ ಕಾರಣ ಆ ವ್ಯಕ್ತಿ ಅಷ್ಟೂ ಮೂಟೆಗಳನ್ನು ಹತ್ತುವ ಮತ್ತು ಇಳಿಯುವ ಜನರಿಗೆ ತೊಂದರೆಯಾಗದಂತೆ ಅಲ್ಲಲ್ಲೇ ಸೀಟುಗಳ ಅಡಿಗೆ ತುರುಕಿ ನಂತರ ಕೈಯ್ಯಲ್ಲೊಂದು ಬ್ಯಾಗನ್ನು ಹಿಡಿದು ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತರು. ಹಂಗೇ ಆ ಬ್ಯಾಗಿನತ್ತ ಕಣ್ಣು ಹಾಕಿದ ನನಗೆ ಅದರೊಳಗಿಂದ ಮರದ ಹಿಡಿಯಿದ್ದ ಒಂದೆರಡು ಸಣ್ಣ ಕುಡುಗೋಲಿನಂಥವು, ಕಬ್ಬಿಣವನ್ನು ಕತ್ತರಿಸಲು ಉಪಯೋಗಿಸುವ ಒಂದೆರಡು ಬ್ಲೇಡುಗಳು ಕಂಡವು. ಆ ಹತಾರಗಳನ್ನು ನೋಡುತ್ತಲೇ ನನಗೆ ಅವರು ಮಾಡುತ್ತಿರಬಹುದಾದ ಕಸುಬೂ ಗೊತ್ತಾಗಿ ಹೋಗಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ಮೂರನೆಯ ಕಂತು


