ಅವರ ಮಾತುಗಳಷ್ಟೇ ನಮಗೆ ಗೊತ್ತು, ಮೌನವಲ್ಲ…: ವಿನಾಯಕ ಅರಳಸುರಳಿ ಅಂಕಣ
ಅದೇ ಈಗ ಅರ್ಜುನ್ ವಿಷಯ ಹಾಗಲ್ಲ. ಅವರ ಇನ್’ಸ್ಟಾಗ್ರಾಮ್ ಪೋಸ್ಟ್ ಗಳನ್ನ ನೋಡಿದರೆ ಅದರ ಕೆಳಗೆ ಬರೀ ದ್ವೇಷದ ಕಮೆಂಟ್ಸ್ ಗಳೇ. ಅರ್ಜುನ್ ಅವರ ಪ್ರತೀ ಸೋಲನ್ನೂ ಒಂದು ದೊಡ್ಡ ಗುಂಪು ಆಡಿಕೊಳ್ಳುತ್ತದೆ. ಅವರನ್ನ ಹಾಸ್ಯ ಮಾಡುತ್ತದೆ. ಟ್ರೋಲ್ ಪುಟಗಳು ಅವರನ್ನ ಹೀಯಾಳಿಸಿ ಪೋಸ್ಟ್ ಹಾಕುತ್ತವೆ. ತಮಾಷೆಯೆಂದರೆ ಇವರ ಪೈಕಿ ಬಹಳ ಜನ ತಮ್ಮ ಜೀವನದಲ್ಲಿ ಅರ್ಜುನ್ ಅವರ ಅರ್ಧದಷ್ಟೂ ಸಾಧನೆ ಮಾಡಿರುವುದಿಲ್ಲ. ಅಂಥವರೂ ಕೂಡ ನೀನು ಅಂಥೋನು, ಇಂಥೋನು, ಸಂತೇಲಿ ಮೆಂತೆ ಕದ್ದೋನು ಎಂಬೆಲ್ಲ ಟೀಕೆಗಳನ್ನು ಹರಿಯಬಿಡುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ


