ಪ್ರಶಸ್ತಿಗಳು ಮತ್ತು ಸಮರ..: ಎಚ್. ಗೋಪಾಲಕೃಷ್ಣ ಸರಣಿ
ಇದರ ಜತೆಗೆ ಮತ್ತೊಂದು ವಿಲಕ್ಷಣ ವಾದ ಬೇರೆ ಹುಟ್ಟಿತ್ತು. ಅದೇನು ಅಂದರೆ…. ನಾವು ಇಡೀ ಜೀವಮಾನದಲ್ಲಿ ಒಂದೇ ಒಂದು ಪುಟ ಬರೆಯಲು ಹೆಣಗಾಡಿ ಸುಸ್ತು ಹೊಡೆದು ಹೋಗ್ತೇವೆ. ಈ ಪ್ರಶಸ್ತಿ ಬಹುಮಾನ ಇನ್ನೂ ಏನೇನೋ ಹೊಡೆದು ಕೊಂಡಿರೋರು ಎಂಟು ನೂರು ಸಾವಿರ ಪುಟಗಳ ಹತ್ತು ಹದಿನೈದು ಪುಸ್ತಕ ಬರೆದವೇ ಅಂದರೆ ಅದು ಹೇಗೆ ನಂಬಲಿಕ್ಕೆ ಆಗ್ತದೆ? ಯಾರೋ ಪುಣ್ಯಾತ್ಮ ಹತ್ತು ಸಾಯಿರ ಪುಟ ಬರ್ದವನಂತೆ, ಇದು ನಂಬಲಿಕ್ಕೆ ಆಗ್ತದಾ? ನಮ್ಮವರ ಕೈಲಿ ಬರೆಸಿ ಅವರು ಅವರ ಹೆಸರು ಹಾಕೊಂಡವೆ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೭ನೇ ಬರಹ ನಿಮ್ಮ ಓದಿಗೆ


