ಧನ್ವಂತರಿ ಚಿಕಿತ್ಸೆ ಇಂದಿಗೆ ನಡೆಯುವುದೇ?: ಸುಮಾವೀಣಾ ಅಂಕಣ
ಪುರಾಣ ಪ್ರಸಂಗ ಇಲ್ಲಿ ಮನೋರಂಜನೆಯ ಉದ್ದೇಶವಾಗಿಲ್ಲ; ವಾಸ್ತವತೆಯನ್ನು ತೆರೆದಿಡುವುದೇ ಆಗಿದೆ. ಧನ್ವಂತರಿ ಆಯುರ್ವೇದದ ಅಧಿಪತಿ ಅರ್ಥಾತ್ ದೈವವೆಂದೆ ನಮಗೆ ತಿಳಿದಿರುವಂಥದ್ದು. ದೈವಿಕ ಶಕ್ತಿಯೇ ಬಂದು ರೈತನ ಸಮಸ್ಯೆಯನ್ನು ಬಗೆಹರಿಸಿ, ಸಾಮಾಜಿಕ ಸಮಸ್ಯೆಯೊಂದಿಗೆ ಮುಖಾಮಖಿಯಾಗುವ ಪರಿಭಾಷೆ ಅನನ್ಯವಾಗಿದೆ, ರೈತರಲ್ಲಿ ನೈತಿಕತೆಯನ್ನು ಬಲಪಡಿಸುವ, ಅವಶ್ಯಕತೆ ಮತ್ತು ಅಸಾಹಯಕತೆಯನ್ನು ಗುರುತಿಸುವ ನೊಂದ ರೈತನ ಮಾನಸಿಕ ಸ್ಥರವನ್ನು ತಲುಪುವ ಕುವೆಂಪುರವರ ಪ್ರಯತ್ನ ಇಂದಿನ ರಾಜಕೀಯ ಮತ್ತು ಸಮಾಜದ್ದಾಗಬೇಕಾಗಿದೆ. ‘ಬಾಯಂಚಿನಮಾತು ಮಗಿಲಿನ ಕಿವಿಯನ್ನು ಮುಟ್ಟಲೆ ಇಲ್ಲ’ ಎಂಬಂತೆ ಬಡ ರೈತನಕೂಗು ಯಾರಿಗೂ ಕೇಳಿಸುತ್ತಿಲ್ಲ. ನಮ್ಮ ಸಮಾಜದಲ್ಲಿ ಈಗಾಗಲೇ ಆಗಿ ಹೋಗಿರುವ ವೈರುಧ್ಯಗಳನ್ನು ಬುಡಸಹಿತ ತೆಗೆದುಹಾಕುವ ಚಿಕಿತ್ಸೆ ಬೇಕು.
ಸುಮಾವೀಣಾ ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ


