ಟಿ.ಎಮ್. ಕೃಷ್ಣರ ಕೇಳಿದ್ದೀರಾ?: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ
ಮೆತ್ತಗೆ ಹೆಜ್ಜೆ ಇಡುತ್ತಾ ಒಳಗೆ ಹೋದ್ರೆ ಇನ್ನೊಂದು ಬದಿಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ! ನಾನು ಕಂಗಳ ತುಂಬಾ ಬೆರಗು ಹೊತ್ತಿದ್ದನ್ನು ಗಮನಿಸಿದ ಗುರುಗಳು ನನ್ನನ್ನು ಎಂ.ಎಸ್.ಅವರಿಗೆ ಪರಿಚಯಿಸಿದರು. ಬೆಳಿಗ್ಗೆ ಆಕಾಶವಾಣಿಯಲ್ಲಿ ಪ್ರಸಾರವಾದದ್ದನ್ನೇ ಮತ್ತೆ ಹಾಡಲು ಹೇಳಿದರು. ನಾನು ಕೊಂಚ ಹಿಂದೇಟಿನಿಂದಲೇ ಆರಂಭಿಸಿದೆ. ಎಂ.ಎಸ್.ಧ್ವನಿಗೂಡಿಸಿದರು. ಶಮ್ಮಂಗುಡಿಯವರೂ ಜೊತೆ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಮಾಂತ್ರಿಕ ಲೋಕ ನಿರ್ಮಾಣವಾಗಿತ್ತು. ಆದ್ರೆ ದುರಾದೃಷ್ಟವಶಾತ್ ಆ ಜುಗಲ್ ಬಂಧಿಯನ್ನು ರೆಕಾರ್ಡ್ ಮಾಡಿಕೊಳ್ಳಲಿಲ್ಲವಲ್ಲ ಎಂದು ಆ ನಂತರ ಹಲುಬಿದ್ದುಂಟು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ


