ವಲಸಿಗರ ನಾಡಿನಲ್ಲಿ ಹಾಲೋವಿನ್: ದೇವಿಕಾ ಶೆಟ್ಟಿ ಬರಹ
ಯಾವುದೇ ಆಚರಣೆ ಆರಾಧನೆಯ ಹಿಂದಿನ ಕಾರಣ ಪರಿಣಾಮಗಳನ್ನು ಕೆದಕುವಾಗ ಮನುಷ್ಯ ಅತೀ ಇಂದ್ರಿಯ ಶಕ್ತಿಗಳ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಬದುಕಿಬಾಳುವ ಸ್ವಾಸ್ಥ್ಯಕ್ಕಾಗಿ ಎನ್ನುವ ವಾಸ್ತವ ಅರಿವಾಗುತ್ತದೆ. ಹುಟ್ಟು ಸಾವಿನ ಬಗ್ಗೆ ಇದು ಹೀಗೆ ಎಂದು ಹೇಳಲಾಗದ ಮನುಷ್ಯ ದೈವ ದೇವರ ಸ್ವರೂಪ ನೀಡಿ ಪ್ರಾರ್ಥನೆಯಲ್ಲಿ ಕಂಡ ನೆಮ್ಮದಿಯ ಫಲ ಸ್ವರೂಪಗಳಿವು. ಆದರೆ ಹುಟ್ಟು ಸಾವಿನ ಹಿಂದು ಮುಂದಿನ ಮೂಲವನ್ನು ಕೆದಕುವಾಗ ನನಗೆ ಹುಟ್ಟಿದ ಕುತೂಹಲವಿದು. ಎಲ್ಲ ಜಾತಿ, ಮತ, ಧರ್ಮಗಳ ಆಚರಣೆ ಆರಾಧನೆಯ ಪರಂಪರೆಗಳಲ್ಲಿ ಇರುವ ನಂಬಿಕೆಗಳಲ್ಲಿರುವ ಸಾಮ್ಯ ಬೆರಗು ಉಂಟು ಮಾಡುತ್ತದೆ.
ಪಾಶ್ಚಿಮಾತ್ಯರು ಆಚರಿಸುವ ಹಾಲೋವಿನ್ ಹಬ್ಬದ ಕುರಿತು ದೇವಿಕಾ ನಾಗೇಶ್ ಬರಹ


