ಅಕ್ಷತಾ ಕೃಷ್ಣಮೂರ್ತಿ
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ
10 Postsಅಕ್ಷತಾ ಪಾಂಡವಪುರ
ಪ್ರಶಸ್ತಿ ವಿಜೇತ ಚಿತ್ರನಟಿ ಮತ್ತು ರಂಗಕರ್ಮಿ. ಎನ್ ಎಸ್ ಡಿ ಪದವೀದರೆ. ಊರು ಪಾಂಡವಪುರ.ಇರುವುದು ಬೆಂಗಳೂರು.
3 Postsಅಗ್ರಹಾರ ಕೃಷ್ಣಮೂರ್ತಿ
ತುಮಕೂರಿನ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದ ಅಗ್ರಹಾರ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ‘ನೀರು ಮತ್ತು ಪ್ರೀತಿ’ ಎಂಬ ನವಿರಾದ ಕಾದಂಬರಿ ಬರೆದಿದ್ದಾರೆ. ಬೆಳ್ದಿಂಗ್ಳಪ್ಪನ ಪೂಜೆ ಎಂಬ ಸಂಶೋಧನಾ ಕೃತಿ ಪ್ರಕಟಿಸಿದ್ದಾರೆ. ಕಾಶಿ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ..
2 Postsಅಂಜನಾ ಗಾಂವ್ಕರ್
ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ.
2 Postsಅಂಜನಾ ಹೆಗಡೆ
ಅಂಜನಾ ಹೆಗಡೆ ಮೂಲತಃ ಉತ್ತರ ಕನ್ನಡದವರಾಗಿದ್ದು ಸದ್ಯ ಬೆಂಗಳೂರಲ್ಲಿ ನೆಲೆಸಿದ್ದಾರೆ. 'ಕಾಡ ಕತ್ತಲೆಯ ಮೌನ ಮಾತುಗಳು' ಇವರು ಪ್ರಕಟಿತ ಕವನಸಂಕಲನ. ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ.
1 Postಅಂಜಲಿ ರಾಮಣ್ಣ
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು - ಮನಸ್ಸು ಕೇಳಿ ಪಡೆದದ್ದು’, 'ಜೀನ್ಸ್ ಟಾಕ್' ಇವರ ಲಲಿತ ಪ್ರಬಂಧಗಳ ಸಂಕಲನ.
44 Postsಅನು ಪಾವಂಜೆ
ಮುಂಬಯಿಯಲ್ಲಿ ಬದುಕುತ್ತಿರುವ ಕನ್ನಡ ಕವಯಿತ್ರಿ ಮತ್ತು ಚಿತ್ರ ಕಲಾವಿದೆ. ಹುಟ್ಟೂರು ಮಂಗಳೂರು. ಸಾಂಪ್ರದಾಯಿಕ ಕಲಾ ಪ್ರಾಕಾರದಲ್ಲಿ ವಿಶೇಷ ಆಸಕ್ತಿ.
1 Postಅನುಷ್ ಎ ಶೆಟ್ಟಿ
ಮೈಸೂರಿನಲ್ಲಿ ಬದುಕುತ್ತಿರುವ ತರುಣ ಕಾದಂಬರಿಗಾರ ಮತ್ತು ಸಂಗೀತ ಕಲಾವಿದ. ‘ನೀನು ನನ್ನೊಳಗೆ ಖೈದಿ’ ಇವರ ಇತ್ತೀಚಿನ ಕಾದಂಬರಿ.
1 Postಅಬ್ದುಲ್ ರಶೀದ್
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
96 Postsಅಭಿಷೇಕ್ ವೈ.ಎಸ್.
ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. 'ಕಣ್ಣಿಲ್ಲದ ಕತ್ತಲರಾತ್ರಿ' ಇವರ ಪ್ರಕಟಿತ ಕವನ ಸಂಕಲನ ಕಥೆಗಳನ್ನು ಬರೆಯುವುದು, ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು. ಸಧ್ಯ "ಮಹಿಳಾ ಕಾದಂಬರಿ ಆಧಾರಿತ ಚಲನಚಿತ್ರಗಳು : ಬಹುಮುಖಿ ಚಿಂತನೆ" ಎನ್ನುವ ವಿಷಯದ ಮೇಲೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸುತ್ತಿದ್ದಾರೆ.
9 Postsಅಮಿತಾ ರವಿಕಿರಣ್
ಅಮಿತಾ ರವಿಕಿರಣ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಪ್ರಸ್ತುತ ಉತ್ತರ ಐರ್ಲೆಂಡ್ನ ರಾಜಧಾನಿ ಬೆಲ್ಫಾಸ್ಟ್ನಲ್ಲಿ ವಾಸಿಸುತ್ತಿದ್ದಾರೆ. ಗಾಯಕಿಯಾಗಿರುವ ಅಮಿತಾ ಅವರಿಗೆ ಜನಪದ, ಭಾವಗೀತೆ, ತತ್ವಪದಗಳನ್ನು ಹಾಡುವುದು ಖುಷಿ ಎನ್ನುತ್ತಾರೆ. ಫೋಟೋಗ್ರಫಿ, ಬರವಣಿಗೆ ಇವರ ಮೆಚ್ಚಿನ ಹವ್ಯಾಸಗಳು.
4 Postsಅರವಿಂದ
ಅರವಿಂದ ಮೂಲತಃ ಚಿಕ್ಕಬಳ್ಳಾಪುರದ ಮಾವಿನಕಾಯನಹಳ್ಳಿಯವರು.ಈಗ ಬೆಂಗಳೂರಿನ ರಾಮನ್ ರಿಸರ್ಚ್ ಇನ್ಸ್ಟಿ ಟ್ಯೂಟ್ ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ತಾರ್ಕಿಕವಾಗಿ ಉತ್ತರಿಸಲಾಗದ ಪ್ರಶ್ನೆಗಳು ಎದುರಾದಾಗ ಕಾವ್ಯದ ಮೊರೆ ಹೋಗುತ್ತಾರೆ
1 Postಅರವಿಂದ ಕುಡ್ಲ
ಅರವಿಂದ ಕುಡ್ಲ ವೃತ್ತಿಯಿಂದ ಶಾಲಾ ಶಿಕ್ಷಕರು. ರಂಗಭೂಮಿ, ಫೋಟೋಗ್ರಫಿ, ಓದು, ಶಿಕ್ಷಣ ಮತ್ತು ಚಾರಣ ಇವರ ಆಸಕ್ತಿಯ ವಿಷಯಗಳು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
9 Postsಅರುಣಾ ಜಿ. ಭಟ್, ಬದಿಕೋಡಿ.
<div dir="auto">ಅರುಣಾ ಭಟ್ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಗೃಹಿಣಿ. ಸಾಹಿತ್ಯ ಆಸಕ್ತಿಯ ಪ್ರವೃತ್ತಿ. ಹಲವು ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ಕೊಡಗಿನ ಗೌರಮ್ಮ ದತ್ತಿ ನಿಧಿ" ಪ್ರಶಸ್ತಿಯ ಜೊತೆಗೆ ಹಲವು ಬಹುಮಾನಗಳು ದೊರಕಿವೆ.</div>
2 Postsಅರುಣ್ ಜೋಳದಕೂಡ್ಲಿಗಿ
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)
25 Postsಅಲಕಾ ಕಟ್ಟೆಮನೆ
ಅಲಕಾ ಕಟ್ಟೆಮನೆ ಲೇಖಕಿ , ಪತ್ರಕರ್ತೆ, ಕತೆಗಾರ್ತಿ. ಸಧ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. 'ಶಾಲ್ಮಲೆಯ ಹೊನಲಲ್ಲಿ' ಅವರ ಪ್ರಕಟಿತ ಕಥಾಸಂಕಲನ. ಇವರ ಹಲವಾರು ಕತೆಗಳು ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
1 Postಆಕರ್ಷ ಕಮಲ
ಆಕರ್ಷ ರಮೇಶ್ ಕಮಲ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸದ್ಯಕ್ಕೆ ಉದ್ಯೋಗದ ನಿಮಿತ್ತ ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. `ಗ್ರಾಫಿಟಿ ಹೂವು' (ಕವನ ಸಂಕಲನ), ‘ಬರಿಯ ನೆನಪಲ್ಲ’, ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ (ಅನುಭವ ಕಥನದ ಕನ್ನಡ ಅನುವಾದ) ಇವರ ಪ್ರಕಟಿತ ಕೃತಿಗಳು. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಬರೆಯುತ್ತಾರೆ. ಕಿರುಚಿತ್ರ ನಿರ್ಮಾಣವೂ ಆಕರ್ಷರ ಆಸಕ್ತಿ ಹೊಂದಿರುವ ಇವರು `ಪ್ರೆಸೆಂಟ್ ಸರ್' ಮತ್ತು `ಮರೀಚಿ' ಎಂಬ ಎರಡು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾಮಿಡಿ ಸ್ಕೆಚ್ ವಿಡಿಯೋಗಳ ನಿರ್ಮಾಣ ಮತ್ತು ನಟನೆಯಲ್ಲೂ ಕೂಡ ಆಸಕ್ತಿ ಹೊಂದಿದ್ದಾರೆ.
1 Postಆನಂದ ವಿ. ಪಾಟೀಲ
ಆನಂದ ವಿ. ಪಾಟೀಲರು ಮೂಲತಃ ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದವರು. 'ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ಹಾವು ಹುತ್ತ ಬಿಟ್ಟು ಹೊರಗೆ ಬಂತು' (ಮಕ್ಕಳ ಕವನ ಸಂಕಲನಗಳು), 'ಪುಟ್ಟಕ್ಕನ ಪತ್ರಗಳು', 'ಬೆಳದಿಂಗಳು', 'ಡಂ ಡಂ ಊರಿಗೆ ಡಿಂ ಡಿಂ ಗಾಡಿ', 'ಖಾಲಿ ಕಡ್ಡಿಪೆಟ್ಟಿಗೆ ಮತ್ತು ಬೆಳಕಿಂಡಿ', 'ನನ್ನ ಪ್ರಾಣಿ ಕತೆಗಳು', 'ಮತ್ತೆ ಬಂತು ಚಂಪೂ', 'ಮೂರು ಮೇಲೊಂದು', 'ಹತ್ತು ಹತ್ತು ಇಪ್ಪತ್ತು' (ಗದ್ಯ ಕೃತಿಗಳು) 'ಒಂದು ಎರಡು ಮೂರು ನಾಲ್ಕೂ. ಮಕ್ಕಳಿಗಾಗಿ ನಾಟಕ ಅಷ್ಟೂ' (ಮಕ್ಕಳ ನಾಟಕ), 'ಮಕ್ಕಳ ಸಾಹಿತ್ಯ 2006' (ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ) 'ಮಕ್ಕಳ ಸಾಹಿತ್ಯ ಶತಮಾನ', 'ಹೀಗೇ ಖುಷಿ ಕೊಟ್ಟವು', 'ಹೀಗೇ ಒಂದಿಷ್ಟು ಆಚೀಚೆ', 'ಅಲರು', 'ಮುಗುಳು' (ಮಕ್ಕಳ ಸಾಹಿತ್ಯ ಕುರಿತು) ಇವರ ಪ್ರಕಟಿತ ಕೃತಿಗಳು.
0 Postsಆನಂದ್ ಕುಂಚನೂರ
ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಇವರ ಊರು. ಓದಿದ್ದು ಎಮ್. ಫಾರ್ಮಸಿ. ಸದ್ಯ ಬೆಂಗಳೂರಿನ ಖಾಸಗಿ ಔಷಧಿ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ. ಪ್ರಕಟಿತ ಕೃತಿಗಳು: ಕರಿನೆಲ (ಕವನ ಸಂಕಲನ), ವ್ಯೋಮ ತಂಬೂರಿ ನಾದ (ಕವನ ಸಂಕಲನ) ಮತ್ತು ಪಾದಗಟ್ಟಿ (ಕಥಾ ಸಂಕಲನ).
1 Postಆರ್. ದಿಲೀಪ್ ಕುಮಾರ್
ಆರ್ . ದಿಲೀಪ್ ಕುಮಾರ್ ಮೂಲತಃ ಚಾಮರಾಜನಗರದವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಕಾವ್ಯ ರಚನೆ ಮತ್ತು ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
17 Postsಆರ್. ಪವನ್ ಕುಮಾರ್
ಆರ್. ಪವನ್ ಕುಮಾರ್ ಮೂಲತಃ ಶ್ರೀರಂಗಪಟ್ಟಣದವರು. ಸಿನಿಮಾ ಮತ್ತು ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ಮತ್ತು ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ
1 Postಆರ್. ವಿಜಯರಾಘವನ್
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.
29 Postsಆಲೂರು ದೊಡ್ಡನಿಂಗಪ್ಪ
ಆಲೂರು ದೊಡ್ಡನಿಂಗಪ್ಪ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿ. ಈಗಾಗಲೇ ನೇಕಾರ, ಮುಟ್ಟು, ಎದೆಯ ಹೊಲದಲ್ಲಿ ಸೂರ್ಯಕಾಂತಿ, ಕವನಸಂಕಲನಗಳನ್ನು ಹೊರತಂದಿದ್ದಾರೆ.
1 Postಆಶಾ ಜಗದೀಶ್
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."
64 Postsಇ. ಆರ್. ರಾಮಚಂದ್ರನ್
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ'ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. 'ಅಜ್ಜಿ ಮತ್ತು ಇತರ ಕತೆಗಳು' ಅವರ ಪ್ರಕಟಿತ ಕೃತಿ.
37 Postsಇಸ್ಮಾಯಿಲ್ ತಳಕಲ್
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್ಎಮ್ಎಸ್ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.
11 Postsಉಮಾರಾವ್
ಖ್ಯಾತ ಕಥೆಗಾರ್ತಿ ಮತ್ತು ಅಂಕಣಗಾರ್ತಿ. ಹುಟ್ಟಿದ್ದು ಮತ್ತು ಈಗ ಇರುವುದು ಬೆಂಗಳೂರು. ‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ ಕಥಾ ಸಂಕಲನಗಳು. ‘ನೂರು ಸ್ವರ’ ಕಾದಂಬರಿ. ‘ಮುಂಬೈ ಡೈರಿ’ ಅಂಕಣ ಬರಹಗಳ ಸಂಕಲನ. ‘ರಾಕೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕಥನ. ‘ಬಿಸಿಲು ಕೋಲು', ಖ್ಯಾತ ಸಿನೆಮಾ ಛಾಯಾಗ್ರಾಹಕ ವಿ. ಕೆ ಮೂರ್ತಿಯವರ ಜೀವನ ಚರಿತ್ರೆ.
11 Postsಉಮೇಶ ದೇಸಾಯಿ
ಉಮೇಶ ದೇಸಾಯಿ ವೃತ್ತಿಯಿಂದ ಲೆಕ್ಕಿಗ. ಪ್ರವೃತ್ತಿಯಿಂದ ಲೇಖಕ. ಎರಡು ಕಿರುಕಾದಂಬರಿಗಳು- ‘ಭಿನ್ನ’ ಹಾಗೂ ‘ಅನಂತಯಾನ’ ಪ್ರಕಟವಾಗಿವೆ. ‘ಚೌಕಟ್ಟಿನಾಛೆ’ ಎಂಬ ಕಥಾಸಂಕಲನವೂ ಪ್ರಕಟವಾಗಿದೆ. ‘ಮೈತ್ರಿ ಪ್ರಕಾಶನ’ದ ಮೂಲಕ ಇಲ್ಲಿಯವರೆಗೆ ೧೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
2 Postsಎಂ ಆರ್ ಭಗವತಿ
ಪಕ್ಷಿ ಛಾಯಾಚಿತ್ರಗ್ರಾಹಕಿ ಮತ್ತು ಕವಯಿತ್ರಿ. ವಿಜ್ಞಾನ, ಕಲೆ ವಿಷಯಗಳಲ್ಲೂ ಸಮಾನವಾದ ಆಸಕ್ತಿ. 'ಏಕಾಂತದ ಮಳೆ ಮತ್ತು 'ಚಂಚಲ ನಕ್ಷತ್ರಗಳು’ಪ್ರಕಟಿತ ಕವನ ಸಂಕಲನಗಳು. ಹುಟ್ಟೂರು ಚಿಕ್ಕಮಗಳೂರು. ವಾಸ ಬೆಂಗಳೂರು.
2 Postsಎ. ಎನ್. ಪ್ರಸನ್ನ
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
57 Postsಎಂ.ಆರ್. ದತ್ತಾತ್ರಿ
ಎಂ.ಆರ್. ದತ್ತಾತ್ರಿ ಮೂಲತಃ ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. `ಮಸುಕು ಬೆಟ್ಟದ ದಾರಿ' ಇವರ ಇತ್ತೀಚಿನ ಕಾದಂಬರಿ.
1 Postಎಂ.ಎಸ್. ಪ್ರಕಾಶ್ ಬಾಬು
ಚಿತ್ರ ನಿರ್ದೇಶಕ,ಕಥಾಲೇಖಕ ಮತ್ತು ಕಲಾವಿದ. ‘ಅತ್ತಿಹಣ್ಣು ಮತ್ತು ಕಣಜ’ ಇವರ ಪ್ರಶಸ್ತಿ ವಿಜೇತ ಚಿತ್ರ. ಚಿತ್ರದುರ್ಗ ಹುಟ್ಟೂರು.ಈಗ ಇರುವುದು ಬೆಂಗಳೂರು.
3 Postsಎಂ.ಎಸ್.ಶ್ರೀರಾಂ
ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ, ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ.
14 Postsಎಂ.ಜಿ. ಶುಭಮಂಗಳ
ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ.
9 Postsಎ.ಬಿ. ಪಚ್ಚು ಕುಟ್ಟಿದಪಲ್ಕೆ
ಎ.ಬಿ. ಪಚ್ಚು ಮಂಗಳೂರಿನ ಮೂಡುಬಿದಿರೆಯವರು. ಓದು, ಬರಹ, ಪ್ರವಾಸ, ಚಾರಣ, ಸಿನಿಮಾ ವೀಕ್ಷಣೆ ಹಾಗೂ ವಿಮರ್ಶೆ ಇವರ ಆಸಕ್ತಿಯ ವಿಷಯಗಳು. ಜೊತೆಗೆ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ.
4 Postsಎಚ್ ಆರ್ ರಮೇಶ್
ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.
18 Postsಎಚ್. ಎಸ್. ಮುಕ್ತಾಯಕ್ಕ
ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದ ಕೃತಿಗಳನ್ನು ಎಚ್.ಎಸ್. ಮುಕ್ತಾಯಕ್ಕ ರಚಿಸಿದ್ದಾರೆ. ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
1 Postಎಚ್. ಗೋಪಾಲಕೃಷ್ಣ
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
49 Postsಎಚ್. ಶೇಷಗಿರಿರಾವ್
ಅಪ್ಪಾಜಿ ಎಂದೇ ಪರಿಚಿತರು. ಹಂಪಿಯ ಹತ್ತಿರ ಇವರ ಊರು. ಹಸ್ತಪ್ರತಿ, ಪುರಾತತ್ವ ಪರಿಣಿತರು. ಚಾರಣ, ಓದು, ಬರಹ ನೆಚ್ಚಿನ ಹವ್ಯಾಸ. ನಿವೃತ್ತರಾಗಿ ಒಂದೂವರೆ ದಶಕ.
2 Postsಎಚ್.ಎಲ್. ಪುಷ್ಪ
ಕವಯತ್ರಿ ಎಚ್.ಎಲ್. ಪುಷ್ಪ ಅವರು ಮೂಲತಃ ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯವರು. ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ) ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್ ಕಾವ್ಯ ಪ್ರಶಸ್ತಿ, ಸಾರಂಗಮಠ ಪಾಟೀಲ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.
1 Postಎಚ್.ಎಸ್. ರಾಘವೇಂದ್ರರಾವ್
ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. 'ಹಾಡೆ ಹಾದಿಯ ತೋರಿತು' ಮತ್ತು ‘ತರುತಳೆದ ಪುಷ್ಪ' ಅವರ ಪ್ರಸಿದ್ಧ ಕೃತಿಗಳಲ್ಲಿ ಕೆಲವು.
1 Postಎಚ್.ಎಸ್. ವೆಂಕಟೇಶಮೂರ್ತಿ
ಕನ್ನಡದ ಖ್ಯಾತ ಕವಿಗಳು. ಕಥೆಗಾರರು, ಕಾದಂಬರಿಗಾರರು ಮತ್ತು ಸಾಹಿತ್ಯ ವಿಮರ್ಶಕರೂ ಕೂಡಾ.
1 Postಎಚ್.ವೈ. ರಾಜಗೋಪಾಲ್
ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ'ದ ಸ್ಥಾಪಕ ಸದಸ್ಯರಲ್ಲೊಬ್ಬರು.
6 Postsಎನ್.ಎ.ಮಹಮದ್ ಇಸ್ಮಾಯಿಲ್
ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ನಲ್ಲೂರಿನವರು. ಈಗ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಪತ್ರಕರ್ತ. ಸಾಹಿತ್ಯ, ವಿಜ್ಞಾನ, ಸಿನೆಮಾ, ಅಂತರ್ಜಾಲ, ಧರ್ಮ ಮತ್ತು ರಾಜಕೀಯದ ಕುರಿತು ಖಚಿತವಾಗಿ ಬರೆಯಬಲ್ಲವರು.
1 Postಎನ್.ಎಸ್. ಶಂಕರ್
ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ.ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ‘ಮುಂಗಾರು’ ದಿನಪತ್ರಿಕೆ ಹಾಗೂ ‘ಸುದ್ದಿ ಸಂಗಾತಿ’ ವಾರಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು.
2 Postsಎನ್.ಎಸ್. ಶ್ರೀಧರಮೂರ್ತಿ
ಪತ್ರಕರ್ತ, ಅಂಕಣಕಾರ ಹಾಗೂ ಲೇಖಕ. ಮಲ್ಲಿಗೆ ಮಾಸ ಪತ್ರಿಕೆ, ಮಂಗಳ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಕುರಿತ ಬರವಣಿಗೆಗಳು ಇವರ ವಿಶೇಷ.
2 Postsಎನ್.ಬಿ. ಚಂದ್ರಮೋಹನ್
ಎನ್ ಬಿ ಚಂದ್ರಮೋಹನ್ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದವರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ, ಪದವಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರು. ಬೆಂಗಳೂರಲ್ಲಿ ನೆಲೆಸಿದ್ದಾರೆ.
1 Postಎಸ್. ಗಂಗಾಧರಯ್ಯ
ಕಥೆಗಾರ ಎಸ್. ಗಂಗಾಧರಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ನವಿಲ ನೆಲ, ಒಂದು ಉದ್ದನೆಯ ನೆರಳು (ಕಥಾ ಸಂಕಲನಗಳು), ‘ಬಯಲ ಪರಿಮಳ’ (ವ್ಯಕ್ತಿಚಿತ್ರ ಸಂಪುಟ), ವೈಕಂ ಅವರ ಕಥೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ‘ಆಫ್ರಿಕನ್ ಸಾಹಿತ್ಯವಾಚಿಕೆ’ (ಅನುವಾದಿತ) ಇವರ ಪ್ರಕಟಿತ ಕೃತಿಗಳು.
1 Postಎಸ್. ಜಯಶ್ರೀನಿವಾಸ ರಾವ್
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “<strong><em>ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" </em></strong>(ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.
39 Postsಎಸ್. ನಾಗಶ್ರೀ ಅಜಯ್
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
32 Postsಎಸ್. ಸಿರಾಜ್ ಅಹಮದ್
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು
21 Postsಎಸ್.ಎಂ. ಪೆಜತ್ತಾಯ
ತಮ್ಮ ಜೀವಿತದ ಕೊನೆಯ ಘಟ್ಟದಲ್ಲಿ ಬರೆಯಲು ತೊಡಗಿದ್ದ ವೃತ್ತಿಪರ ರೈತ. ಚಾರಣ, ಪ್ರವಾಸ, ತುಂಬಿದ ನದಿಗಳಲ್ಲಿನ ಈಜು, ಬಂದೂಕು ಗುರಿಕಾರಿಕೆ, ಛಾಯಾಗ್ರಹಣ, ಓದು ಎಲ್ಲದರಲ್ಲೂ ಮುಂದಿದ್ದ ಜೀವನೋತ್ಸಾಹಿ.ಈಗ ನಮ್ಮೊಡನಿಲ್ಲ
3 Postsಎಸ್.ದಿವಾಕರ
ಹಿರಿಯ ಕಥೆಗಾರರು, ಅನುವಾದಕರು ಮತ್ತು ಸಂಪಾದಕರು. ಮಲ್ಲಿಗೆ ಮಾಸ ಪತ್ರಿಕೆಯ ಸಂಪಾದಕರಾಗಿದ್ದವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಮತ್ತನಹಳ್ಳಿ ಹುಟ್ಟಿದ ಊರು. ಈಗ ಬೆಂಗಳೂರಿನಲ್ಲಿದ್ದಾರೆ.
1 Postಎಸ್.ಮಂಜುನಾಥ್
ಅಕಾಲಿಕವಾಗಿ ಅಗಲಿದ ಕನ್ನಡದ ಬಹು ಮುಖ್ಯ ಕವಿ. ಹಕ್ಕಿ ಪಲ್ಟಿ, ಬಾಹುಬಲಿ, ಕಲ್ಲ ಪಾರಿವಾಳಗಳ ಬೇಟ ಇವರ ಮುಖ್ಯ ಸಂಕಲನಗಳು. ಸುಮ್ಮನಿರುವ ಸುಮ್ಮಾನ ಎಂಬುದು ತಾವೋ ಚಿಂತನೆಗಳ ಅನುವಾದ.
3 Postsಓ.ಎಲ್. ನಾಗಭೂಷಣ ಸ್ವಾಮಿ
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.
62 Postsಕಡತೋಕಾ ಗೋಪಾಲಕೃಷ್ಣ ಭಾಗವತ
ಕಡತೋಕಾ ಗೋಪಾಲಕೃಷ್ಣ ಭಾಗವತ. ಉ.ಕ. ಜಿಲ್ಲಾ ಹಳದೀಪುರದ ವಾಸಿ. ಯಕ್ಷಮೀಸಲಾದ ಯಕ್ಷರರಂಗ ಎಂಬ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ನ್ಯಾಯವಾದಿ ಮತ್ತು ಹವ್ಯಾಸಿ ಭಾಗವತ.
2 Postsಕನಕರಾಜು ಬಿ. ಆರನಕಟ್ಟೆ
ಹೊಸ ತಲೆಮಾರಿನ ಕಥೆಗಾರ. ಸಿಲೋನ್ ಸೈಕಲ್ ಇವರ ಇತ್ತೀಚೆಗಿನ ಕಥಾ ಸಂಕಲನ. ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.
3 Postsಕಪಿಲ ಪಿ ಹುಮನಾಬಾದೆ
ಹೆಸರು ಕಪಿಲ ಪಿ ಹುಮನಾಬಾದೆ ಮೂಲತಃ ಬೀದರ್ ನವರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅರ್ಥಶಾಸ್ತ್ರ ವಿದ್ಯಾರ್ಥಿ. ಕಾದಂಬರಿಗಳನ್ನು ಓದುವುದು ಇವರ ಮುಖ್ಯ ಆಸಕ್ತಿ. ಕವಿತೆ, ಕಥೆ ಬರೆಯುವುದು ಇವರ ಹವ್ಯಾಸ.
1 Postಕಲೀಮ್ ಉಲ್ಲಾ
ಶಿವಮೊಗ್ಗೆಯಲ್ಲಿ ಕನ್ನಡದ ಮೇಷ್ಟ್ರು. ಮೂಲತಃ ತರೀಕೆರೆಯವರು. ಉತ್ತಮ ಛಾಯಾಗ್ರಾಹಕರೂ ಕೂಡ. ‘ಕ್ಲಾಸ್ ಟೀಚರ್’ಇವರ ಖ್ಯಾತ ಕೃತಿ.
1 Postಕಲ್ಲೇಶ್ ಕುಂಬಾರ್
ಕಲ್ಲೇಶ್ ಕುಂಬಾರ್ ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರು. ಸಧ್ಯ, ಬಾಗಲಕೋಟ ಜಿಲ್ಲೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಉರಿಯ ನಾಲಗೆಯ ಮೇಲೆ', 'ಉಸುರಿನ ಪರಿಮಳವಿರಲು', 'ನಿಂದ ನಿಲುವಿನ ಘನ' ಇವರ ಪ್ರಕಟಿತ ಕಥಾಸಂಕಲನಗಳು. 'ಪುರುಷ ದಾರಿಯ ಮೇಲೆ' ಕವನಸಂಕಲನದ ಪ್ರಕಟಣೆ.
5 Postsಕವಿತಾ ಹೆಗಡೆ
ಕವಿತಾ ಹೆಗಡೆ ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದವರು. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. "ದ ನೆಸ್ಟೆಡ್ ಲವ್" ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ಮೂರು ಕನ್ನಡ ಕೃತಿಗಳು ಶೀಘ್ರದಲ್ಲಿ ಹೊರಬರಲಿವೆ. ಇಂಗ್ಲಿಷ್ -ಕನ್ನಡ ಕಥೆ ಕವನಗಳ ರಚನೆ ಮತ್ತು ಅನುವಾದದಲ್ಲಿ ಆಸಕ್ತಿ ಹೊಂದಿದ್ದಾರೆ.
3 Postsಕಾ.ಹು. ಚಾನ್ ಪಾಷ
ಕಾ.ಹು. ಚಾನ್ ಪಾಷ ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ, ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ! (ಕಥಾ ಸಂಕಲನ), 3. ಭಲೇ! ಗಿಣಿರಾಮ (ಮಕ್ಕಳ ನಾಟಕ), ಮೂರು ವರಗಳು (ಮಕ್ಕಳ ನಾಟಕ) ಜೊತೆಗೆ ಕೆಲವು ಅನುವಾದಿತ ಕೃತಿಗಳೂ ಪ್ರಕಟಗೊಂಡಿವೆ.
3 Postsಕಾತ್ಯಾಯಿನಿ ಕುಂಜಿಬೆಟ್ಟು
ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿಯ ಕಾಪು ಬಳಿಯ ಕರಂದಾಡಿಯವರು. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತ ತುಳು ಎರಡೂ ಭಾಷೆಯ ಲೇಖಕಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೬ ಕೃತಿಗಳು ಪ್ರಕಟವಾಗಿವೆ.
2 Postsಕಾರ್ತಿಕ್ ಆರ್
ಕಾರ್ತಿಕ್ ಆರ್. ಬೆಂಗಳೂರು ನಿವಾಸಿ, ವೃತ್ತಿಯಿಂದ ಅನುವಾದಕ ಮತ್ತು ಬರಹಗಾರ. ಇವರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ಬುಕ್ ಪೋಸ್ಟ್' ಇವರ ಪ್ರಕಟಿತ ಕಥಾ ಸಂಕಲನ.
1 Postಕಾವ್ಯಾ ಕಡಮೆ
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.
26 Postsಕಾಸಿಂ ನದಾಫ್ ಭೈರಾಪುರ
ಕಾಸಿಂ ನದಾಫ್ ಕೊಪ್ಪಳ ಜಿಲ್ಲೆಯ ಭೈರಾಪುರ ಗ್ರಾಮದವರು. ಪಿಯುಸಿ ತನಕ ವಿದ್ಯಾಬ್ಯಾಸ ಮಾಡಿದ್ದು, ಕತೆ, ಕವನ, ಗಝಲ್, ಮಕ್ಕಳ ಕವಿತೆಗಳನ್ನು ಬರೆಯುತ್ತಾರೆ. "ಮೌನ ಮನದ ಮೃದಂಗ" ಅವರ ಪ್ರಕಟಿತ ಕವನ ಸಂಕಲನ.
1 Postಕಿರಣ ಅಕ್ಕಿ
ಕಿರಣ ಅಕ್ಕಿ ಮೂಲತಃ ಉತ್ತರ ಕರ್ನಾಟಕದ ಗದಗ ಊರಿನವರು. ಎಂಟು ವರ್ಷಗಳಿಂದ ಬೆಂಗಳೂರಿನ ನಿವಾಸಿ. ಐ.ಟಿ ಕಂಪೆನಿಯ ಉದ್ಯೋಗಿ. ಚಿತ್ರಕಲೆ, ಪುಸ್ತಕಗಳು ಹಾಗೂ ಬರವಣಿಗೆ ಇವರ ಹವ್ಯಾಸಗಳು.
1 Postಕಿರಸೂರ ಗಿರಿಯಪ್ಪ
ಕಿರಸೂರ ಗಿರಿಯಪ್ಪ ಮೂಲತಃ ಬಾಗಲಕೋಟ ತಾಲೂಕಿನ ಕಿರಸೂರಿನವರು. ಸದ್ಯ ಸ.ಕಿ.ಪ್ರಾ.ಶಾಲೆ.ಗುಗಲಗಟ್ಟಿˌ ಸುರಪೂರ ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಪತ್ರಿಕೆಗಳ ಕಾವ್ಯ ಸ್ಪರ್ಧೆಗಳಲ್ಲಿ ಹಾಗೂ ದಲಿತ ಯುವ ಕಾವ್ಯ ಪ್ರಶಸ್ತಿ ಮುಂತಾದವುಗಳಲ್ಲಿ ಬಹುಮಾನ ಲಭಿಸಿವೆ. ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ನಾಭಿಯ ಚಿಗುರು(ಕವನಸಂಕಲನ) ಪ್ರಕಟಗೊಂಡಿದ್ದು, 'ಅಲೆವ ನದಿ' ಗಜಲ್ ಸಂಕಲನ ಬಿಡುಗಡೆಯ ಸಿದ್ಧತೆಯಲ್ಲಿದೆ.
1 Postಕೀರ್ತನಾ ಹೆಗಡೆ
ಸದ್ಯ ಜರ್ಮನಿಯಲ್ಲಿರುವ ಕೀರ್ತನಾ ಹೆಗಡೆ ಶಿರಸಿ ಬಳಿಯ ಅಳ್ಳಿಹದ್ದ ಎಂಬ ಪುಟ್ಟ ಹಳ್ಳಿಯವರು. ಓದಿದ್ದು ವಾಣಿಜ್ಯ ಸ್ನಾತಕೋತ್ತರ ಪದವಿ.. ಭಾಷೆ, ಬರವಣಿಗೆ, ಓದು, ಸಾಹಿತ್ಯದಲ್ಲಿ ಒಲವು
1 Postಕುಮಾರ ಬೇಂದ್ರೆ
ಕುಮಾರ ಬೇಂದ್ರೆ 'ಉದಯವಾಣಿ' 'ಸಂಯುಕ್ತ ಕರ್ನಾಟಕ' 'ಗೌರಿ ಲಂಕೇಶ್' ಪತ್ರಿಕೆಗಳಲ್ಲಿ ಹದಿನಾಲ್ಕು ರ್ಷಗಳ ಕಾಲ ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. 'ಮಾದಪ್ಪನ ಸಾವು', 'ಅದೃಶ್ಯ ಲೋಕದ ಮಾಯೆ'. 'ನಿರ್ವಾಣ', 'ಗಾಂಧಿ ವೃತ್ತದ ದಂಗೆ' ಕಥಾ ಸಂಕಲನ, 'ಮನಸೆಂಬ ಮಾಯಾವಿ' ಆಯ್ದ ಕತೆಗಳ ಸಂಕಲನ. 'ಜೋಗವ್ವ', 'ತಲ್ಲಣ', 'ನೆಲೆ', 'ದಾಳಿ' ಕಾದಂಬರಿ ಸೇರಿದಂತೆ ಒಟ್ಟು ಹತ್ತು ಕೃತಿಗಳು ಪ್ರಕಟವಾಗಿವೆ.
5 Postsಕುಸುಮಾ ಶಾನಭಾಗ
ಹಿರಿಯ ಪತ್ರಕರ್ತೆ. ಕಥೆಗಾರ್ತಿ. ‘ನೆನಪುಗಳ ಬೆನ್ನೇರಿ’ ಇವರ ಕಥಾ ಸಂಕಲನ. ‘ಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ.
5 Postsಕೃತಿ ಆರ್ ಪುರಪ್ಪೇಮನೆ
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
21 Postsಕೃಪಾಕರ್ ಸೇನಾನಿ
ಅಂತರಾಷ್ಟ್ರೀಯ ಖ್ಯಾತಿಯ ವನ್ಯ ಛಾಯಾಚಿತ್ರಗ್ರಾಹಕ ಜೋಡಿ.ಬಂಡೀಪುರದ ಕಾಡಿನೊಳಗೆ ಬದುಕುತ್ತ, ಬೆಳೆಯುತ್ತ ಬಂದ ಇವರಿಬ್ಬರದು ಈಗ ಅಂತಾರಾಷ್ಟ್ರೀಯ ಹೆಸರು. ಊರು ಮೈಸೂರು.
1 Postಕೃಷ್ಣ ದೇವಾಂಗಮಠ
ಕೃಷ್ಣ ದೇವಾಂಗಮಠ ಬೆಳಗಾವಿಯ ರಾಮದುರ್ಗದವರು. ಸಿನಿಮಾ ನಿರ್ದೇಶನ ವಿಭಾಗದಲ್ಲಿ ಕೆಲಸ. "ಭಾವಬುತ್ತಿ" ಪ್ರಕಟಿತ ಕವನ ಸಂಕಲನ.
36 Postsಕೃಷ್ಣಪ್ರಕಾಶ್ ಉಳಿತ್ತಾಯ
ಮಂಗಳೂರಿನ ಪೆರ್ಮಂಕಿಯವರಾದ ಕೃಷ್ಣಪ್ರಕಾಶ ಉಳಿತ್ತಾಯ ಉದ್ಯೋಗ ಕರ್ಣಾಟಕ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಗರಿ ಮಾರ್ಗ’ ಮತ್ತು ‘ಸುಘಾತ’ ಅವರ ಪ್ರಕಟಿತ ಕೃತಿಗಳು. ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ, ಯಕ್ಷಗಾನ ನಾಟ್ಯಾಭ್ಯಾಸ, ಮತ್ತು ಮೃದಂಗವಾದನದಲ್ಲಿ ಆಸಕ್ತಿ ಹೊಂದಿದ್ದಾರೆ.
15 Postsಕೆ. ಎನ್. ಲಾವಣ್ಯ ಪ್ರಭಾ
ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್. ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ. "ಹುಟ್ಟಲಿರುವ ನಾಳೆಗಾಗಿ", "ಗೋಡೆಗಿಡ", "ನದಿ ಧ್ಯಾನದಲ್ಲಿದೆ" (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು "ಸ್ಪರ್ಶ ಶಿಲೆ" ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ ಹವ್ಯಾಸಗಳು.
5 Postsಕೆ. ಪ್ರಭಾಕರನ್
ಮಲಯಾಳಂ ಮೂಲದ ಕನ್ನಡಿಗರಾಗಿರುವ ಕೆ. ಪ್ರಭಾಕರನ್ ಕೆಪಿಟಿಸಿಎಲ್ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಮಾಜಶಾಸ್ತ್ರದ ಸ್ನಾತಕೋತ್ತರ ಪದವೀಧರರಾದ ಇವರು ಶಿವಮೊಗ್ಗದ ವಾಸಿ. ಮಲಯಾಳಂನಿಂದ ಎಂಟು ಕೃತಿಗಳು ಹಾಗೂ ಎರಡು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನೇಕ ಅನುವಾದಿತ ಕಥೆಗಳು ಮಯೂರ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
2 Postsಕೆ. ವೈ. ನಾರಾಯಣಸ್ವಾಮಿ
ಕವಿ, ನಾಟಕಕಾರ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿರುವ ಕೆ.ವೈ. ನಾರಾಯಣ ಸ್ವಾಮಿ ಅವರು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಪಂಪಭಾರತ, ಕಳವು, ಅನಭಿಜ್ಞ ಶಾಕುಂತಲ, ಮಳೆಮಾಂತ್ರಿಕ, ಚಕ್ರರತ್ನ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ರಂಗರೂಪಕ್ಕಿಳಿಸಿದವರು. ‘ಶೂದ್ರತಪಸ್ವಿ ಕೃತಿ’ಯನ್ನು ತೆಲುಗಿಗೆ ಅನುವಾದಿಸಿದ್ದಾರೆ. ಸಂಘಟನಾತ್ಮಕ ಚಟುವಟಿಕೆಗಳಲ್ಲಿ, ಸಿನಿಮಾ, ಸಂಗೀತ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.
1 Postಕೆ. ಸತ್ಯನಾರಾಯಣ
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
36 Postsಕೆ.ಆರ್.ಉಮಾದೇವಿ ಉರಾಳ
ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. "ಮುಂಬೆಳಕಿನ ಮಿಂಚು", "ಮಕ್ಕಳಿಗಿದು ಕಥಾ ಸಮಯ", "ಮುಳ್ಳುಬೇಲಿಯ ಹೂಬಳ್ಳಿ", ಬಾನಾಡಿ ಕಂಡ ಬೆಡಗು, "ಗ್ರಾಮ ಚರಿತ್ರ ಕೋಶ" ಇವರ ಪ್ರಕಟಿತ ಕೃತಿಗಳು.
10 Postsಕೆ.ಎಲ್. ಪದ್ಮಿನಿ ಹೆಗಡೆ
ಲೇಖಕಿ ಮತ್ತು ತತ್ತ್ವಶಾಸ್ತ್ರ ಪ್ರಾಧ್ಯಾಪಕಿ. ಮುಖ್ಯ ಪುಸ್ತಕಗಳು: ಗ್ರೀಕ್ ತತ್ತ್ವಶಾಸ್ತ್ರ ಮತ್ತು ಆಧುನಿಕ ವಿಚಾರವಾದ, ತಪಸ್ವಿ, ದಕ್ಷಿಣೇಶ್ವರ, ಧ್ಯಾನ, ನಿವೇದಿತ ಮತ್ತು ಪ್ರಕೃತಿದೈವೈಕ್ಯವಾದ., ಚಿತ್ರದುರ್ಗ ಜಿಲ್ಲೆ ಹೊಳಲಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಈಗ ಮೈಸೂರಿನಲ್ಲಿದ್ದಾರೆ.
1 Postಕೆ.ಎಲ್. ಹೇಮಾವತಿ
ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಹೇಮಾವತಿ ಸದ್ಯ ಗೃಹಿಣಿ. ಪಕ್ಷಿಗಳ ಬಗ್ಗೆ, ಬರವಣಿಗೆ, ಕ್ವಿಜ್ ನಲ್ಲಿ ಆಸಕ್ತಿ.
1 Postಕೆ.ವಿ. ತಿರುಮಲೇಶ್
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.
59 Postsಕೆರೆಮನೆ ಶಿವಾನಂದ ಹೆಗಡೆ
ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರು ಹೊನ್ನಾವರದವರು. ಯಕ್ಷಗಾನದ ದಂತಕತೆಯೆಂದೆ ಪ್ರಸಿದ್ಧರಾದ ಕೆರೆಮನೆ ಶಂಭು ಹೆಗಡೆಯವರ ಮಗ, ಶಿವರಾಮ ಹೆಗಡೆಯವರ ಮೊಮ್ಮಗ... ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದವರು. ಭಾರತದ ಕಲಾಪ್ರಕಾರಗಳ ಕುರಿತು ಉತ್ತಮ ಗ್ರಹಿಕೆ ಇರುವ, ಕೆರೆಮನೆ ಅವರು ಸ್ವತಃ ಯಕ್ಷಗಾನ ಕಲಾವಿದರು. ಬರಹ ಅವರ ಮೆಚ್ಚಿನ ವಿಷಯ
2 Postsಕೇಶವ ಕುಲಕರ್ಣಿ
ಹುಟ್ಟಿ ಬೆಳೆದು ಓದಿದ್ದು ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಮೈಸೂರು. ವೃತ್ತಿಯಿಂದ ವೈದ್ಯ - ರೇಡಿಯಾಲಾಜಿ. ಸಾಹಿತ್ಯ, ಸಂಗೀತ ಮತ್ತು ಸಿನೆಮಾಗಳಲ್ಲಿ ಆಸಕ್ತಿ. ೨೦೦೪ರಿಂದ ಇಂಗ್ಲೆಂಡ್ ನಿವಾಸಿ, ವಾಸ ಇಂಗ್ಲೆಂಡಿನ ಬರ್ಮಿಂಗ್-ಹ್ಯಾಮ್ ನಗರ. ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲೆಂಡ್ ಕನ್ನಡಿಗರ `ಅನಿವಾಸಿ` ಎಂಬ ಜಾಲತಾಣದಲ್ಲಿ ಸಕ್ರಿಯ.
18 Postsಕೋಡಿಬೆಟ್ಟು ರಾಜಲಕ್ಷ್ಮಿ
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.
53 Postsಕೌಶಿಕ್ ಕುಕ್ಕೆಮನೆ
ಕೌಶಿಕ್ ಕುಕ್ಕೆಮನೆ ಧರ್ಮಸ್ಥಳದ ಹತ್ತಿರದ ಪುಟ್ಟದೊಂದು ಹಳ್ಳಿಯವರು. ವಿಜ್ಞಾನ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಸದ್ಯ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದು ಜೈವಿಕ ಗಡಿಯಾರಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
1 Postಕ್ಷಮಾ ವಿ. ಭಾನುಪ್ರಕಾಶ್
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.
2 Postsಕ್ಷಿತಿಜ್ ಬೀದರ್
ಬಸವರಾಜ್ ಮಠಪತಿ, ಕ್ಷಿತಿಜ್ ಬೀದರ್ ಕಾವ್ಯನಾಮದ ಮೂಲಕ ಪರಿಚಿತರು. ಬೀದರ್ ಜಿಲ್ಲೆಯವರಾದ ಇವರು ಕತೆಗಾರರು, ಕಾದಂಬರಿಕಾರರು. ಈಗ ತುಮಕೂರಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಈವರೆಗೆ 36 ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ೧೫ ಕಾದಂಬರಿ, ೯ ಕಥಾಸಂಕಲನ , ೨ ಮಕ್ಕಳ ಕಥಾಸಂಕಲನ, ೩ ರೇಷ್ಮೆ ಉದ್ಯಮ ಮತ್ತು ೭ ಚಿಂತನ ಕೃತಿ ಸೇರಿವೆ.
1 Postಗಜಾನನ ಈಶ್ವರ ಹೆಗಡೆ
ಗಜಾನನ ಈಶ್ವರ ಹೆಗಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರು. ಇವರ ಪ್ರಕಟಿತ ಕೃತಿಗಳು ಶ್ರೀಕಲ್ಪ, ಕವನ ಸಂಕಲನ; ಗುರು, ನೀಳ್ಗವನ; ಸಮಾಜಮುಖಿ, ಗೀತ ನಾಟಕ; ರಸರಾಮಾಯಣ, ಕಾವ್ಯ; ಲೋಕ ಶಂಕರ, ಕಾವ್ಯ. ರಂಗದಲ್ಲಿ ಪ್ರದರ್ಶಿತವಾದ ಗೀತನಾಟಕಗಳು ಶ್ರೀರಾಮ ಚಂದನ, ಶರಣ ಸಂಕುಲ, ಶಿವರಾಗಿಣಿ, ಭವತಾರಿಣಿ. ಹೊಯ್ಸಳ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರ ಕವನ, ಕಥೆ, ವಿಮರ್ಶೆ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ.
1 Postಗಿರಿಜಾ ರೈಕ್ವ
ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.
18 Postsಗಿರಿಜಾ ಶಾಸ್ತ್ರಿ
ಗಿರಿಜಾ ಶಾಸ್ತ್ರಿ ಅವರಿಗೆ ಕವಿತೆ ಮತ್ತು ವಿಮರ್ಶೆ ಬರೆಯುವುದರಲ್ಲಿ ಆಸಕ್ತಿ. ಮುಂಬಯಿ ವಿ.ವಿ.ಯಿಂದ "ಆಧುನಿಕ ಕನ್ನಡ ಕಥಾ ಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ" ವಿಷಯದ ಕುರಿತು ಪಿಎಚ್.ಡಿ. ಮಾಡಿದ್ದಾರೆ. ಇವರ ೭-೮ ಪುಸ್ತಕಗಳು ಪ್ರಕಟವಾಗಿವೆ.
5 Postsಗಿರಿಧರ್ ಗುಂಜಗೋಡು
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
27 Postsಗೀತಾ ಹೆಗಡೆ
ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.
9 Postsಗುರುಗಣೇಶ್ ಭಟ್ ಡಬ್ಗುಳಿ
ಗುರುಗಣೇಶ್ ಉತ್ತರ ಕನ್ನಡದ ಯಲ್ಲಾಪುರದವರು. ಪತ್ರಿಕೋದ್ಯಮ, ಸಾಹಿತ್ಯ, ಪರಿಸರ ಮತ್ತು ಕೃಷಿಯ ವಿದ್ಯಾರ್ಥಿ. ಊರೂರು ಅಲೆದಾಟ ಖುಷಿಯ ಕೆಲಸ. ಓದು, ಬರಹ ಇವರ ಹವ್ಯಾಸಗಳು.
3 Postsಗುರುದತ್ ಅಮೃತಾಪುರ
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್ಸ್ಟೆನ್ಸ್ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
23 Postsಗುರುಪ್ರಸಾದ್ ಕಂಟಲಗೆರೆ
ಗುರುಪ್ರಸಾದ್ ಕಂಟಲಗೆರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನವರು. ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ. ಕಪ್ಪುಕೋಣಗಳು (ಕವನ ಸಂಕಲನ), ಗೋವಿನ ಜಾಡು (ಕಥಾ ಸಂಕಲನ), ಕೆಂಡದ ಬೆಳುದಿಂಗಳು (ಕಥಾ ಸಂಕಲನ), ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ (ಸಂಶೋಧನೆ) ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾ ಪ್ರಶಸ್ತಿ 2019, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ಬಹುಮಾನ, ಗೋವಿನಜಾಡು ಕೃತಿಗೆ ಕೆ.ಸಾಂಬಶಿವಪ್ಪ ಸ್ಮರಣ ರಾಜ್ಯ ಪ್ರಶಸ್ತಿ ದೊರೆತಿದೆ.
18 Postsಗುರುಪ್ರಸಾದ್ ಕಾಗಿನೆಲೆ
ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್ನಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) "ಬಿಳಿಯ ಚಾದರ", 'ಹಿಜಾಬ್" (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು.
11 Postsಗುರುಪ್ರಸಾದ್ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ "ಡ್ರಾಮಾಯಣ" ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.
62 Postsಗೋನವಾರ ಕಿಶನ್ ರಾವ್
ಗೋನವಾರ ಕಿಶನ್ ರಾವ್ ನಿವೃತ್ತ ಕನ್ನಡ ಉಪನ್ಯಾಸಕರು. ಹೈದರಾಬಾದಿನ ನೃಪತುಂಗ ಕನ್ನಡ ವಿದ್ಯಾಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ, ಅನುವಾದ, ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿದ್ದಾರೆ. ಕತೆಗಳು, ವಿಮರ್ಶಾ ಬರಹಗಳು ನಾಟಕಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ. ಝುಕ್ ಝುಕ್ ಭಯ್ಯಾ ತಾಲಮ್ ತಾಲ್ (ಮಕ್ಕಳ ನಾಟಕ), ತೆಲುಗು ವಿಪ್ಲವ ಸಾಹಿತಿ ಶ್ರೀ. ಶ್ರೀ ಯವರ ಮಹಾಪ್ರಸ್ತಾನ ಕವಿತೆಗಳ ಸಮಗ್ರ ಅನುವಾದ, ಕುಮಾತವ್ಯಾಸ ಅಧಾರಿತ ಅಂಕಣ ಬರಹಗಳು "ನುಡಿಕಾರಣ" ಶೀರ್ಷಿಕೆಯಡಿ ನಸುಕು.ಕಾಮ್ ನಲ್ಲಿ ಪ್ರಕಟವಾಗಿವೆ.
1 Postಗೌರಿ ಅದಮ್ಯ
ಗೌರಿ ಅದಮ್ಯ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿ ಓದಿದ್ದಾರೆ. ಸದ್ಯ ಬೆಂಗಳೂರಲ್ಲಿ ಹೆಗ್ಗೋಡು ಪ್ರಸನ್ನ ಅವರೊಟ್ಟಿಗೆ ಗ್ರಾಮ ಸೇವಾ ಸಂಘದಲ್ಲಿ ಕೆಲಸ ಮಾಡುತ್ತಿದ್ದಾರೆ.
1 Postಚಂದ್ರಪ್ರಭ ಕಠಾರಿ
ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನ ಗಾಂಧಿನಗರದಲ್ಲಿ. ಸಿವಿಲ್ ಇಂಜಿನಿಯರ್ ಪದವಿ ಪಡೆದದ್ದು ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಕಾಲೇಜಿನಲ್ಲಿ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಲಹೆಗಾರ ಮತ್ತು ಗುತ್ತಿಗೆದಾರ. ಹವ್ಯಾಸವಾಗಿ ಕತೆ, ಕವನ ಮತ್ತು ನಾಟಕ ರಚನೆ. ಅಂಬು(ನಾಟಕ), ಕಠಾರಿ ಕಥೆಗಳು ಮತ್ತು ಕಾಗೆ ಮೋಕ್ಷ (ಕಥಾ ಸಂಕಲನ), ಅಗೋಚರ ಕೈ (ಕವನ ಸಂಕಲನ).
1 Postಚನ್ನಕೇಶವ
ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುವವರು.
5 Postsಚಾಂದ್ ಪಾಷ ಎನ್. ಎಸ್.
ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. "ಮೌನದ ಮಳೆ", "ಚಿತ್ರ ಚಿಗುರುವ ಹೊತ್ತು" ಮತ್ತು "ಒದ್ದೆಗಣ್ಣಿನ ದೀಪ" ಇವರ ಪ್ರಕಟಿತ ಕವನ ಸಂಕಲನಗಳು
7 Postsಚೇತನಾ ತೀರ್ಥಹಳ್ಳಿ
ಕವಯತ್ರಿ, ಲೇಖಕಿ, ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ. ತೀರ್ಥಹಳ್ಳಿಯವರು. ಈಗ ಬೆಂಗಳೂರು. ಭಾಮಿನಿ ಷಟ್ಪದಿ ಇವರ ಹೆಸರಾಂತ ಅಂಕಣ ಕಾದಂಬರಿ.
1 Postಜಯಂತ ಕಾಯ್ಕಿಣಿ
ಕವಿ, ಕಥೆಗಾರ, ಕನ್ನಡದ ಜನಪ್ರಿಯ ಸಿನೆಮಾ ಗೀತ ರಚನೆಗಾರ. ಮೂಲತ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಈಗ ಇರುವುದು ಬೆಂಗಳೂರು.
4 Postsಜಯರಾಮಚಾರಿ
ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು. ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ. “ಕರಿಮುಗಿಲ ಕಾಡಿನಲಿ" (ಕಥಾ ಸಂಕಲನ), ನನ್ನವ್ವನ ಬಯೋಗ್ರಫಿ ಇವರ ಪ್ರಕಟಿತ ಕೃತಿಗಳು. ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ
4 Postsಜಯಶಂಕರ ಹಲಗೂರು
ಜಯಶಂಕರ ಹಲಗೂರು ಹುಟ್ಟಿದ್ದು ಮಂಡ್ಯ ಮತ್ತು ಮೂಡಸೀಮೆಯ ಹೊಸ್ತಿಲು ಹಲಗೂರಿನಲ್ಲಿ. ಓದಿದ್ದು ಕನಕಪುರ, ಬೆಂಗಳೂರು. ಕಾವ್ಯ ಕಥನ ಹಾಗೂ ವಿಮರ್ಶೆ ಇವರ ಬರಹದ ಹಾದಿಗಳು. ಕರಾವಳಿ ಕಡೆ ಅಲೆಯೋದು, ಮಲೆನಾಡಲ್ಲಿ ಓಡಾಡೋದು ತುಂಬಾ ಇಷ್ಟ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಕಥನ ಸಾಹಿತ್ಯದ ಬಗೆಗೆ ಅಧ್ಯಯನ ನಡೆಸಿ ಡಾಕ್ಟರ್ ಆಫ್ ಫಿಲಾಸಫಿ ಪಡೆದಿರುವ ಇವರು, ಸದ್ಯ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1 Postಜಯಶ್ರೀ ಕಾಸರವಳ್ಳಿ
ಜಯಶ್ರೀ ಕಾಸರವಳ್ಳಿ ಅವರು ಕಾಸರವಳ್ಳಿ ಸಮೀಪದ ಕೇಸಲೂರಿನಲ್ಲಿ 1959ರ ಆಗಸ್ಟ್ 9ರಂದು ಜನಿಸಿದರು. ಶಾಲೆಯಿಂದ ಪದವಿಯವರೆಗಿನ ತಮ್ಮ ವಿದ್ಯಾಬ್ಯಾಸವನ್ನು ಶಿವಮೊಗ್ಗದಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ ಪದವಿಯನ್ನು ಪಡೆದವರು. ತಂತಿ ಬೇಲಿಯ ಒಂಟಿ ಕಾಗೆ, ದಿನಚರಿಯ ಕಡೇ ಪುಟದಿಂದ, ಚಿತ್ರಗುಪ್ತನ ಸನ್ನಿಧಿಯಲ್ಲಿ ಅವರು ಬರೆದ ಪ್ರಮುಖ ಕಥಾಸಂಕಲನಗಳು. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
1 Postಜಿ.ಎನ್. ಅಶೋಕವರ್ಧನ
ಜಿ.ಎನ್.ಅಶೋಕವರ್ಧನ ಮಡಿಕೇರಿ, ಬಳ್ಳಾರಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದವರು. ಯಕ್ಷಗಾನ ಸಿನಿಮಾ, ಸಂಗೀತ, ಪ್ರವಾಸ, ಓದು ಇತ್ಯಾದಿ ಅವರ ಹವ್ಯಾಸಗಳು. ಅವರ ಹಲವಾರು ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ತಾತಾರ್ ಶಿಖರಾರೋಹಣ (1973), ಚಕ್ರವರ್ತಿಗಳು (1990), ಬೆಟ್ಟಗುಡ್ಡಗಳು (1994), ಪುಸ್ತಕ ಮಾರಾಟ ಹೋರಾಟ (1999), ಕುಮಾರ ಪರ್ವತದ ಸುತ್ತಮುತ್ತ (2013), ದ್ವೀಪ ಸಮೂಹದ ಕಥೆ (2011, 2014) ಮತ್ತು ಶಿಲಾರೋಹಿಯ ಕಡತ (2014) ಅವರ ಪ್ರಕಟಿತ ಕೃತಿಗಳು.
1 Postಜೆ.ವಿ.ಕಾರ್ಲೊ
ಕಥೆಗಾರ, ಅನುವಾದಕ, ಕೃಷಿಕ ಮತ್ತು ಕಟ್ಟಡ ನಿರ್ಮಾಣಗಾರ. ಕನ್ನಡ ಮತ್ತು ಕೊಂಕಣಿ ಎರಡು ಭಾಷೆಗಳಲ್ಲೂ ಬರೆಯುತ್ತಾರೆ.'ಗಾಂಧಿಚೆಂ ಪರ್ಜಳಿಕ್ ಪುಢಾರ್ಪೊಣ್' ಎಂಬ ಅನುವಾದಿತ ಕೃತಿಗೆ 2014 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಹುಟ್ಟಿದ್ದು ಸಕಲೇಶಪುರದ ಬಳಿ. ಈಗ ಇರುವುದು ಹಾಸನ.
1 Postಜೆಸ್ಸಿ ಪಿ.ವಿ. ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸವಾಗಿರುವ ಜೆಸ್ಸಿ ಪಿ.ವಿ. ವೃತ್ತಿಯಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನಗಳು, ಮಕ್ಕಳ ಕವನಗಳು ಪ್ರಕಟವಾಗಿವೆ. ಇವರಿಗೆ ಓದು, ಬರೆಹ, ಗಾರ್ಡನಿಂಗ್ ಇಷ್ಟದ ಹವ್ಯಾಸಗಳು.
1 Postಜ್ಯೋತಿ ಭಟ್
ಜ್ಯೋತಿ ಭಟ್ ಮೂಲತಃ ಉತ್ತರಕನ್ನಡದ ಮಂಚೀಕೇರಿ ಸಮೀಪದ ಬೊಮ್ಮನಹಳ್ಳಿಯವರು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದಾರೆ. "ಸಖಿ ಗೀತೆ" ಅಂಕಣ ಬರಹಗಳ ಕೃತಿ. ಪ್ರಸ್ತುತ ಮಹಿಳಾ ಉದ್ಯಮಿ.
2 Postsಟಿ ಕೆ ದಯಾನಂದ
ಕವಿ, ಕಥೆಗಾರ, ಪತ್ರಕರ್ತ,ಅಂಕಣಗಾರ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅಸಮಾನತೆ ಹಾಗೂ ಅನ್ಯಾಯಗಳ ವಿರುದ್ಧದ ಸಾಮಾಜಿಕ ಕಾರ್ಯಕರ್ತ.
1 Postಟಿ.ಎಸ್. ಗೊರವರ
ಟಿ.ಎಸ್. ಗೊರವರ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದ.ರಾ.ಬೇಂದ್ರೆ ಗ್ರಂಥ ಬಹುಮಾನ, ಅರಳು ಪ್ರಶಸ್ತಿ, ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾಸ್ಪರ್ಧೆ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಸದ್ಯ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.
1 Postಟಿ.ಎಸ್. ಗೋಪಾಲ್
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
72 Postsಟಿ.ಜಿ. ಶ್ರೀನಿಧಿ
ಮಾಹಿತಿ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಬರೆಯುವ ಟಿ.ಜಿ. ಶ್ರೀನಿಧಿ ಬಿ.ಇ. ಪದವೀಧರರು. ವಿಜ್ಞಾನ ವಿಷಯಗಳ ಕುರಿತು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಹಾರುವ ಕನಸನು ಕಂಡವರು, ಅಂತರಿಕ್ಷದ ಅದ್ಭುತಗಳು, ಕಂಪ್ಯೂಟರ್ ಕನ್ನಡ ಮತ್ತು ಕೆ.ಪಿ.ರಾವ್ ಎಂಬ ಕೃತಿಗಳು ಸೇರಿದಂತೆ ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿ ಅವರಿಗೆ ಸಂದಿದೆ.
1 Postಡಾ. ಅಜಿತ್ ಹರೀಶಿ
ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು; ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಕೃತಿಕರ್ಷ (ವಿಮರ್ಶಾ ಕೃತಿ) ಕಥಾಭರಣ (ಸಂಪಾದಿತ ಕಥಾಸಂಕಲನ) ಪ್ರಕಟಗೊಂಡಿವೆ. ಇವರ ಕನಸಿನ ದನಿ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ ದೊರೆತಿದೆ.
2 Postsಡಾ. ಅಶೋಕ್ ಕುಮಾರ್
ಶಸ್ತ್ರಚಿಕಿತ್ಸಾ ವೈದ್ಯರಾಗಿರುವ ಡಾ.ಅಶೋಕ್ ಕುಮಾರ್ ಅನುವಾದಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು. ಮಲಯಾಳಂ ಮತ್ತು ತಮಿಳು ಭಾಷೆಗಳಿಂದ ಹಲವು ಅನುವಾದಗಳನ್ನು ಮಾಡಿದ್ದಾರೆ.ತಮ್ಮ ಅನುವಾದಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ವಾಸಿ.
1 Postಡಾ. ಎಂ. ವೆಂಕಟಸ್ವಾಮಿ
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
15 Postsಡಾ. ಎಂ. ವೇದಾಂತ ಏಳಂಜಿ
ಡಾ. ಎಂ.ವೇದಾಂತ ಏಳಂಜಿ ಇವರು ಕನ್ನಡ ವಿಶ್ವವಿದ್ಯಾಲಯ ‘ನವರತ್ನ ರಾಮರಾವ್ ಅವರ ಸಾಹಿತ್ಯಾಧ್ಯಯನ’ ಎಂಬ ವಿಷಯದ ಮೇಲೆ ಎಂ.ಫಿಲ್. ಪದವಿಯನ್ನು ಹಾಗೂ ‘ಕನ್ನಡ ಸಣ್ಣಕಥೆಗಳು: ಕಥನ ಮಾದರಿಗಳ ಅಧ್ಯಯನ’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬಳ್ಳಾರಿಯಲ್ಲಿ ಕನ್ನಡ ಅಧ್ಯಾಪಕರಾಗಿರುವ ಇವರು ಸಾಹಿತ್ಯ, ಸಂಶೋಧನೆ, ಸಂಸ್ಕೃತಿಗಳ ಓದು ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ.
1 Postಡಾ. ಎಚ್ ಎಸ್ ಅನುಪಮಾ
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ.
5 Postsಡಾ. ಕೆ.ಬಿ. ಸೂರ್ಯಕುಮಾರ್
ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. 'ವೈದ್ಯ ಕಂಡ ವಿಸ್ಮಯ' ಅವರು ಬರೆದ ಕೃತಿ.
20 Postsಡಾ. ಗೀತಾ ವಸಂತ
ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.
11 Postsಡಾ. ಚಂದ್ರಮತಿ ಸೋಂದಾ
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
34 Postsಡಾ. ಜಿ. ಎಸ್. ಶಿವಪ್ರಸಾದ್
ಡಾ. ಜಿ.ಎಸ್. ಶಿವಪ್ರಸಾದ್ ವೃತ್ತಿಯಲ್ಲಿ ವೈದ್ಯರು. ಇಂಗ್ಲೆಂಡ್ ನ ಶೆಫ್ಪೀಲ್ಡ್ ನಲ್ಲಿ ನೆಲೆಸಿದ್ದಾರೆ. ಇವರ ಒಂದು ಕವನ ಸಂಕಲನ ಹಾಗೂ ಪ್ರವಾಸ ಕಥನ ಪ್ರಕಟವಾಗಿವೆ.
1 Postಡಾ. ಜ್ಯೋತಿ
ಜ್ಯೋತಿ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
3 Postsಡಾ. ಟಿ.ಎಸ್. ರಮಾನಂದ
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರಾದ ಡಾ. ಟಿ.ಎಸ್. ರಮಾನಂದ ವೃತ್ತಿಯಿಂದ ಪಶುವೈದ್ಯರಾದರೂ ಪ್ರವೃತ್ತಿಯಿಂದ ಲೇಖಕರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತರಾದರು. 'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ' ಇವು ಮೂರು ಪ್ರಕಟಿತ ಕೃತಿಗಳು.
1 Postಡಾ. ನಂದೀಶ್ವರ ದಂಡೆ
ಡಾ. ನಂದೀಶ್ವರ ದಂಡೆ ಹೊಸಪೇಟೆಯವರು. ಸಣ್ಣಕತೆ ಎಂದರೇನು, ಬಸವಣ್ಣ ಇವರ ಸಂಪಾದಿತ ಕೃತಿಗಳು. ಇವರ ಕತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
1 Postಡಾ. ನಾ. ಡಿಸೋಜ
ಹಿರಿಯ ಕಥೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತಿ. ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ಡಾ.ನಾರ್ಬರ್ಟ್ ಡಿಸೋಜ.
2 Postsಡಾ. ನಾ. ದಾಮೋದರ ಶೆಟ್ಟಿ
ಡಾ.ನಾ.ದಾಮೋದರ ಶೆಟ್ಟಿ ನಿವೃತ್ತ ಕನ್ನಡ ಪ್ರಾಧ್ಯಾಪಕ. ರಂಗಭೂಮಿ, ಸಾಹಿತ್ಯರಂಗಗಳಲ್ಲಿ ದುಡಿಮೆ. ಅನುವಾದಕ್ಷೇತ್ರದಲ್ಲೂ ಸಾಧನೆ. ಅನುವಾದಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾಷಾಭಾರತಿ ಸನ್ಮಾನ್ ಪಡೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್ ಗೆ ಭಾಜನರಾಗಿದ್ದಾರೆ. 'ಗೆರೆ' ಇವರ ಇತ್ತೀಚೆಗಿನ ಕಾದಂಬರಿ.
1 Postಡಾ. ನಾ. ಮೊಗಸಾಲೆ
ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ
6 Postsಡಾ. ಬಿ. ಜನಾರ್ದನ ಭಟ್
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
81 Postsಡಾ. ಮಲರ್ ವಿಳಿ
ಡಾ. ಮಲರ್ ವಿಳಿ ಮೂಲತಃ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಪ್ರಸ್ತುತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಾಸ್ತಿ ಮತ್ತು ಪುದುಮೈಪಿತ್ತನ್ ಸಣ್ಣ ಕಥೆಗಳ ಒಂದು ಅಧ್ಯಯನ” ಎಂಬ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಕಳೆದ ಎರಡು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ-ತಮಿಳು ಭಾಷೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. “ವೈರಮುತ್ತುರವರ 33 ಕವಿತೆಗಳು”, “ಒಂಭತ್ತನೆಯ ತಿರುಮುರೈ”,“ಧ್ಯಾನಲಿಂಗ ಗುರು ತಂದ ಗುರು” “ಪುದುಮೈಪಿತ್ತನ್” , ಡಾ. ಸಿದ್ದಲಿಂಗಯ್ಯನವರ “ಕನ್ನಡ ಕವಿಞರ್ ಸಿದ್ಧಲಿಂಗಯ್ಯವಿನ್ ನಾರ್ಪದು ಕನ್ನಡ ಕವಿದೈಗಳ್” ಜೊತೆಗೆ ಇನ್ನೂ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ.
4 Postsಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ
ಮೈತ್ರೇಯಿಣಿ ಗದಿಗೆಪ್ಪಗೌಡರ ಮೂಲತಃ ಹುಬ್ಬಳ್ಳಿಯವರು. ಸದ್ಯ ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕೆಲವು ಹನಿಗವಿತೆ ಮತ್ತಿತರ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
5 Postsಡಾ. ಯು. ಆರ್ ಅನಂತಮೂರ್ತಿ
ಕನ್ನಡದ ಮೇರು ಕಥೆಗಾರ, ಚಿಂತಕ. ಜ್ಞಾನಪೀಠ ಪ್ರಶಸ್ತಿ ವಿಜೇತ ಬರಹಗಾರ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಹುಟ್ಟಿದ್ದು (೧೯೩೨, ಡಿಸೆಂಬರ್ ೨೧) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಎಂಬ ಹಳ್ಳಿಯಲ್ಲಿ.
1 Postಡಾ. ರಾಜಶೇಖರ ಜಮದಂಡಿ
ಕನ್ನಡ ಸಾಹಿತ್ಯ, ಜಾನಪದ ಮತ್ತು ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿರುವ ಡಾ. ರಾಜಶೇಖರ ಜಮದಂಡಿ ಅವರು ಮೂಲತಃ ಜಮದಂಡಿಯವರು. ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಮೈಸೂರಿಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ಅಂಗಳ, ಸರ್ವಜ್ಞನ ವಚನಗಳು ಒಂದು ಜಾನಪದೀಯ ಅಧ್ಯಯನ , ಚಿಂತನಾಂಜಲಿ, ಸಮರ್ಪಣೆ ಮುಂತಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಅವರ ಅಧ್ಯಯನವನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.
2 Postsಡಾ. ರಾಜೇಂದ್ರ ಚೆನ್ನಿ
ರಾಜೇಂದ್ರ ಚೆನ್ನಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ವಿಮರ್ಶಾ ಕೃತಿ ಅಧ್ಯಯನಕ್ಕೆ 1987ರಲ್ಲಿ ಹಾಗೂ ಅಮೂರ್ತತೆ ಮತ್ತು ಪರಿಸರ (ವಿಮರ್ಶೆ-2003) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ದೇಶೀವಾದ (1989), ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ (1989), ಮಾಸ್ತಿ ಕತೆಗಳು: ಒಂದು ಅಧ್ಯಯನ(1991), ದೊಡ್ಡ ಮರ (ಕಥಾ ಸಂಕಲನ-1991), ಕರುಳ ಬಳ್ಳಿಯ ಸೊಲ್ಲು (2011) ನಡುಹಗಲಿನಲ್ಲಿ ಕಂದೀಲುಗಳು (ವಿಮರ್ಶೆ -2004), ಜಾಗತೀಕರಣ: ಒಂದು ಸಮಗ್ರ ಮಂಥನ (ಎಸ್.ಸಿರಾಜ್ ಅಹಮದ್ ಅವರೊಂದಿಗೆ ಸಂಪಾದಿತ) (2014), ಮಳೆಯಲ್ಲಿ ಬಂದಾತ (ಕಥಾ ಸಂಕಲನ-1999), ಇಂಗ್ಲಿಶ್: ಸ್ಟೀಕಿಂಗ್ ಫಾರ್ ಸಮ್ಒನ್ (ವಿಮರ್ಶೆ- 2004, ಆಫ್ ಮೆನಿ ವಲ್ಡ್೯ (ವಿಮರ್ಶೆ- 2007), ಮಡ್ ಟೌನ್ (ಕಾದಂಬರಿ-2007), ಟ್ರೆಡಿಷನ್ಸ್ ಆಫ್ ಮಾಡರ್ನಿಟಿ: ಎ ಕಂಪಾರೇಟೀವ್ ಸ್ಟಡಿಸ್ ಆಫ್ ಟಿ.ಎಸ್. ಎಲಿಯೆಟ್ ಆಂಡ್ ಗೋಪಾಲಕೃಷ್ಣ ಅಡಿಗ (2011) ಇವರ ಪ್ರಮುಖ ಕೃತಿಗಳಾಗಿವೆ.
1 Postಡಾ. ಲಕ್ಷ್ಮಣ ವಿ.ಎ
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
28 Postsಡಾ. ವಿ. ರಾಜೇಂದ್ರ
ಪ್ರಖ್ಯಾತ ಆಯುರ್ವೇದ ವೈದ್ಯರು. ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರು.
1 Postಡಾ. ವಿನತೆ ಶರ್ಮ
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
142 Postsಡಾ. ವಿಶ್ವನಾಥ ಎನ್ ನೇರಳಕಟ್ಟೆ
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
41 Postsಡಾ. ಶ್ರೀಪಾದ ಭಟ್
ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿರುವ ಶ್ರೀಪಾದ ಭಟ್, ಸಂಗೀತ, ಸಾಹಿತ್ಯ, ಶಿಕ್ಷಣ ಮತ್ತು ಜನಪದ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ದೆಹಲಿಯ ಎನ್ ಎಸ್ ಡಿ ಆಯೋಜಿಸಿದ ರಂಗಭಾರತ ಮಹೋತ್ಸವದಲ್ಲಿ ಅವರು ನಿರ್ದೇಶಿಸಿದ ಕರ್ಣಭಾರ ಮತ್ತು ಚಿತ್ರಾ ನಾಟಕ ಪ್ರದರ್ಶನ ಕಂಡಿವೆ. 'ಪಾಪು ಬಾಪು' ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ. ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.
3 Postsಡಾ. ಸದಾಶಿವ ದೊಡಮನಿ
ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, 'ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
3 Postsಡಾ. ಸಿ. ಬಿ. ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
4 Postsಡಾ. ಸುಜಾತ ಲಕ್ಷ್ಮೀಪುರ
ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
6 Postsಡಾ. ಸುದರ್ಶನ ಪಾಟೀಲಕುಲಕರ್ಣಿ
ಡಾ|| ಸುದರ್ಶನ್ ಪಾಟೀಲಕುಲಕರ್ಣಿ, ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಜಿನೀಯರಿಂಗ್ ಪದವಿ ಪಡೆದು, ನಂತರ ಅಮೇರಿಕೆಯ ಓಲ್ಡ್ ಡಾಮಿನಿಯನ್ ವಿಶ್ವ ವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜೆ.ಎಸ್. ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ವಿಜ್ಞಾನದ ಚರಿತ್ರೆ, ವಿಜ್ಞಾನದ ತತ್ವಶಾಸ್ತ್ರ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಇವರ "ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ" ಇ-ಪುಸ್ತಕ ಗೂಗಲ್ ಸ್ಟೋರ್-ನಲ್ಲಿ ಲಭ್ಯವಿದೆ.
1 Postಡಾ. ಸುಧಾ
ಡಾ. ಸುಧಾ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕನ್ನಡಕ್ಕೆ ಅನುವಾದಿಸಿದ ಸಾಮರ್ ಸೆಟ್ ಮಾಮ್, ಮೊಪಾಸಾ ಮತ್ತಿತರ ಹೆಸರಾಂತ ಲೇಖಕರ ಕಥೆಗಳು ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
1 Postಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆ 'ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ' ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. 'ಗೋಡೆ ಮೇಲಿನ ಗೆರೆಗಳು' (ಕಥಾ ಸಂಕಲನ) 'ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್' ಹಾಗೂ 'ಕಥನ ಕಾರಣ' (ಸಂಶೋಧನ ಕೃತಿ) ಇವರ ಪ್ರಕಟಿತ ಕೃತಿಗಳು.
10 Postsಡಾ. ಹರಿಕೃಷ್ಣ ಭರಣ್ಯ
ದಕ್ಷಿಣ ಕನ್ನಡದ, ಪುತ್ತೂರು ತಾಲ್ಲೂಕಿನ ಪಾಣಾಜೆ ಭರಣ್ಯ ಎಂಬಲ್ಲಿ ಜನಿಸಿದ ಡಾ. ಹರಿಕೃಷ್ಣ ಭರಣ್ಯರು (ಜನನ 1951) ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಬಲ್ಲರು. ಸಂಶೋಧನೆ - ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ಭರಣ್ಯರು 'ಮೂಡು ಮಜಲು' ಮತ್ತು 'ಪ್ರತಿಸ್ವರ್ಗ' ಕಾದಂಬರಿಗಳ ಸಹಿತ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ದೊಡ್ಡಜಾಲು ಎಂಬ ಹವಿಗನ್ನಡದ ಪ್ರಥಮ ಕಾದಂಬರಿ ಬರೆದವರು. ನಾಲನೇ ಬುಲೆ ಎಂಬ ತುಳು ಕಾದಂಬರಿ ಬರೆದಿದ್ದಾರೆ. ಬಹುಭಾಷಾ ವಿದ್ವಾಂಸರಾದ ಅವರನ್ನು ಅರಸಿಕೊಂಡು ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ.
1 Postಡಾ.ಎಲ್ .ಸಿ ಸುಮಿತ್ರಾ
ಲೇಖಕಿ ಸುಮಿತ್ರ ಎಲ್.ಸಿ ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ, ಕಾಡು ಕಡಲು, ವಿಭಾವ (ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ) ಹೂ ಹಸಿರಿನ ಮಾತು (ಪಶ್ಚಿಮ ಘಟ್ಟದ ಹೂ ಸಸ್ಯಗಳ ಕುರಿತು) ಇವು ಸುಮಿತ್ರ ಅವರ ಪ್ರಕಟಿತ ಕೃತಿಗಳು.
7 Postsಡಾ.ಕೆ. ಷರೀಫಾ
ಕೆ. ಷರೀಫಾ ಮೂಲತಃ ಗುಲಬರ್ಗಾದವರು. ಬಿಡುಗಡೆಯ ಕವಿತೆಗಳು, ನೂರೇನ್ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು.
1 Postಡಾ.ನಿಂಗಪ್ಪ ಮುದೇನೂರು
ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದವರು ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ ‘ಸೊಂಡೂರು ಕುಮಾರಸ್ವಾಮಿ’, ‘ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು’ ಅವರ ಸಂಶೋಧನಾ ಕೃತಿಗಳು. ‘ಬಿಚ್ಚುಗತ್ತಿಯ ಎದೆಯಲ್ಲಿ’ ಅವರ ನಾಟಕ ಕೃತಿ. ‘ಕಾಡಿನ ಕೊಳಲಿಗೆ ನಾಡಿನ ಸ್ವರ’ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.
1 Postಡಾ.ಪ್ರೇಮಲತ
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
33 Postsಡಾ.ರಾಜೇಂದ್ರ ಚೆನ್ನಿ
ಕನ್ನಡದ ಪ್ರಮುಖ ವಿಮರ್ಶಕರು ಮತ್ತು ಕಥೆಗಾರರು. ‘ನಡುಹಗಲಿನಲ್ಲಿ ಕಂದೀಲುಗಳು’ ಇವರ ವಿಮರ್ಶೆಗಳ ಸಂಕಲನ. ‘ಮಡ್ ಟೌನ್’ ಇಂಗ್ಲಿಷ್ ಕಾದಂಬರಿ. ಧಾರವಾಡ ಹುಟ್ಟೂರು. ಇರುವುದು ಶಿವಮೊಗ್ಗ. ನಿವೃತ್ತ ಇಂಗ್ಲಿಷ್ ಪ್ರಾದ್ಯಾಪಕರು.
5 Postsಡಿ.ಎಮ್. ನದಾಫ್
ಡಿ.ಎಮ್ ನದಾಫ್, ಕಲಬುರಗಿ ಜಿಲ್ಲೆಯ ಅಫಜಲಪುರದ ಮಾತೋಳಿ ಗ್ರಾಮದವರು. ಪ್ರೌಢಶಾಲಾ ಅಧ್ಯಾಪಕರಾಗಿದ್ದು, ಎರಡು ಕವನ ಸಂಕಲನ ಮತ್ತು ಅಫಜಲಪುರ ದರ್ಶನ (ಸ್ಥಳಪರಿಚಯ) ಪುಸ್ತಕ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ.
1 Postಡಿ.ವಿ. ಪ್ರಹ್ಲಾದ್
ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. 'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ' - ಪ್ರಕಟಿತ ಕವನ ಸಂಕಲನ. 'ಅನುದಿನವಿದ್ದು' (ಅಗಲಿದ ಲೇಖಕರ ನೆನಪುಗಳ ಸಂಗ್ರಹ) ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು', 'ಬಗೆ ತೆರೆದ ಬಾನು' (ಸಾಹಿತಿಗಳ ಸಂದರ್ಶನ ಸಂಕಲನ), 'ಮುಕ್ತ ಛಂದ'- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದರು.
2 Postsತೇಜ ಎಸ್. ಬಿ.
ತೇಜ ಎಸ್. ಬಿ. ಚನ್ನಪಟ್ಟಣದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ. ಎ ಐಚ್ಚಿಕ ಕನ್ನಡ ವ್ಯಾಸಂಗ ಮಾಡುತ್ತಿದ್ದಾರೆ. ಓದು-ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ.
1 Postತೇಜಾವತಿ ಎಚ್ ಡಿ
ತೇಜಾವತಿ ಎಚ್ ಡಿ ತುಮಕೂರು ಜಿಲ್ಲೆಯ ಹುಳಿಯಾರಿನವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲಚಕ್ರ (2019), ಮಿನುಗುವ ತಾರೆ (2019), ಬಾ ಭವಿಷ್ಯದ ನಕ್ಷತ್ರಗಳಾಗೋಣ (2021) ಇವರ ಪ್ರಕಟಿತ ಕೃತಿಗಳು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಸಿರಿ ಕಾವ್ಯ ಪ್ರಶಸ್ತಿ ಲಭಿಸಿವೆ.
4 Postsದಯಾ ಗಂಗನಘಟ್ಟ
ದಯಾ ಗಂಗನಘಟ್ಟ ( ದಾಕ್ಷಾಯಿಣಿ ) ಬೆಂಗಳೂರು ನಿವಾಸಿ. ಪ್ರಸ್ತುತ 'ಜೇನುಗಿರಿ ' ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ
1 Postದಯಾನಂದ ಸಾಲ್ಯಾನ್
ಮುಂಬೈ ನಿವಾಸಿಯಾಗಿರುವ ದಯಾನಂದ ಸಾಲ್ಯಾನ್ ಅವರು ಕವಿಯಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. 'ಜಾತ್ರೆಯ ಮರುದಿನ' ಕವನ ಸಂಕಲನ, ಪೊಸ ಬೊಲ್ಪು ತುಳು ಕವಿತೆಗಳು, ' ಒಸರ್' ತುಳು ನಾಟಕ, ಪಾಟಕ್ ಮತ್ತು ಇತರ ಕತೆಗಳು, ಇವರ ಪ್ರಕಟಿತ ಕೃತಿಗಳು. 'ಸುರಭಿ' ಸುರೇಶ್ ಭಂಡಾರಿಯವರ ಅಭಿನಂದನ ಗ್ರಂಥ ಸಂಪಾದನೆ ಮಾಡಿದ್ದು ಇವರ ಕವಿತೆಗಳಿಗೆ ಸಂಕ್ರಮಣ ಬಹುಮಾನ ಪಡೆದಿದ್ದಾರೆ.
1 Postದರ್ಶನ್ ಜೆ
ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ ( ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. "ಪದ್ಯ ಸಿಕ್ಕಿತು" ಇವರ ಚೊಚ್ಚಲ ಕವನ ಸಂಕಲನ.
2 Postsದಾದಾಪೀರ್ ಜೈಮನ್
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ 'ಪರ್ದಾ & ಪಾಲಿಗಮಿ' ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ 'ಬ್ಯಾರೆನ್ ಲ್ಯಾಂಡ್' ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.
25 Postsದೀಪಾ ಫಡ್ಕೆ
ದೀಪಾ ಫಡ್ಕೆ ಬೆಂಗಳೂರು ನಿವಾಸಿ. ಹರಿದಾಸ ಸಾಹಿತ್ಯದಲ್ಲಿ ಅಧ್ಯಯನ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ದೀಪಾ ಚಂದನ ಮತ್ತು ಉದಯ ಟಿವಿಯಲ್ಲಿ ಹಲವು ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.
6 Postsದೀಪ್ತಿ ಶ್ರೀಹರ್ಷ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ಈಗ ಭದ್ರಾವತಿಯಲ್ಲಿದ್ದಾರೆ. "ಅಹಲ್ಯೆಯ ಸ್ವಗತ" ಇವರ ಹೆಸರಾಂತ ಕವನ ಸಂಕಲನ.
2 Postsದೇವನೂರ ಮಹಾದೇವ
ಕನ್ನಡದ ಅಪ್ರತಿಮ ಬರಹಗಾರ, ಚಿಂತಕ, ಸಂಘಟಕ, ಹೋರಾಟಗಾರ. ದ್ಯಾವನೂರು (ಕಥಾಸಂಕಲನ), ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ದೇವನೂರರ ಪ್ರಕಟಿತ ಕೃತಿಗಳು.
6 Postsದೇವಿಕಾ ನಾಗೇಶ್
ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.
2 Postsದೇವೇಂದ್ರ ಅಬ್ಬಿಗೇರಿ
ದೇವೇಂದ್ರ ಅಬ್ಬಿಗೇರಿ ಮೂಲತಃ ಕೊಪ್ಪಳ ಜಿಲ್ಲೆಯವರು. ೨೦೧೧ ಸಾಲಿನ ಕೇಂದ್ರೀಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, Indian Audit & Accounts Department ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2 Postsಧನಪಾಲ ನಾಗರಾಜಪ್ಪ
ಧನಪಾಲ ನಾಗರಾಜಪ್ಪ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಯಾಗಿರುವ ಇವರು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿ, ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ) ಕಾಡುವ ಕಥೆಗಳು (ಸಲೀಂ ಅವರ ತೆಲುಗು ಕಥೆಗಳ ಅನುವಾದ) ತಣ್ಣೀರ ಬಟ್ಟೆಯ ಬಿಸಿ (ಆಯ್ದ ತೆಲುಗು ಕಥೆಗಳ ಅನುವಾದ), ಜೀವನ್ಮೃತರು (ಅನುವಾದಿತ ಕಾದಂಬರಿ ), ಮೇಧ-017 (ಅನುವಾದಿತ ಕಾದಂಬರಿ), ಅಪರಾಜಿತ (ಅನುವಾದಿತ ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು
1 Postನಂದಿನಿ ಹೆದ್ದುರ್ಗ
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
4 Postsನದೀಮ್ ಸನದಿ
ನದೀಮ್ ಸನದಿ ಬೆಳಗಾವಿಯ ಶಿಂದೊಳ್ಳಿಯವರು. ವೃತ್ತಿಯಿಂದ ಅಭಿಯಂತರರಾಗಿದ್ದು ಸಧ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ವಿಶೇಷ ಆಸಕ್ತಿ.. ಚೊಚ್ಚಲ ಕವನ ಸಂಕಲನ "ಹುಲಿಯ ನೆತ್ತಿಗೆ ನೆರಳು" ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಳ್ಳುತ್ತಿದೆ..
2 Postsನಂದೀಶ್ ಬಂಕೇನಹಳ್ಳಿ
ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮುಖವಾಡ’ ಇವರ ಕವನ ಸಂಕಲನ.
3 Postsನಯನ ಬಿಢೆ
ನಯನ ಬಿಢೆ ಅವರು ಮೂಲತಃ ದಕ್ಷಿಣ ಕನ್ನಡದವರು. ಹವ್ಯಾಸಿ ಬರಹಗಾರ್ತಿ, ಯಕ್ಷಗಾನ ಕಲಾವಿದೆ ಕೂಡ. ಚಾರಣವೆಂದರೆ ಅಚ್ಚುಮೆಚ್ಚು. ಬೆಂಗಳೂರಿನಲ್ಲಿ ಸದ್ಯಕ್ಕೆ ವಾಸ.
1 Postನರಸಿಂಹಮೂರ್ತಿ ಹಳೇಹಟ್ಟಿ
ನರಸಿಂಹಮೂರ್ತಿ ಹಳೇಹಟ್ಟಿ ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹಳೇಹಟ್ಟಿ ಗ್ರಾಮದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು'(2000-2010) ಎಂಬ ವಿಷಯ ಕುರಿತು ಸಂಶೋಧನೆ ಮಾಡಿದ್ದಾರೆ. ಕಾವ್ಯ, ವಿಮರ್ಶೆ, ಭಾಷಾಂತರ ಅಧ್ಯಯನ ಹಾಗೂ ಸಂಶೋಧನೆ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕೆಲವು ಲೇಖನಗಳು ವಿವಿಧ ಸಾಹಿತ್ಯ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟಗೊಂಡಿವೆ.
1 Postನರೇಟರ್
ನರೇಟರ್ ಗಳ ಬಗ್ಗೆ ಹೆಚ್ಚಿಗಿ ಹೇಳೂದೇನೈತಿ ಬಿಡ್ರಿ. ಕಥಿ ಹೇಳೂದು, ಕಥಿ ಕೇಳೂದು ಮತ್ ಕಥಿ ಬರ್ಯೂದು.. ಇಷ್ಟ ನಮ್ ಹಾಡೂ ಪಾಡೂ...
1 Postನವೀನ ಗಣಪತಿ
ನವೀನ ಗಣಪತಿ ಹುಟ್ಟಿ ಬೆಳೆದಿದ್ದು ಮಲೆನಾಡಿನ ಹಳ್ಳಿ ಸಿದ್ಧಾಪುರದಲ್ಲಿ. ಸಧ್ಯಕ್ಕೆ ದಾವಣಗೆರೆಯಲ್ಲಿ ಫೈನಾನ್ಸಿಯಲ್ ಕಂಪನಿ ಯೊಂದರಲ್ಲಿ ಕನ್ಸಲ್ಟಂಟ್ ಆಗಿ ಕೆಲಸ. ಬರೆಯಲೇಬೇಕೆಂದೆನಿಸಿದಾಗ ಬರಹ.
3 Postsನವೀನ್ ಮಧುಗಿರಿ
ರಘುನಂದನ್ ವಿ. ಆರ್ ‘ನವೀನ್ ಮಧುಗಿರಿ ಎಂಬ ಕಾವ್ಯನಾಮದಿಂದ ಬರೆಯುತ್ತಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ನವೀನ್ ಅವರಿಗೆ ಕಥೆ, ಕವಿತೆ, ಹಾಯ್ಕು ಮತ್ತು ಶಿಶುಗವಿತೆಗಳನ್ನು ಬರೆಯುವುದರಲ್ಲಿ ಆಸಕ್ತಿ. ‘ರುಚಿಗೆ ತಕ್ಕಷ್ಟು ಪ್ರೀತಿ’ (ಕವಿತೆಗಳ ಸಂಕಲನ) ‘ಚಿಟ್ಟೆ ರೆಕ್ಕೆ’ (ಕಿರುಗವಿತೆಗಳ ಸಂಕಲನಗಳು) ಮತ್ತೆರಡು ಇವರ ಪ್ರಕಟಿತ ಕೃತಿಗಳು.
1 Postನಾ ದಿವಾಕರ್
ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ. ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ. ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.
2 Postsನಾಗರಾಜ ಎಂ ಹುಡೇದ
ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ.
3 Postsನಾಗರಾಜ ವಸ್ತಾರೆ
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.
27 Postsನಾಗರಾಜ್ ಹರಪನಹಳ್ಳಿ
ಹರಪನಹಳ್ಳಿ ಹುಟ್ಟೂರು. ಓದು ಧಾರವಾಡ. ಬದುಕು ಕಾರವಾರ. ವೃತ್ತಿಯಿಂದ ಪತ್ರಕರ್ತ. ಪ್ರಕೃತಿ ಜೊತೆ ಒಡನಾಟ, ಜನ ಸಾಮಾನ್ಯರ ಜೊತೆ ಹೆಚ್ಚು ಬೆರೆಯುವುದು, ಓದು, ಬರಹ, ಹಾಡು ಕೇಳುವುದು ಉಸಿರು. ದಿನಕ್ಕೊಮ್ಮೆ ಪಿ.ಲಂಕೇಶರನ್ನು ನೆನಪಿಸಿಕೊಳ್ಳುವುದು, ಅವರ ಬರಹಗಳನ್ನು ಓದುವುದು...
7 Postsನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)
10 Postsನಾಗಶ್ರೀ ಶ್ರೀರಕ್ಷ
ತನ್ನ ಮೂವತ್ತಮೂರನೆಯ ಎಳವೆಯಲ್ಲೇ ಗತಿಸಿದ ಕನ್ನಡದ ಅನನ್ಯ ಕವಯಿತ್ರಿ. ಮೂಲತಃ ಉಡುಪಿಯವರು. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ‘ನಕ್ಷತ್ರ ಕವಿತೆಗಳು’ ಇವರ ಏಕೈಕ ಕವಿತಾ ಸಂಕಲನ.
15 Postsನಾದ ಮಣಿನಾಲ್ಕೂರು
ನಾದ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಮಣಿನಾಲ್ಕೂರಿನವರಾಗಿದ್ದು, ಸದ್ಯ ಶೃಂಗೇರಿ ತಾಲೂಕು ತೆಕ್ಕೂರು ಎಂಬಲ್ಲಿ ಅರಿವುಮನೆ ಸಾಮುದಾಯಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಓದಿದ್ದು ಸಮಾಜಶಾಸ್ತ್ರ ಎಂ. ಎ. ಹಾಗೂ ಮಕ್ಕಳ ಮನಶಾಸ್ತ್ರ ಮತ್ತು ಆಪ್ತಸಮಾಲೋಚನೆ. ತರಬೇತುದಾರ, ಪತ್ರಕರ್ತ, ಯೂತ್ ಮೆಂಟರ್ ಆಗಿದ್ದು ಕಳೆದ ನಾಲ್ಕು ವರ್ಷಗಳಿಂದ ಪೂರ್ಣಾವಧಿ ಏಕತಾರಿ ಹಾಡುಗಳು ಮತ್ತು ಜನ ಸಂವಾದದೊಂದಿಗೆ ಕರ್ನಾಟಕದಾದ್ಯಂತ ಓಡಾಟ ನಡೆಸುತ್ತಿದ್ದಾರೆ.
1 Postನಾರಾಯಣ ಯಾಜಿ
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
29 Postsನೀರ್ಕಜೆ ಮಹಾಬಲೇಶ್ವರ ಭಟ್
ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಇವರು ’ದೈತ್ಯ ದರ್ಶನ’ ಎಂಬ ಚೀನಾ ಪ್ರವಾಸ ಕಥನ, ’ಬೈರವ ನಡಿಗೆ’ ಎಂಬ ಅಮೆರಿಕಾ ಪ್ರವಾಸ ಕಥನ, `ಹಿಮಾಲಯ ಪರ್ವತ ಪರ್ಯಟನ' ಹಾಗೂ `ವಿಜ್ಞಾನ ಬೈರವ' ಎಂಬ ತಂತ್ರಶಾಸ್ತ್ರ ಕುರಿತ ಪುಸ್ತಕಗಳನ್ನು ಪ್ರಕಟಿಸಿದ್ದರು. ‘ಅವತಾರ’ ಇವರ ಆತ್ಮ ಕಥೆ. ಕೊಡಗಿನ ಮಡಿಕೇರಿಯ ಬಳಿಯ ಬಿಳಿಗೇರಿಯವರು.
1 Postನೀಲಕಂಠ ಕುಲಕರ್ಣಿ
ನೀಲಕಂಠ ಕುಲಕರ್ಣಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡದವರು. ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಸಧ್ಯ ಬೆಂಗಳೂರು ವಾಸಿ. ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದ್ದಾರೆ.
1 Postನೂತನ ದೋಶೆಟ್ಟಿ
ನೂತನ ದೋಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳು ಅವರ ಪ್ರಮುಖ ಸಂಕಲನಗಳು. ಯಾವ ವೆಬ್ಸೈಟಿನಲ್ಲೂ ಉತ್ತರವಿಲ್ಲ ಅವರ ಪ್ರಕಟಿತ ಕಥಾ ಸಂಕಲನ.
4 Postsಪ.ನಾ.ಹಳ್ಳಿ ಹರೀಶ್ ಕುಮಾರ್
ಹರೀಶ್ ಕುಮಾರ್ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ.
8 Postsಪದ್ಮಶ್ರೀ ಎಂ
ಪದ್ಮಶ್ರೀ ಎಂ. ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸಂಶೋಧನಾರ್ಥಿ. ಪ್ರಸ್ತುತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಎಲ್ಇ ಸಂಸ್ಥೆಯ ಎಸ್ ಎಸ್ ಎಂ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿ.
1 Postಪರಿಮಳ ಜಿ. ಕಮತರ್
ಕವಯಿತ್ರಿ, ಕಥೆಗಾರ್ತಿ ಮತ್ತು ಅನುವಾದಕಿ. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಇವರ ಕವಿತಾ ಸಂಕಲನದ ಹೆಸರು.
1 Postಪಾಲಹಳ್ಳಿ ವಿಶ್ವನಾಥ್
ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಫರ್ಮಿಲ್ಯಾಬ್, ಲಾಸ್ ಅಲಮೋಸ್ ಲ್ಯಾಬ್ , ಗೊಡಾರ್ಡ್ ಸ್ಪೇಸ್ ಸೆಂಟರ್ ಗಳಲ್ಲಿ ಅವರು ಸಂಶೋಧನೆಗಳನ್ನು ಮಾಡಿದ್ದಾರೆ. ವಿಜ್ಞಾನ ಬರಹಗಾರರಾದ ಅವರ ಕೃತಿಗಳು, ಆಕಾಶದಲ್ಲೊಂದು ಮನೆ, ಕಣಕಣ ದೇವಕಣ, ಭೂಮಿಯಿಂದ ಬಾನಿನತ್ತ, ಪಾಪ ಪ್ಲೂಟೊ.
8 Postsಪಿ. ನಂದಕುಮಾರ್
ಪಿ. ನಂದಕುಮಾರ್ ಮೂಲತಃ ಸುರಪುರ ತಾಲೂಕಿನ ಕಕ್ಕೇರಾದವರು. ಸಧ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ "ದಲಿತ ಚಳವಳಿಯ ಅನುಭವ ಕಥನ" ಎಂಬ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ.
1 Postಪೂರ್ಣಿಮಾ ಸುರೇಶ್
ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು. ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ.
4 Postsಪೂರ್ಣೇಶ್ ಮತ್ತಾವರ
ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. "ದೇವರಿದ್ದಾನೆ! ಎಚ್ಚರಿಕೆ!!" ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..
8 Postsಪ್ಯಾಪಿಲಾನ್
`ಪ್ಯಾಪಿಲಾನ್' ಎನ್ನುವುದು ಆಫ್ರಿಕಾ ಖಂಡದ ಆಗ್ನೇಯ ಕರಾವಳಿ ಮಡಗಾಸ್ಕರ್ ನಲ್ಲಿ ರುವ ತರುಣ ಕನ್ನಡಿಗರೊಬ್ಬರ ಕಾವ್ಯನಾಮ
4 Postsಪ್ರಜ್ಞಾ ಮತ್ತಿಹಳ್ಳಿ
ಪ್ರಜ್ಞಾ ಮತ್ತಿಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸಹ ಪ್ರಾಧ್ಯಾಪಕರು. ಸಾಹಿತ್ಯ ರಂಗಭೂಮಿ ಮತ್ತು ಯಕ್ಷಗಾನಗಳು ಇವರ ಆಸಕ್ತಿಯ ಕ್ಷೇತ್ರಗಳು. ಕವಿತೆ, ಕತೆ, ಪ್ರಬಂಧ. ನಾಟಕ, ಪ್ರವಾಸ ಕಥನ ಈ ಎಲ್ಲ ಪ್ರಕಾರಗಳೂ ಸೇರಿದಂತೆ ಎಂಟು ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಕಡೆ ಇವರ ಬರಹಗಳು ಗುರುತಿಸಿಕೊಂಡಿವೆ.
6 Postsಪ್ರತೀಕ್ ಮುಕುಂದ
ಹೊಸ ತಲೆಮಾರಿನ ಕಥೆಗಾರ ಮತ್ತು ಛಾಯಾಚಿತ್ರಗ್ರಾಹಕ. ಆಸ್ಟ್ರೇಲಿಯಾದಲ್ಲಿರುವ ಸಾಫ್ಟ್ವೇರ್ ಉದ್ಯೋಗಿ.
1 Postಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು
ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ,ಚಿತ್ರಕತೆ ರಚನೆ ಮತ್ತು ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮೂಲಕ ಶಿಕ್ಷಣವನ್ನು ಪಡೆದಿರುತ್ತಾರೆ.ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿ ಚರಿತ್ರೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
6 Postsಪ್ರಭಾಕರ ರಾವ್
ತುಮಕೂರು ಮೂಲದ ಪ್ರಭಾಕರ ರಾವ್ ಅವರು ಎಂ.ಎ ಸಂಸ್ಕೃತ ಹಾಗೂ ಎಂ.ಕಾಂ ಪದವಿಗಳನ್ನು ಪಡೆದಿದ್ದು ರಂಗಭೂಮಿಯಲ್ಲಿ ನಟನೆ ನಿರ್ದೇಶನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
1 Postಪ್ರಶಾಂತ ಆಡೂರ
ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.
48 Postsಪ್ರಶಾಂತ್ ಬೀಚಿ
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.
22 Postsಪ್ರಸನ್ನ ಆಡುವಳ್ಳಿ
ಪ್ರಸನ್ನ ಆಡುವಳ್ಳಿ ಚಿಕ್ಕಮಗಳೂರು ಜಿಲ್ಲೆಯವರು. ಸದ್ಯ ಮಧ್ಯಪ್ರದೇಶದ ಭೋಪಾಲವಾಸಿ. ವನ್ಯಜೀವಿಗಳ ಬಗ್ಗೆ ಸಂಶೋಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ
2 Postsಪ್ರಸಾದ್ ಶೆಣೈ ಆರ್. ಕೆ.
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) "ಒಂದು ಕಾಡಿನ ಪುಷ್ಟಕ ವಿಮಾನ"(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.
24 Postsಪ್ರಿಯಾ ಕೆರ್ವಾಶೆ
ಪ್ರಿಯಾ ಕಾರ್ಕಳ ಸಮೀಪದ ಕೆರ್ವಾಶೆಯವರು. ಈಗಿರುವುದು ಬೆಂಗಳೂರು. ವೃತ್ತಿಯಲ್ಲಿ ಪತ್ರಕರ್ತೆ. ಸಾಹಿತ್ಯ ಅಂದರೆ ಪ್ರೀತಿ. ಚಾರಣ, ರಂಗಭೂಮಿಯಲ್ಲಿ ಆಸಕ್ತಿ.
1 Postಪ್ರಿಯಾ ಭಟ್ ಕಲ್ಲಬ್ಬೆ
ಪ್ರಿಯಾ ಭಟ್ ಕಲ್ಲಬ್ಬೆ ಅಂಕೋಲಾ ತಾಲೂಕಿನ ಹಳವಳ್ಳಿಯವರು. ಕುಮಟಾ ಪೇಟೆಯಲ್ಲಿ ಸ್ವಂತ ಉದ್ಯೋಗ. ಅದರೊಂದಿಗೆ ‘ಸ್ವಸ್ತಿ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದು ಇದೂವರೆಗೂ ಇವರ ಮೂರು ಕೃತಿಗಳು ಪ್ರಕಟವಾಗಿವೆ.
3 Postsಪ್ರೊ. ಪುರುಷೋತ್ತಮ ಬಿಳಿಮಲೆ
ಸಮಕಾಲೀನ ಆಗುಹೋಗುಗಳಿಗೆ ಸಕಾರಣವಾಗಿ ಸ್ಪಂದಿಸುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಎಂಬ ಊರಿನವರು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. 1994ರಿಂದ ದೆಹಲಿಯ ಅಮೆರಿಕನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ನಿರ್ದೇಶಕರಾಗಿ, 2015ರಿಂದ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಮೆಕೆಂಜಿ ಕೈಫಿಯತ್ತುಗಳು, ಲಿಂಗರಾಜನ ಹುಕುಂನಾಮೆ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಜನಸಂಸ್ಕೃತಿ, ಬಹುರೂಪ, ಮೆಲುದನಿ, ಕನ್ನಡ ಕಥನಗಳು, ವಲಸೆ, ಸಂಘರ್ಷ ಮತ್ತು ಸಮನ್ವಯ ಇವರ ಪ್ರಮುಖ ಕೃತಿಗಳು. ‘ಕಾಗೆ ಮುಟ್ಟಿದ ನೀರು’ ಅವರ ಆತ್ಮಕತೆ.
1 Postಫಕೀರ್ ಮುಹಮ್ಮದ್ ಕಟ್ಪಾಡಿ
ಖ್ಯಾತ ಕತೆಗಾರರು,ಸೂಫಿ ಚಿಂತಕರು. ಮೂಲತಃ ಉಡುಪಿಯ ಕಟ್ಪಾಡಿಯರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
7 Postsಫಾತಿಮಾ ರಲಿಯಾ
ಇನ್ನೂ ಅರ್ಥವಾಗದ ಬದುಕಿನ ಬಗ್ಗೆ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆಯುತ್ತಿರುವವಳು ನಾನು, ಬದುಕು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕಲಿಯುವಷ್ಟು ವಿಧೇಯ ವಿದ್ಯಾರ್ಥಿನಿ. ಪುಸ್ತಕಗಳೆಂದರೆ ಪುಷ್ಕಳ ಪ್ರೀತಿ. ಓದು ಬದುಕು, ಬರಹ ಗೀಳು ಅನ್ನುತ್ತಾರೆ ಫಾತಿಮಾ.
14 Postsಬದರಿ ರೂಪನಗುಡಿ
ಅನುವಾದಕರು. ತೆಲುಗಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗಿಗೆ ಸಮರ್ಥವಾಗಿ ಅನುವಾದಿಸಬಲ್ಲವರು.ಇತ್ತೀಚೆಗಷ್ಟೆ ಅಭಿಯಂತರರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
1 Postಬಸವನಗೌಡ ಹೆಬ್ಬಳಗೆರೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
31 Postsಬಾಬು ಹಿರಣ್ಣಯ್ಯ
ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಪ್ರಸಿದ್ಧ ನಟರು; ಓದಿದ್ದು ಅಭಿಯಂತರ ಪದವಿ. ಆದರೆ ಆರಿಸಿಕೊಂಡ ವೃತ್ತಿ, ತಮ್ಮ ತಾತ ಕೆ. ಹಿರಣ್ಣಯ್ಯನವರು ಸ್ಥಾಪಿಸಿ, ತಂದೆ ಮಾಸ್ಟರ್ ಹಿರಣ್ಣಯ್ಯನವರು ಮುಂದುವರಿಸಿದ ‘ಹಿರಣ್ಣಯ್ಯ ಮಿತ್ರ ಮಂಡಳಿ’ ಯಲ್ಲಿ ಪೂರ್ಣ ಪ್ರಮಾಣದ ವೃತ್ತಿಪರ ನಟ. ಹದಿನಾಲ್ಕನೇ ವಯಸ್ಸಿಗೇ ‘ ದೇವದಾಸಿ’ ನಾಟಕದಲ್ಲಿನ ನಾಜೂಕಯ್ಯನ ಪಾತ್ರ ನಿರ್ವಹಿಸಿ ಸೈ ಅನಿಸಿಕೊಂಡವರು. ನಟನೆ, ನಿರ್ದೇಶನದಲ್ಲಿ ಸಕ್ರಿಯ. ಕಿರುತೆರೆಯಲ್ಲಿನ ಧಾರಾವಾಹಿಗಳಲ್ಲಿ ತಮ್ಮ ನಟನೆಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
1 Postಬಿ.ಆರ್.ಜೋಯಪ್ಪ
ಕನ್ನಡ ಮತ್ತು ಅರೆಭಾಷೆ ಎರಡರಲ್ಲೂ ಬರೆಯಬಲ್ಲ ಲೇಖಕರು. 'ಯಾರ ಬೇಟೆ ಮತ್ತು ಇತರ ಪ್ರಸಂಗಗಳು' ಎಂಬುದು ಬೇಟೆಯ ಕುರಿತಾದ ಇವರ ಪುಸ್ತಕ. ಕೊಡಗಿನ ಮದೆನಾಡಿನ ವಾಸಿ.
1 Postಬಿ.ಕೆ. ಮೀನಾಕ್ಷಿ
ಬಿ.ಕೆ. ಮೀನಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರ್ತಿ. ಹಲವು ಪತ್ರಿಕೆಗಳಲ್ಲಿ ನನ್ನ ಲೇಖನಗಳು, ಕವನಗಳು ಪ್ರಬಂಧಗಳು, ಕತೆಗಳು, ಮಕ್ಕಳ ಕತೆಗಳು ಪ್ರಕಟಗೊಂಡಿವೆ. ಇದುವರೆಗೂ ಇವರ ಹನ್ನೊಂದು ಕೃತಿಗಳು ಪ್ರಕಟವಾಗಿವೆ.
1 Postಬಿ.ಕೆ. ಸುಮತಿ
ಬಿ.ಕೆ. ಸುಮತಿ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಣೆ, ಭಾಷೆ, ಸಾಹಿತ್ಯ ಕುರಿತ ಹಲವು ಲೇಖನಗಳನ್ನು ಬರೆದಿದ್ದಾರೆ.. ‘ನಿರೂಪಣೆ, ಮಾತಲ್ಲ ಗೀತೆ’ ಇವರ ಪ್ರಕಟಿತ ಪುಸ್ತಕ.
3 Postsಬೇಲೂರು ರಘುನಂದನ್
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.
4 Postsಭಾಗ್ಯಶ್ರೀ ಎಂ.ಎಸ್
ಭಾಗ್ಯಶ್ರೀ ಮೂಲತಃ ಮೈಸೂರಿನವರು. ಪ್ರಸ್ತುತ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದು, ಓದು-ಬರಹ ಮತ್ತು ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸಗಳು. ಹಳೆಗನ್ನಡ ಹಾಗೂ ಜನಪದ ಸಾಹಿತ್ಯ ಕೃತಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ.
1 Postಭಾರತಿ ಬಿ.ವಿ.
ಹುಟ್ಟಿದ್ದು ಕೊಳ್ಳೇಗಾಲದಲ್ಲಿ. ಬೆಂಗಳೂರಿನಲ್ಲಿ ವಾಸ. ಕವನ, ಪ್ರಬಂಧ, ಪ್ರವಾಸ ಕಥನ, ನಾಟಕ ಇವುಗಳನ್ನು ಬರೆಯಲು ಆಸಕ್ತಿ. ಕವನಗಳ ಅನುವಾದ ಇತ್ತೀಚೆಗೆ ಹಿಡಿದಿರುವ ಹುಚ್ಚು. ನಾಟಕ ನೋಡುವುದು ಊರೂರು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸಗಳು.`ಜಸ್ಟ್ ಮಾತ್ ಮಾತಲ್ಲಿ' ಮತ್ತು 'ಕಿಚನ್ ಕವಿತೆಗಳು' ಇವರ ಇತ್ತೀಚೆಗಿನ ಪುಸ್ತಕಗಳು
12 Postsಭಾರತಿ ಹೆಗಡೆ
ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಮೊದಲ ಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು(ಕಥಾ ಸಂಕಲನ), ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)ಪುಸ್ತಕಗಳು ಪ್ರಕಟವಾಗಿವೆ.
26 Postsಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ. ಸಿನಿಮಾದಲ್ಲಿ ಆಸಕ್ತಿ ಹಾಗೂ ಸಿನಿಮಾ ಕುರಿತ ಲೇಖನ ಬರವಣಿಗೆ ಹವ್ಯಾಸ.
1 Postಮಚ್ಚೇಂದ್ರ ಪಿ ಅಣಕಲ್
ಮಚ್ಚೇಂದ್ರ ಪಿ ಅಣಕಲ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರು. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಥೆಗಳಿಗೆ ಹಲವು ಪ್ರಶಸ್ತಿಗಳು ದೊರಕಿವೆ. ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು (ಕವನಸಂಕಲನ), ಜ್ಞಾನ ಸೂರ್ಯ (ಸಂಪಾದಿತ ಕಾವ್ಯ), ಜನಪದ ವೈದ್ಯರ ಕೈಪಿಡಿ (ಸಂಪಾದನೆ), ಲಾಟರಿ (ಕಥಾಸಂಕಲನ), ಮೊದಲ ಗಿರಾಕಿ (ಕಥಾಸಂಕಲನ), ಹಗಲುಗಳ್ಳರು (ಕಥಾಸಂಕಲನ) ಇವರ ಪ್ರಕಟಿತ ಕೃತಿಗಳು.
2 Postsಮಂಜಯ್ಯ ದೇವರಮನಿ, ಸಂಗಾಪುರ
ಮಂಜಯ್ಯ ದೇವರಮನಿ ರಾಣೇಬೆನ್ನೂರಿನವರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಕರಿಜಾಲಿ ಮರ' ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ಇವರ ಹವ್ಯಾಸಗಳು.
5 Postsಮಂಜುನಾಥ್ ಲತಾ
ಹುಟ್ಟಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಸದ್ಯಕ್ಕೆ ಹವ್ಯಾಸಿ ಪತ್ರಕರ್ತ, ಕಲಾವಿದರಾಗಿ ಸ್ವಯಂ ಉದ್ಯೋಗ. ‘ತೆಂಕಲಕೇರಿ’ (2003), ‘ಸನ್ ಆಫ್ ಸಿದ್ದಪ್ಪಾಜಿ’(2008), ಕತೆ ಎಂಬ ಇರಿವ ಈ ಅಲಗು (2011) ಕಥಾ ಸಂಕಲನಗಳು. ‘ಪರದೇಸಿ ಮಗನ ಪದವು’ (2006), 'ಆಹಾ ಅನಿಮಿಷ ಕಾಲ' ‘ಸೋಜಿಗದ ಸೂಜಿ ಮಲ್ಲಿಗೆ’ (2008) ಕವನ ಸಂಕಲನಗಳು. ‘ಪಲ್ಲಂಗ’ ಕಾದಂಬರಿ(2008), ‘ಜನಪದ ಕಲಾರೂಪ ಡಾ.ರಾಜ್ಕುಮಾರ್’ (ಜೀವನ ಚಿತ್ರಣ) ಇದುವರೆಗಿನ ಪ್ರಕಟಿತ ಕೃತಿಗಳು. ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕುಂ.ವೀರಭದ್ರಪ್ಪ ಕಥಾ ಪ್ರಶಸ್ತಿ, ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ
1 Postಮಂಜುನಾಯಕ ಚಳ್ಳೂರು
ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. "ಫೂ" ಇವರ ಪ್ರಕಟಿತ ಕಥಾ ಸಂಕಲನ.
5 Postsಮಂಜುಳ ಡಿ
ಮಂಜುಳ ಡಿ. ಬೆಂಗಳೂರು ವಾಸಿ. ಇವರ ಒಂದು ಕವನ ಸಂಕಲನ ಹಾಗೂ ಎರಡು ಅಂಕಣ ಬರಹಗಳ ಪುಸ್ತಕ ಪ್ರಕಟವಾಗಿವೆ.
2 Postsಮಂಜುಳಾ ಸುಬ್ರಹ್ಮಣ್ಯ
ಮಂಜುಳಾ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದವರು. ಸಾಂಪ್ರದಾಯಿಕ ನಾಟ್ಯ ಹಾಗೂ ಆಧುನಿಕ ಸಂವೇದನೆಯ ರಂಗಭೂಮಿ ಈ ಎರಡೂ ಕ್ಷೇತ್ರಗಳಲ್ಲಿ ಅನುಸಂಧಾನ ನಡೆಸಿದವರು. ದೂರದರ್ಶನದ ಬಿ ಗ್ರೇಡ್ ಕಲಾವಿದೆಯಾಗಿರುವ ಅವರು, ತುಳುನಾಡ ಜನಪದ ಕುಣಿತ ಹಾಗೂ ಅಭಿಜಾತ ನೃತ್ಯ ಪ್ರಕಾರದ ಆನ್ವಯಿಕ ಸಾಧ್ಯತೆ ಎಂಬ ವಿಷಯದ ಕುರಿತು ನಡೆಸಿದ ಅಧ್ಯಯನಕ್ಕಾಗಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಫೆಲೋಶಿಪ್ ಗೌರವ ಪಡೆದಿದ್ದಾರೆ.
6 Postsಮಂಡಲಗಿರಿ ಪ್ರಸನ್ನ
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ
11 Postsಮಧು ಗಣಪತಿರಾವ್ ಮಡೆನೂರು
ಮಧುಗಣಪತಿರಾವ್ ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಡೆನೂರಿನವರು. ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ. ಚೇತನ, ಶ್ರಾವಣ (ಕವನ ಸಂಕಲನಗಳು), ಸಂಶೋಧನಾ ಕೃತಿ-ಕರ್ನಾಟಕದ ದೀವರು (ಒಂದು ಐತಿಹಾಸಿಕ ಅಧ್ಯಯನ) ಇವರ ಪ್ರಕಟಿತ ಕೃತಿಗಳು
1 Postಮಧುಸೂದನ್ ವೈ ಎನ್
ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು. ವೃತ್ತಿ ಸಾಫ್ಟವೇರ್ ಎಂಜಿನಿಯರ್. ಬೆಂಗಳೂರಿನಲ್ಲಿ ವಾಸ. ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ವೀಕ್ಷಣೆ ಹವ್ಯಾಸವಿರುವ ಇವರಿಗೆ ತತ್ವಶಾಸ್ತ್ರದಲ್ಲಿಯೂ ಆಸಕ್ತಿ. ಇವರ “ಕಾರೇಹಣ್ಣು” ಕಥಾ ಸಂಕಲನಕ್ಕೆ ಈ ಹೊತ್ತಿಗೆಯ ಪ್ರಶಸ್ತಿ ಲಭಿಸಿದೆ.
14 Postsಮನು ಗುರುಸ್ವಾಮಿ
ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.
9 Postsಮನು ಬಳಿಗಾರ್
ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮನು ಬಳಿಗಾರ್ ಅವರ ಹುಟ್ಟೂರು ಗದಗ. ಎಂ.ಎ, ಎಲ್ಎಲ್ಬಿ ಪದವಿ ಪಡೆದಿರುವ ಇವರು ಕರ್ನಾಟಕ ಸರ್ಕಾರದಲ್ಲಿ, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಅವರು, ಕಥೆ, ಕವನ, ನಾಟಕ ಪ್ರಬಂಧ ಜೀವನ ಚರಿತ್ರೆಗಳ ಬರವಣಿಗೆಯನ್ನು ನಡೆಸಿದವರು. ನನ್ನ ನಿನ್ನೊಳಗೆ, ಎದ್ದವರು ಬಿದ್ದವರು, ನಯಾಗರ ಮತ್ತು ಜಲಪಾತಗಳು (ಕವನ) ಅವ್ಯಕ್ತ ಋಣ (ಕಥಾ ಸಂಕಲನ) ಬಹುಮುಖಿ, ತಲಸ್ಪರ್ಶಿ, ಗಾನ ಗಂಧರ್ವ, ಅಕ್ಷರ ಮಿಲನ (ಸಂಪಾದನೆ) ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಸತ್ಯೇನ್ ಮೈತ್ರಿ ಪ್ರಶಸ್ತಿ, ರನ್ನ ಸಾಹಿತ್ಯ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ, ಕೆಂಪೇಗೌಡ ಸಾಹಿತ್ಯ ಲಿಂಗರಾಜ ದೇಸಾಯಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳ ಸಂದಿವೆ.
1 Postಮಮತಾ ಆರ್.
ಮಮತಾ ಆರ್ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರು. ಇಂಗ್ಲಿಷ್ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಕವಿ, ಕಥೆಗಾರ್ತಿಯಾಗಿದ್ದಾರೆ. ಜಾಗತಿಕ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿರುವ ಇವರು, ತಮ್ಮ ಕಥೆಗಳಿಗಾಗಿ ಪ್ರಜಾವಾಣಿ, ವಿಜಯವಾಣಿ, ಇನ್ನೂ ಅನೇಕ ಬಹುಮಾನಗಳನ್ನು ಪಡೆದಿದ್ದು, ‘ಅತಿ ತಲ್ಲಣ ಅತಿ ನಿಶಬ್ದ’ ಎನ್ನುವ ಕಥಾಸಂಕಲನವನ್ನು, ‘ಒಂಚೂರು ಅಪಚಾರವೆಸಗದ ಅನುಭವಗಳು’ ಎನ್ನುವ ಕವನಸಂಕಲನವನ್ನು ಪ್ರಕಟಿಸಿದ್ದಾರೆ. ಭಾರತೀಯ ಸಿನಿಮಾಗಳ ಮೇಲೆ ಪಿಎಚ್ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
1 Postಮಹಾಂತೇಶ ನವಲಕಲ್
ಮಹಾಂತೇಶ ನವಲಕಲ್ ಸಿರವಾರ ತಾಲ್ಲೂಕಿನ ನವಲಕಲ್ನವರು ನೀರಿನ ನೆರಳು, ಭಾರತ ಭಾಗ್ಯವಿದಾತ (ಕಥಾ ಸಂಕಲನಗಳು), ಒರೆಗಲ್ಲು ಸಂಪಾದಿತ ಕೃತಿ. ಪ್ರಜಾವಾಣಿ ಕಥಾ ಸ್ಪರ್ಧೆ(ಪ್ರಥಮ), ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಗು.ವಿ.ವಿ ಎರಡು ಸಲ ಚಿನ್ನದ ಪದಕ ( ಆಕ್ರಾಂತ ಹಾಗು ದಂಡಿ ಕತೆಗೆ) ಗು.ವಿ.ವಿ ಪುಸ್ತಕ ಬಹುಮಾನ, ಪಾಪು ಪುರಸ್ಕಾರ, ಅಮ್ಮ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ.
1 Postಮಹಾಂತೇಶ ಹೊದ್ಲೂರ
ಮಹಾಂತೇಶ ಹೊದ್ಲೂರ ಬಾಗಲಕೋಟೆಯವರು. ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ದ್ವೀತಿಯ ವರ್ಷದ ವಿದ್ಯಾರ್ಥಿ. 'ಏನೆಂದು ಹೇಳಲಿ' (ಹನಿಗವನ ಸಂಕಲನ) ಹಾಗೂ 'ಮುಸ್ಸಂಜೆ ಪಯಣ' ಎನ್ನುವ (ಕವನ ಸಂಕಲನ) ಪ್ರಕಟಿತ ಕೃತಿಗಳು.
1 Postಮಹಾಬಲ ಭಟ್
ಮಹಾಬಲ ಭಟ್ಟರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಗೋವಾ ರಾಜ್ಯದ ಮಾಪುಸಾ ನಗರದಲ್ಲಿರುವ ಸೈಂಟ್ ಜೇವಿಯರ್ ಉಚ್ಚಮಾಧ್ಯಮಿಕ ವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರು. ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಇವರು ಸಂಸ್ಕೃತದಲ್ಲಿ ಬರೆದಿರುವ ಎರಡು ಪುಸ್ತಕಗಳು ಪ್ರಕಾಶನಗೊಂಡಿವೆ.
1 Postಮಾರುತಿ ಗೋಪಿಕುಂಟೆ
<div id=":mr" class="ii gt"> <div id=":nl" class="a3s aiL "> <div dir="auto">ಮಾರುತಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೋಪಿಕುಂಟೆ ಗ್ರಾಮದವರು. ಶ್ರೀ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆ ಹಾರೋಗೆರೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕತೆ-ಕವನಸಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಎದೆಯ ನೆಲದ ಸಾಲು" ಎಂಬ ಕವನ ಸಂಕಲನ ಅಚ್ಚಿನಲ್ಲಿದೆ.</div> </div> </div>
40 Postsಮಾಲತಿ ಶಶಿಧರ್
ಮಾಲತಿ ಶಶಿಧರ್ ಚಾಮರಾಜನಗರದವರು. ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು
7 Postsಮಾಲಾ ಮ. ಅಕ್ಕಿಶೆಟ್ಟಿ
ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
12 Postsಮಾಲಿನಿ ಗುರುಪ್ರಸನ್ನ
ಬೆಂಗಳೂರು ವಾಸಿಯಾದ ಮಾಲಿನಿ ಗುರುಪ್ರಸನ್ನ ಗೃಹಿಣಿ ಮತ್ತು ಲೇಖಕಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
6 Postsಮಿತ್ರಾ ವೆಂಕಟ್ರಾಜ
ಹೆಸರಾಂತ ಕಥೆಗಾರ್ತಿ. ಮೂಲತಃ ಕುಂದಾಪುರದವರು. ಈಗ ಮುಂಬೈ ವಾಸಿ. “ಮಾಯಕದ ಸತ್ಯ”, “ರುಕುಮಾಯಿ” ಮತ್ತು “ಹಕ್ಕಿ ಮತ್ತು ಅವಳು” ಇವರ ಕಥಾಸಂಕಲನಗಳು. “ಪಾಚಿಕಟ್ಟಿದ ಪಾಗಾರ” ಕಾದಂಬರಿ.
2 Postsಮೀರಾ ಪಿ.ಆರ್.
ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕ್ಕೋತ್ತರ ಪದವಿ ಪಡೆದಿರುವ ಮೀರಾ, ಈಗ ಸಧ್ಯಕ್ಕೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. `ದೂರಸಾಗರ' ಮತ್ತು `ಗುಬ್ಬಿಗೂಡು'(ಸಂಪಾದನೆ) ಇವರ ಪ್ರಕಟಿತ ಕೃತಿಗಳು. ತಮ್ಮದೇ ಸಂಗೀತ ಶಾಲೆಯೊಂದನ್ನು ನಡೆಸುತ್ತಿರುವ ಮೀರಾ, ಹತ್ತು ಹಲವು ಆಸಕ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
1 Postಮೀರಾ ರಾಜಗೋಪಾಲ್
ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ.
5 Postsಮೀರಾ ಸಂಪಿಗೆ, ಬೆಳ್ಳೂರ್
ಮೀರಾ ಸಂಪಿಗೆ ಮೈಸೂರಿನವರು. ಹದಿನೇಳು ವರ್ಷ ಅಮೇರಿಕಾದಲ್ಲಿದ್ದವರು ಮತ್ತೀಗ ವಾಪಸ್ಸು ತಮ್ಮೂರಿಗೆ ಮರಳಿದ್ದಾರೆ. ಪ್ರಪಂಚ ಸುತ್ತುವುದು ತೀವ್ರ ಖುಷಿಯ ವಿಷಯ ಮತ್ತು ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.
1 Postಮುದಿರಾಜ್ ಬಾಣದ್
ಮುದಿರಾಜ್ ಬಾಣದ್ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಗುಡದಿನ್ನಿಯವರು. ಸದ್ಯ ರಾಯಚೂರಿನಲ್ಲಿ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಾಹ್ನೆ ಅವರ ಪ್ರಕಟಿತ ಕಥಾ ಸಂಕಲನ.
1 Postಮುನವ್ವರ್, ಜೋಗಿಬೆಟ್ಟು
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..
42 Postsಮುರಳಿ ಹತ್ವಾರ್
ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮತ್ತು ವಾಸ ಲಂಡನ್ನಿನಲ್ಲಿ. ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.
2 Postsಮುರ್ತುಜಾಬೇಗಂ ಕೊಡಗಲಿ
ಮುರ್ತುಜಾಬೇಗಂ ಕೊಡಗಲಿ ಇಳಕಲ್ಲಿನವರು. ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿಯಾಗಿ 17ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ‘ಮೊನ್ನೆ ಬಂದ ಮಳೆಗೆ’ ಮತ್ತು ‘ಭಾವ ಬದುಕು’ ಇವರ ಪ್ರಕಟಿತ ಕೃತಿಗಳು. ದ. ರಾ ಬೇಂದ್ರೆ ಗ್ರಂಥ ಬಹುಮಾನ, ಪಿ ಲಂಕೇಶ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಪಿ.ಸುಶೀಲಾ ಸ್ಮಾರಕ ಕಾವ್ಯ ಪ್ರಶಸ್ತಿ ಇವರಿಗೆ ಲಭಿಸಿವೆ.
2 Postsಮೆಹಬೂಬ ಮುಲ್ತಾನಿ
ಮೆಹಬೂಬ ಮುಲ್ತಾನಿ ಬೆಳಗಾವಿಯವರು. ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು. ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು.
1 Postಮೇಘಾ ಯಲಿಗಾರ್
ಮೇಘಾ ಯಲಿಗಾರ್ ಮೂಲತಃ ಗದಗ ಜಿಲ್ಲೆಯ ಮುಂಡರಗಿಯವರು. ಎಂಎಸ್ಸಿ ಮಾಸ್ ಕಮ್ಯೂನಿಕೇಶನ್ ಪದವೀಧರೆ. ಸಧ್ಯಕ್ಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿಯೊಂದರ ಉದ್ಯೋಗಿ. ಸಿನಿಮಾ ಮತ್ತು ಸಾಹಿತ್ಯದಲ್ಲಿ ಆಸಕ್ತಿ.
1 Postಮೊಗಳ್ಳಿ ಗಣೇಶ್
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
47 Postsಮೋಹನ್ ಮಂಜಪ್ಪ
ಮೋಹನ್ ಮಂಜಪ್ಪ ಮೂಲತಃ ಚಿಕ್ಕಮಗಳೂರಿನವರು. ಬದುಕಿನ ಬಂಡಿ ಎಳೆಯುತ್ತಿರುವುದು ಬೆಂಗಳೂರಿನಲ್ಲಿ. ವೃತ್ತಿಯಿಂದ IBM ನಲ್ಲಿ ಸಾಫ್ಟ್ವೇರ್ ಉದ್ಯೋಗಿ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
1 Postಯೋಗೀಂದ್ರ ಮರವಂತೆ
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ "ಏರ್ ಬಸ್" ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.
77 Postsರಘುನಾಥ್ ಕೆ.
ಕೆ. ರಘುನಾಥ್ ಅವರು ಮುಂಬೈನ ಝುನ್ ಝುನ್ ವಾಲಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 'ಅರವಿಂದ ನಾಡಕರ್ಣಿ ಅವರ ಕಾವ್ಯ - ಒಂದು ಅಧ್ಯಯನ' ಅವರ ಎಂಫಿಲ್ ಪ್ರಬಂಧ. 'ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ' ಅವರ ಸಂಶೋಧನ ಮಹಾಪ್ರಬಂಧ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಎಂಫಿಲ್ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಅವಲೋಕನ' ಮತ್ತು 'ಕನ್ನಡದ ಕನ್ನಡಿಯಲ್ಲಿ’ ಅವರ ಪ್ರಕಟಿತ ಕೃತಿಗಳು.
1 Postರಜನಿ ಗರುಡ
ಮೂಲತಃ ಶಿರಸಿಯವರು. ಈಗ ಧಾರವಾಡದಲ್ಲಿ ನೆಲಸಿದ್ದಾರೆ. ನೀನಾಸಂ ರಂಗಶಿಕ್ಷಣ ಪಡೆದು ರಂಗಭೂಮಿಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಗೊಂಬೆಮನೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಂಗೀತ, ನೃತ್ಯ, ನಟನೆ, ನಿರ್ದೇಶನ, ರಂಗತರಬೇತಿ ಶಿಬಿರಗಳು, ಗೊಂಬೆ ತಯಾರಿಕೆ ಮತ್ತು ಪ್ರದರ್ಶನ ಹೀಗೆ ಹಲವು ಆಸಕ್ತಿಯ ಕ್ಷೇತ್ರಗಳು. ಹವ್ಯಾಸಿ ಬರಹಗಾರರು.
5 Postsರಂಜಾನ್ ದರ್ಗಾ
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
93 Postsರಟ್ಟೀಹಳ್ಳಿ ರಾಘವಾಂಕುರ
ರಟ್ಟೀಹಳ್ಳಿ ರಾಘವಾಂಕುರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಗ್ರಾಮದವರು. ಸಧ್ಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಅಧ್ಯಯನ. ಪ್ಲಾಟ್ ಫಾರಂ ನಂ 3(ಕಿರುಕಾದಂಬರಿ) ಹಾಗೂ ಹಿಂಗಂದ್ರ ಹ್ಯಾಂಗ(ಕವನ ಸಂಕಲನ) ಪ್ರಕಟಿತ ಕೃತಿಗಳು. ಫೋಟೋಗ್ರಫಿ, ಸಾಹಿತ್ಯ, ಸಿನಿಮಾ, ಮುಖಪುಟ ವಿನ್ಯಾಸ ಆಸಕ್ತಿ ಕ್ಷೇತ್ರಗಳು.
4 Postsರಮೇಶ್ ನಾಯಕ್
ಕೆಂಡಸಂಪಿಗೆಗಾಗಿಯೇ ಲಂಬಾಣಿ ಜೀವನದ ವಿವರಗಳನ್ನು ಕನ್ನಡದಲ್ಲಿ ಬರೆಯಲು ತೊಡಗಿದವರು. ಈಗ ಮೈಸೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕರಾಗಿದ್ದಾರೆ.ಮೂಲತ: ವಿಜಯಪುರದ ರಾಮತೀರ್ಥ ಲಂಬಾಣಿ ತಾಂಡದವರು.
2 Postsರವಿಶಂಕಲ್ ಎಸ್.ಎಲ್.
ರವಿಶಂಕರ್ ಎಸ್.ಎಲ್. ಮೂಲತಃ ಕೋಲಾರದವರು. ಪ್ರಸ್ತುತ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ಇವರ ಛಾಯಾಚಿತ್ರವೊಂದಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ “8ನೇ ರಾಷ್ಟ್ರೀಯ ಫೋಟೋಗ್ರಫಿ ಪ್ರಶಸ್ತಿ” ದೊರಕಿದೆ.
0 Postsರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
7 Postsರಹಮತ್ ತರೀಕೆರೆ
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.
53 Postsರಾಘವೇಂದ್ರ ಈ. ಹೊರಬೈಲು
ರಾಘವೇಂದ್ರ ಈ ಹೊರಬೈಲುರವರು ಶಿವಮೊಗ್ಗ ಜಿಲ್ಲೆಯ, ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಎಂಬಲ್ಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾಗಿದ್ದಾರೆ. ಗಾಯನ, ಚಿತ್ರಕಲೆ, ನಟನೆ, ಭಾಷಣಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. 'ಅಂತರಂಗದುಲಿ' (ಕವನ ಸಂಕಲನ ೨೦೧೩), 'ಚೊಂಬೇಶ ಮುಕ್ತಕ'(ಚುಟುಕು ಸಂಕಲನ ೨೦೧೭) ಹಾಗೂ 'ಬದುಕು ಪುಕ್ಸಟ್ಟೆ ಅಲ್ಲ' (ಲೇಖನ ಸಂಕಲನ ೨೦೧೯) ಇವರ ಪ್ರಕಟಿತ ಕೃತಿಗಳು
1 Postರಾಘವೇಂದ್ರ ಪಾಟೀಲ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ ರಾಘವೇಂದ್ರ ಪಾಟೀಲರು, ಸಂವಾದ ಸಾಹಿತ್ಯ ಪತ್ರಿಕೆಯ ಸಂಪಾದಕರು. ಒಡಪುಗಳು, ಪ್ರತಿಮೆಗಳು, ದೇಸಗತಿ, ಮಾಯಿಯ ಮುಖಗಳು ರಾಘವೇಂದ್ರ ಪಾಟೀಲರು ಬರೆದ ಕಥಾ ಸಂಕಲನಗಳು; ಬಾಳವ್ವನ ಕನಸುಗಳು, ತೇರು, ಗೈರ ಸಮಜೂತಿ ಕಾದಂಬರಿಗಳು. ಪ್ರವಾಸ ಸಾಹಿತ್ಯ, ಸಂಪಾದಿತ ಕೃತಿಗಳು, ವ್ಯಕ್ತಿ ಚಿತ್ರ, ವಿಮರ್ಶಾ ಕೃತಿಗಳನ್ನೂ ಅವರು ಬರೆದಿದ್ದಾರೆ. ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಚದುರಂಗ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.
1 Postರಾಜೀವ ನಾರಾಯಣ ನಾಯಕ
ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ವಾಸರೆ ಗ್ರಾಮದವರು. ಸದ್ಯ ಮುಂಬೈನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.
3 Postsರಾಜೇಶ್ವರಿ ತೇಜಸ್ವಿ
ಲೇಖಕರಾಗಿ ಅಪರಿಚಿತರಾಗಿದ್ದ ಶ್ರೀಮತಿ ರಾಜೇಶ್ವರಿಯವರು ಪೂರ್ಣಚಂದ್ರ ತೇಜಸ್ವಿಯವರ ಪತ್ನಿ. ಕೆಂಡಸಂಪಿಗೆಯ ಮೂಲಕ ತಮ್ಮ ಊರಿನ ಬದುಕಿನ ಚಿತ್ರ ಕಟ್ಟಿಕೊಡುತ್ತಿದ್ದಾರೆ.
9 Postsರಾಮ್ ಪ್ರಕಾಶ್ ರೈ ಕೆ.
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು....
23 Postsರೂಪ ಹಾಸನ
ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಒಂದು ಕಿರುಪದ್ಯಗಳ ಸಂಕಲನವೂ ಸೇರಿ ಐದು ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ಮೈಸೂರಿನವರು, ಸದ್ಯದ ನೆಲೆ ಹಾಸನ.
4 Postsರೂಪಶ್ರೀ ಕಲ್ಲಿಗನೂರ್
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.
40 Postsರೋಹಿತ್ ರಾಮಚಂದ್ರಯ್ಯ
ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ರೋಹಿತ್ ಸದ್ಯ ಬೆಂಗಳೂರು ನಿವಾಸಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಹಿತ್ಯ, ಅನುವಾದ ಹಾಗೂ ಸಿನೆಮಾ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿದ್ದಾರೆ.
1 Postಲಕ್ಷ್ಮೀಶ ತೋಳ್ಪಾಡಿ
ವೇದ,ಉಪನಿಷತ್,ಮಹಾಕಾವ್ಯ,ಪರಿಸರ,ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು.
3 Postsಲಿಂಗರಾಜ ಸೊಟ್ಟಪ್ಪನವರ್
ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.
11 Postsವಸಂತಕುಮಾರ್ ಕಲ್ಯಾಣಿ
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ' (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
13 Postsವಸುಂಧರಾ ಕದಲೂರು
ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ. ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ. ಬರವಣಿಗೆ, ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.
1 Postವಸುಧೇಂದ್ರ
ವಸುಧೇಂದ್ರ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಸುಧೇಂದ್ರರು ಸಧ್ಯ ಬರವಣಿಗೆಯಲ್ಲಿ ಹಾಗೂ ತಮ್ಮ ಛಂದ ಪುಸ್ತಕ ಪ್ರಕಾಶನದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್, ಮೋಹನಸ್ವಾಮಿ, ವಿಷಮ ಭಿನ್ನರಾಶಿ, ಕೋತಿಗಲು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ, ಐದು ಪೈಸೆ ವರದಕ್ಷಿಣೆ, ಹರಿಚಿತ ಸತ್ಯ, ಮಿಥುನ, ತೇಜೋ ತುಂಗಭದ್ರಾ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ.
3 Postsವಾಸುದೇವ ಕೃಷ್ಣಮೂರ್ತಿ
ವಾಸುದೇವ ಕೃಷ್ಣಮೂರ್ತಿ ಬೆಂಗಳೂರು ನಿವಾಸಿ. ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಇವರು ಖಾಸಗಿ ಕಂಪೆನಿಯ ಐಟಿ ಉದ್ಯೋಗಿ. ಸಾಹಿತ್ಯದಲ್ಲಿ ಆಸಕ್ತಿ. ಓದುವುದು, ಬರೆಯುವುದು, ಚಿತ್ರಕಲೆ, ಸ೦ಗೀತ, ಪ್ರವಾಸ ಮತ್ತು ಛಾಯಗ್ರಹಣ ಇವರ ಹವ್ಯಾಸಗಳು.
2 Postsವಾಸುದೇವ ನಾಡಿಗ್
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.
7 Postsವಿಕಾಸ ಹೊಸಮನಿ
ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಕ್ರಿಕೆಟ್ ಮತ್ತು ಪ್ರವಾಸ ಇವರ ಆಸಕ್ತಿಯ ಕ್ಷೇತ್ರಗಳು. ಕನ್ನಡದ ಖ್ಯಾತ ಲೇಖಕ ರಾಘವೇಂದ್ರ ಪಾಟೀಲರ "ಗೈರ ಸಮಜೂತಿ" ಕಾದಂಬರಿಯ ಕುರಿತ ವಿಮರ್ಶಾ ಲೇಖನಗಳ ಸಂಕಲನ "ಹೃದಯದ ಹಾದಿ" (ಸಂಪಾದಿತ) "ಅನುಶ್ರುತ" (ವಿಮರ್ಶಾ ಲೇಖನಗಳು) ಮತ್ತು "ಉತ್ತರ ಕರ್ನಾಟಕದ ಮಂದಿ" (ಹರಟೆಗಳು) ಕೃತಿಗಳು ಶೀಘ್ರದಲ್ಲಿಯೇ ಪ್ರಕಟವಾಗಲಿವೆ. ಸದ್ಯ ಹಾವೇರಿಯಲ್ಲಿ ಇವರ ವಾಸ.
4 Postsವಿಕ್ರಂ ಹತ್ವಾರ್
ಕವಿ, ಕಥೆಗಾರ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಊರು ಕುಂದಾಪುರ. ಇರುವುದು ಬೆಂಗಳೂರು. `ಜೀರೋ ಮತ್ತು ಒಂದು' ಇವರಿಗೆ ಹೆಸರು ತಂದುಕೊಟ್ಟ ಕಥಾಸಂಕಲನ.
3 Postsವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ
ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಕಲ್ಬುರ್ಗಿಯವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
2 Postsವಿಜಯಶ್ರೀ ಹಾಲಾಡಿ
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು
12 Postsವಿಜಯಾ ಮೋಹನ್
ವಿಜಯಾ ಮೋಹನ್ ಮಧುಗಿರಿಯವರು. “ತಬ್ಬಲಿ ಸಾರು”, “ಕಣ್ಣಿ”, “ಜಾತಿ”, “ಓಟು” (ಕಥಾ ಸಂಕಲನಗಳು), “ನೀರು” (ಮಿನಿ ಕಾದಂಬರಿ) ಇವರ ಪ್ರಕಟಿತ ಕೃತಿಗಳು. ತ್ರಿವೇಣಿ ದತ್ತಿನಿಧಿ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಜೊತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.
2 Postsವಿನಾಯಕ ಅರಳಸುರಳಿ
ವಿನಾಯಕ ಅರಳಸುರಳಿ ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. 'ನವಿಲುಗರಿ ಮರಿ ಹಾಕಿದೆ' ಇವರ ಚೊಚ್ಚಲ ಪ್ರಕಟಿತ ಲಲಿತ ಪ್ರಬಂಧಗಳ ಸಂಕಲನ.
1 Postವಿನೋದ್
ವಿನೋದ್ ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹ್ರೇನ್ ನಲ್ಲಿ ಇವರ ವಾಸ. ಬರವಣಿಗೆ ಇವರ ಹವ್ಯಾಸ.
1 Postವಿಶ್ವ ದೊಡ್ಡಬಳ್ಳಾಪುರ
ವಿಶ್ವ ದೊಡ್ಡಬಳ್ಳಾಪುರ ಹುಟ್ಟಿ, ಬೆಳೆದ ಊರು ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ. ಓದಿದ್ದು ಇಂಜಿನಿಯರಿಂಗ್. ಸದ್ಯದ ನೆಲೆ ಪುಣೆ. ಅಲ್ಲಿನ ಪ್ರತಿಷ್ಟಿತ ಖಾಸಗಿ ಸಂಸ್ಥೆಯೊಂದರ ಸಂಶೋಧನಾ ವಿಭಾಗದಲ್ಲಿ ಕೆಲಸ. ಜನಪ್ರಿಯ ವಿಜ್ಞಾನ ಸಾಹಿತ್ಯ ಆಸಕ್ತಿಯ ವಿಷಯ. ಬರವಣಿಗೆ, ಓದು, ಚಾರಣ ಇತ್ಯಾದಿ ನೆಚ್ಚಿನ ಹವ್ಯಾಸಗಳು.
1 Postವೀಣಾ ಶಾಂತೇಶ್ವರ
ಕನ್ನಡದ ಪ್ರಮುಖ ಲೇಖಕಿ. ‘ಗಂಡಸರು’ ಮತ್ತು ‘ಶೋಷಣೆ, ಬಂಡಾಯ ಇತ್ಯಾದಿ’ ಎಂಬ ಎರಡು ಕಾದಂಬರಿಗಳ ಮೂಲಕ ಕನ್ನಡ ಬರಹ ಲೋಕದಲ್ಲಿ ಹೊಸ ಅಲೆಗಳನ್ನ ಎಬ್ಬಿಸಿದವರು.ಹುಟ್ಟೂರು ಮತ್ತು ಈಗ ಇರುವುದು ಧಾರವಾಡ.
2 Postsವೀರಣ್ಣ ಮಡಿವಾಳರ
ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿರುವ ವೀರಣ್ಣ ಮಡಿವಾಳರ ಅವರು ಕವಿ, ನಾಟಕಕಾರ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಭಾಗದ ಬಳಿ ನಿಡಗುಂದಿ ಎಂಬಲ್ಲಿ ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು. ನೆಲದ ಕರುಣೆಯ ದನಿ ಅವರು ಬರೆದ ಕವನ ಸಂಕಲನ.ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ -ಖಂಡಕಾವ್ಯ ತೆರೆಯದ ಪುಟ - ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರದರ್ಶನಕ್ಕೆ ಆಯ್ಕೆಯಾಗಿ ನಾಡಿನಾದ್ಯಂತ ಪ್ರದರ್ಶನ ಕಂಡಿದೆ.
2 Postsವೆಂಕಟರಂಗ ಮೈಸೂರು
ಮೈಸೂರಿನವರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ಸಾಹಿತ್ಯ,ಕ್ರಿಕೆಟ್ ಮತ್ತು ಪ್ರವಾಸ ಇವರ ಆಸಕ್ತಿಯ ವಿಷಯಗಳು.
2 Postsವೆಂಕಟೇಶ ಬಿ.ಎಂ.
ವೆಂಕಟೇಶ ಬಿ.ಎಂ. ಸರ್ಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
2 Postsವೈ.ಎಸ್. ಹರಗಿ
ವೈ.ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. ೧೯೯೯ನೇ ಸಾಲಿನಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ “ಉರಿವ ಜಲ” ಕಾದಂಬರಿಗೆ ೨೦೧೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ)ಯ ಜೊತೆ ಹಲವು ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು (ಕಾದಂಬರಿ), ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ (ಕಥಾ ಸಂಕಲನ), ಬಾರಪ್ಪಾ ಬಾರೋ ಮಳೆರಾಯ (ಕಥಾಸಂಕಲನ) ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಸ್ವಪ್ನಗೆಜ್ಜೆ (ಕಾದಂಬರಿ), ಕವಡೆಪುರದ ಕೌರವರು (ಕಾದಂಬರಿ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ) ಕಲ್ಲರಳಿ ಹೂವಾಗಿ ಇವರ ಪ್ರಕಟಿತ ಕೃತಿಗಳು.
1 Postವೈಶಾಲಿ ಹೆಗಡೆ
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.
21 Postsವ್ಯಾಸ ದೇಶಪಾಂಡೆ
ವ್ಯಾಸ ದೇಶಪಾಂಡೆ ಮೂಲತಃ ಧಾರವಾಡ ಜಿಲ್ಲೆ ನವಲಗುಂದದವರು. ಧಾರವಾಡದಲ್ಲಿ ವಿದ್ಯಾಭ್ಯಾಸ ಮುಗಿಸಿ, 1977 ರಲ್ಲಿ ಕೆ.ಎ.ಎಸ್. ಪರೀಕ್ಷೆ ತೇರ್ಗಡೆ ಹೊಂದಿ ನಂತರ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರವಾರ, ಬೆಳಗಾವಿ, ಬೀದರ, ಚಿತ್ರದುರ್ಗ, ಮೈಸೂರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. 1.ಮುಂದೇನ ಸಖಿ ಮುಂದೇನ 2.ಯಾರಿಗೂ ಹೇಳೋಣ ಬ್ಯಾಡ 3.ಮಂಡೋದರಿ ರಾವಣಾಯಣ 4. ಇವ ನಮ್ಮವ 5.ಆಲಯವು ಬಯಲೊಳಗೆ(ಗದುಗಿನ ಭಾಂಡಗೆ ಪ್ರಶಸ್ತಿ ಪಡೆದ ಕೃತಿ) 6.ಅಜ್ಜಾತಪರ್ವ 7.ಅಂಬಾ ವಿಜಯ ಇವರು ರಚಿಸಿದ ನಾಟಕ ಕೃತಿಗಳು.
1 Postಶರಣಗೌಡ ಬಿ ಪಾಟೀಲ, ತಿಳಗೂಳ
<div dir="auto">ಶರಣಗೌಡ ಬಿ ಪಾಟೀಲ ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ ಕಾದಂಬರಿ ಲಲಿತ ಪ್ರಬಂಧ ಸೇರಿ ಇವರ ಎಂಟು ಕೃತಿಗಳು ಪ್ರಕಟವಾಗಿವೆ. ಕಸಾಪ ಬೆಂಗಳೂರಿನಿಂದ ಮಾಣಿಕರಾವ ದತ್ತಿ ಪುಸ್ತಕ ಪ್ರಶಸ್ತಿ, ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಕಾದಂಬರಿ ಪ್ರಶಸ್ತಿ, ಗುರುಕುಲ ಪ್ರತಿಷ್ಠಾನದ ಸಾಹಿತ್ಯ ಶರಭ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಇವರಿಗೆ ದೊರೆತಿವೆ.</div> <div class="yj6qo ajU"></div>
12 Postsಶರಣಬಸವ ಕೆ ಗುಡದಿನ್ನಿ
ಶರಣಬಸವ ಕೆ ಗುಡದಿನ್ನಿ ರಾಯಚೂರು ಜಿಲ್ಲೆಯ ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕ. ಕತೆ ಇವರ ಆಸಕ್ತಿಯ ಕ್ಷೇತ್ರ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್-25 ಕತೆಗಳಲ್ಲಿ ಇವರ ಕಥೆಗಳು ಆಯ್ಕೆಯಾಗಿವೆ.
1 Postಶಶಿಕಲಾ ಚಂದ್ರಶೇಖರ್
ಶಶಿಕಲಾ ಚಂದ್ರಶೇಖರ್ ಅವರು ಮೈಸೂರಿನವರು. ಇವರ ತಂದೆ ದೇ. ಜವರೇಗೌಡ, ತಾಯಿ ಸಾವಿತ್ರಮ್ಮ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ‘ಅಭ್ಯಾಸ’, ‘ಕುವೆಂಪು ಸೂಕ್ತಿಮಾಲೆ’ ಪ್ರಕಟವಾಗಿವೆ.
1 Postಶಾಂತಿ ಕೆ. ಅಪ್ಪಣ್ಣ
ಕನ್ನಡದ ಹೊಸ ತಲೆಮಾರಿನ ಕಥೆಗಾರ್ತಿ. ಇವರ ‘ಮನಸು ಅಭಿಸಾರಿಕೆ’ ಸಣ್ಣ ಕತೆಗಳ ಚೊಚ್ಚಲ ಸಂಕಲನ ಹಲವು ಪ್ರಶಸ್ತಿಗಳಿಗೆ ಬಾಜನವಾಗಿದೆ. ಮೂಲತಃ ಕೊಡಗಿನವರು. ಈಗ ಕೆಲಸದ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ.
2 Postsಶಾಲಿನಿ ನೂತನ್
ಶಾಲಿನಿ ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣದವರು. ಪ್ರಸ್ತುತ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶಾಲಿನಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆ ಇವರ ಹವ್ಯಾಸಗಳು.
1 Postಶಿವಕುಮಾರ ಚನ್ನಪ್ಪನವರ
ಶಿವಕುಮಾರ ಚನ್ನಪ್ಪನವರ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹೀಲದಹಳ್ಳಿಯವರು. ‘ಒಂದು ಭ್ರೂಣದ ಕನಸು’ (ಕವಿತಾ ಸಂಕಲನ) ‘ಮುಖವಾಡದ ಮಾಫಿಯಾದಲ್ಲಿ’ (ಕಥಾ ಸಂಕಲನ) ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟವಾಗಿವೆ ಮತ್ತು ಇವರ ಕತೆಗಳಿಗೆ ಹಲವು ಬಹುಮಾನಗಳು ಸಂದಿವೆ
2 Postsಶುಭಶ್ರೀ ಭಟ್ಟ
ಶುಭಶ್ರೀ ಭಟ್ಟ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ. ಇವರ ಲೇಖನಗಳು, ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಹಿಂದಿನ ನಿಲ್ದಾಣ" ಇವರ ಪ್ರಕಟಿತ ಪ್ರಬಂಧಗಳ ಸಂಕಲನ.
2 Postsಶುಭಾ ಎ.ಆರ್.
ಶುಭಾ ಎ. ಆರ್. ಮೂಲತಃ ಬೆಂಗಳೂರಿನವರು. ಇವರ ಕತೆ, ಕವನ, ಪ್ರಬಂಧಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕಿಯಾಗಿರುವ ಇವರು ವಿಜ್ಞಾನ ಪಠ್ಯಪುಸ್ತಕವೂ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಾಜಾಜಿನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಕ್ಕಳಿಗಾಗಿ "ಧರೆಯನುಳಿಸುವ ಬನ್ನಿರಿ" ಎಂಬ ವೈಜ್ಞಾನಿಕ ನಾಟಕಗಳ ಪುಸ್ತಕ ಪ್ರಕಟಿಸಿದ್ದು, ‘ತುಂಡು ಭೂಮಿ- ತುಣುಕು ಆಕಾಶ’,(ಕಥಾ ಸಂಕಲನ), ‘ತುಟಿ ಬೇಲಿ ದಾಟಿದ ನಗು’ (ಕವನ ಸಂಕಲನ) ಸದ್ಯದಲ್ಲೇ ಬಿಡುಗಡೆಯಾಗಲಿವೆ.
1 Postಶೇಣಿ ಮುರಳಿ
ಪತ್ರಕರ್ತರಾಗಿರುವ ಶೇಣಿ ಮುರಳಿ ಅವರು, ಕಲಾವಲಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು. ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ಆಸಕ್ತಿ. ಮೂರು ಕಲಾತ್ಮಕ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇರುವ ಅವರು, ಗಾಯನ ಮಾತ್ರವಲ್ಲದೆ ಮೃದಂಗ ಮತ್ತು ಮದ್ದಳೆ ವಾದನದಲ್ಲಿಯೂ ನಿಪುಣರು.
5 Postsಶೇಷಾದ್ರಿ ಗಂಜೂರು
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
41 Postsಶ್ಯಾಮಲಾ ಮಾಧವ
ಶ್ಯಾಮಲಾ ಕಥೆಗಾರ್ತಿ ಮತ್ತು ಅನುವಾದಕಿ. ಹುಟ್ಟಿದ್ದು ಮಂಗಳೂರು. ಈಗ ಮುಂಬೈ ವಾಸಿ. ರಫಿಯಾ ಮಂಜೂರುಲ್ ಅಮೀನ್ ಬರೆದ ಉರ್ದು ಕಾದಂಬರಿ, 'ಆಲಂಪನಾ’ದ ಕನ್ನಡ ಅನುವಾದ ಇವರ ಮಹತ್ವದ ಕೃತಿ. ಗಾನ್ ವಿತ್ ದ ವಿಂಡ್, ವದರಿಂಗ್ ಹೈಟ್ಸ್, ಫ್ರ್ಯಾಂಕಿನ್ ಸ್ಟೈನ್, ಬಾಲ್ಯಕಾಲ ಮಾಯಾಜಾಲಾ ಇವರ ಇನ್ನಿತರೆ ಪ್ರಕಟಿತ ಕೃತಿಗಳು.. "ನಾಳೆ ಇನ್ನೂ ಕಾದಿದೆ" ಇವರ ಆತ್ಮಕಥನ
1 Postಶ್ರೀ ಡಿ. ಎನ್.
<div class="gmail_default">ವೃತ್ತಿಯಿಂದ ಪತ್ರಕರ್ತೆ. ಹುಟ್ಟಿದೂರು ಕಾಸರಗೋಡು. ಕಳೆದ 16 ವರ್ಷಗಳಿಂದ ಬೆಂಗಳೂರಲ್ಲಿ ವಾಸ. ಮಳೆ, ಕಾಡು ಮತ್ತು ಬೀಚ್ ಎಂದರೆ ಸಿಕ್ಕಾಪಟ್ಟೆ ಖುಷಿ.</div>
2 Postsಶ್ರೀ ತಲಗೇರಿ
ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು. ಸದ್ಯಕ್ಕೆ ಬೆಂಗಳೂರಿನ ನಿವಾಸಿ. ಸಾಫ್ಟ್ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
3 Postsಶ್ರೀಕಾಂತ್ ಪ್ರಭು
ಲೇಖಕ ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಪಕ. ಚಿತ್ರ ಸಮಾಜ ಚಳುವಳಿಯೊಂದಿಗೆ ಬೆಳೆದವರು.
2 Postsಶ್ರೀದೇವಿ ಕೆರೆಮನೆ
ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.
18 Postsಶ್ರೀನಿವಾಸ ಜೋಕಟ್ಟೆ
ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮುಂಬಯಿ ನಿವಾಸಿ. 'ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ' (ಕವನ ಸಂಕಲನ) 'ಮಾಯಾಲೋಕದ ಒಳಗುಟ್ಟುಗಳು' (ಲೇಖನ ಸಂಕಲನ) 'ಕೊನೆಯ ಸದ್ದು' (ಕಥಾಸಂಕಲನ), 'ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಳ' (ಪ್ರವಾಸ ಕೃತಿ), 'ಮುಂಬಯಿ ಅಂಡರ್ ವರ್ಲ್ಡ್' ಸೇರಿದಂತೆ ನಲ್ವತ್ತು ಕೃತಿಗಳನ್ನು ರಚಿಸಿದ್ದಾರೆ.
2 Postsಶ್ರೀನಿವಾಸ ವೈದ್ಯ
ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಕಾರರಾಗಿ ಪರಿಚಿತರು. ಆ ಕೈಬರಹದ ಪತ್ರಿಕೆ ‘ನಂದಾದೀಪ’ವನ್ನು ಆರಂಭಿಸಿದ್ದ ಇವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿಕೊಳ್ಳುತ್ತಿದ್ದ ವೈದ್ಯರು ಕಾಲೇಜು ದಿನಗಳಲ್ಲೇ ವಿ.ಕೃ.ಗೋಕಾಕರ ಪ್ರಭಾವಕ್ಕೆ ಒಳಗಾದವರು. 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿದ ಅವರು 1996ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದರು.
1 Postಶ್ರೀಮತಿ ದೇವಿ
ಹಿಂದೂಸ್ತಾನಿ ಗಾಯಕಿ. ಮುಂಬೈನ ವಿ.ಅಪೂರ್ವಾ ಗೋಖಲೆ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕದ ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತಮ್ಮ ಗುರುಗಳಾದ ನಾರಾಯಣ ಪಂಡಿತ್ ಅವರು ರಚಿಸಿದ 100 ಬಂದಿಶ್ ಗಳನ್ನು ಹಾಡಿ, youtube ನಲ್ಲಿ ಪ್ರಕಾಶಿಸಿದ್ದಾರೆ. ಇಂಗ್ಲಿಷ್ ಎಂ ಎ ಪದವೀಧರೆ. ಕನ್ನಡದ ದಿನ ಪತ್ರಿಕೆಗಳು ಮತ್ತು ಸಂಗೀತದ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.
2 Postsಶ್ರೀಹರ್ಷ ಸಾಲಿಮಠ
ಶ್ರೀಹರ್ಷ ಎಂ ಟೆಕ್ ಪದವೀಧರ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಬಾಲ್ಯ ಮತ್ತು ಇಂಜಿನಿಯರಿಂಗ್ ಪದವಿಯವರೆಗೆ ಓದಿದ್ದು ದಾವಣಗೆರೆಯಲ್ಲಿ. ಸಧ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ವಾಸ. ಹವ್ಯಾಸಗಳು, ಓದು, ಸುತ್ತಾಟ, ಸಂಗೀತ.
14 Postsಸಂಗೀತ ರವಿರಾಜ್ ಚೆಂಬು
ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
6 Postsಸಚಿನ್ ಅಂಕೋಲಾ
ಸಚಿನ್ ಅಂಕೋಲಾ, ಮೂಲತಃ ಅಂಕೋಲಾದವರು. ವಾಸ ಉಡುಪಿ. ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ನಾನೂ ಹೆಣ್ಣಾಗಬೇಕಿತ್ತು” ಇವರ ಪ್ರಕಟಿತ ಕವನ ಸಂಕಲನ
2 Postsಸಚೇತನ ಭಟ್
ಸಚೇತನ ಭಟ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್ವ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ.
5 Postsಸಂಜೋತಾ ಪುರೋಹಿತ
ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. 'ಸಂಜೀವಿನಿ' ಇವರ ಪ್ರಕಟಿತ ಕಾದಂಬರಿ.
12 Postsಸದಾನಂದ ನಾರಾವಿ
ಅಂಚೆ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾಗಿರುವ ಸದಾನಂದ ನಾರಾವಿಯವರು ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುತ್ತಾರೆ. 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ', 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಇವರ ಪ್ರಕಟಿತ ಕೃತಿಗಳು. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ಸೇವೆಯನ್ನು ಪರಿಗಣಿಸಿ ತುಳು ಸಾಹಿತ್ಯ ಅಕಾಡೆಮಿ ಇವರನ್ನು ಗೌರವಿಸಿದೆ.
1 Postಸದಾಶಿವ ಸೊರಟೂರು
ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹೆಸರಿಲ್ಲದ ಬಯಲು' ಮತ್ತು ' ತೂತು ಬಿದ್ದ ಚಂದಿರ' (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.
14 Postsಸಂಧ್ಯಾದೇವಿ
ಕನ್ನಡದ ಕವಯಿತ್ರಿ. `ಮಾತು ಚಿಟ್ಟೆ ಬೆಂಕಿ ಬೆರಳು ಮುರಿದ ಮುಳ್ಳಿನಂತೆ ಜ್ಞಾನ' ಇವರ ಕವಿತಾ ಸಂಕಲನ. ಊರು ಪುತ್ತೂರು
1 Postಸಂಧ್ಯಾರಾಣಿ
ಲೇಖಕಿ, ಅನುವಾದಕಿ, ಪತ್ರಕರ್ತೆ ಮತ್ತು ಚಿತ್ರ ಸಾಹಿತಿ . ‘ಯಾಕೆ ಕಾಡುತಿದೆ ಸುಮ್ಮನೆ’ ( ಅಂಕಣ ಬರಹ) ‘ತುಂಬೆ ಹೂ’ ( ಜೀವನ ಚರಿತ್ರೆ) ‘ಪೂರ್ವಿ ಕಲ್ಯಾಣಿ’ ಮತ್ತು ‘ನನ್ನೊಳಗಿನ ಹಾಡು ಕ್ಯೂಬಾ’ (ನಾಟಕ) ಇವರ ಕೃತಿಗಳು. ಊರು ಬಂಗಾರಪೇಟೆ, ಇರುವುದು ಬೆಂಗಳೂರು.
17 Postsಸರಿತಾ ನವಲಿ
ಸರಿತಾ ನವಲಿ ಮೂಲತಃ ಉತ್ತರ ಕರ್ನಾಟಕದವರು. ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದು, ಸದ್ಯ ನ್ಯೂ ಜೆರ್ಸಿಯಲ್ಲಿ ನೆಲೆಸಿದ್ದಾರೆ. ಇವರ ಬರಹಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಆವನಾವನು ಕಾಯ್ವ’ ಇವರ ಮೊದಲ ಕಥಾಸಂಕಲನ.
3 Postsಸರೋಜಿನಿ ಪಡಸಲಗಿ
ಸರೋಜಿನಿ ಪಡಸಲಗಿ ಬೆಂಗಳೂರು ವಾಸಿ. ಕವಿತೆ, ಕತೆ ಪ್ರಬಂಧಗಳನ್ನು ಬರೆಯುವುದು ಜೊತೆಗೆ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದೂ ಇವರ ಹವ್ಯಾಸ.
3 Postsಸಹನಾ ಕಾಂತಬೈಲು
ಲೇಖಕಿ ಸಹನಾ ಕಾಂತಬೈಲು ಸಂಪಾಜೆಯ ದಬ್ಬಡ್ಕದವರು. ಕೃಷಿ ಮಹಿಳೆ. ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ.
5 Postsಸಹ್ಯಾದ್ರಿ ನಾಗರಾಜ್
<div>ಊರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿ. ಓದಿದ್ದೆಲ್ಲ ಶಿವಮೊಗ್ಗ. ಬದುಕು ಕಟ್ಟಿಕೊಂಡದ್ದು ಬೆಂಗಳೂರಿನಲ್ಲಿ. ಒಂದಷ್ಟು ಕಾಲ ಪತ್ರಕರ್ತ. ಸದ್ಯ, ಗಿಡ-ಮರ, ಹೂವಿನೊಟ್ಟಿಗೆ ಸರಾಗ ಉಸಿರಾಡುತ್ತಿರುವ ಗಾರ್ಡನ್ ಡಿಸೈನರ್. ಪ್ರವಾಸ, ಗಾರೆ ಕೆಲಸ, ಸಿನಿಮಾ, ಫೋಟೊಗ್ರಫಿ ಹುಚ್ಚು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದಿಂದ ಐದು ಬಾರಿ ಕವಿತೆಗೆ, ಎರಡು ಬಾರಿ ಕತೆಗೆ ಬಹುಮಾನ.</div>
15 Postsಸಾವನ್ ಕೆ ಸಿಂಧನೂರು
<span class="im">ಸಾವನ್ ಕೆ ಸಿಂಧನೂರು ಅವರು ಸಿಂಧನೂರು ತಾಲೂಕಿನ ಸಿ ಎಸ್ ಎಫ್-1 ಎನ್ನುವ ಪುಟ್ಟ ಕ್ಯಾಂಪ್ನವರು. </span>ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಂಯೋಜಕರಾಗಿ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಜಲ್ ರಚನೆಯಲ್ಲಿ ಅಪಾರ ಒಲವು ಹೊಂದಿದ್ದಾರೆ. "ಮಗರೀಬ್ ಗಜಲ್ಗಳು", "ಉಸಿರ ಮರೆತ ಕೊಳಲು" ಇವರ ಪ್ರಕಟಿತ ಗಜಲ್ ಸಂಕಲನಗಳು. <span class="im"> </span>
1 Postಸಿದ್ಧಲಿಂಗ ಪಟ್ಟಣಶೆಟ್ಟಿ
ಧಾರವಾಡ ಬಳಿಯ ಯಾದವಾಡದಲ್ಲಿ ಜನಿಸಿದ ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡ ಕಾವ್ಯಲೋಕದ ಬಗ್ಗೆ ಅದಮ್ಯ ಪ್ರೀತಿಯಿಟ್ಟುಕೊಂಡವರು. ನೀನಾ, ಮತ್ತೆ ಬಂದಿದ್ದಾಳ, ಅಪರಂಪಾರ, ಕುಲಾಯಿ ಇರಲಿ ನನ್ನಲ್ಲಿಯೇ ಎಂಬುದು ಅವರ ಕವನಸಂಕಲನಗಳು. ನಾಟಕಗಳನ್ನು, ಅನುವಾದಿತ ಕೃತಿಗಳನ್ನೂ ಅವರು ಬರೆದಿದ್ದಾರೆ. ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಸಂಕ್ರಮಣ ಸಾಹಿತ್ಯ ಪತ್ರಿಕೆಯನ್ನು ರೂಪಿಸಿದವರಲ್ಲಿ ಒಬ್ಬರು. ಆಷಾಢದ ಒಂದು ದಿನ, ಸೂಯ್ಯಾಸ್ತದಿಂದ ಸೂಯ್ಯೋದಯದ ವರೆಗೆ, ಚೋರ ಚರಣದಾಸ, ಮುದ್ರಾರಾಕ್ಷಸ ಅವರ ಅನುವಾದಿತ ನಾಟಕಗಳು. ಆಧುನಿಕ ಕನ್ನಡ ಹಿಂದೀ ಕಾವ್ಯ ರಂಗಾಯಣ, ಪರಿಭಾವನ- ವೈಚಾರಿಕ ಪ್ರಬಂಧ ಸಂಕಲನಗಳು. ಅವರ ಸಾಹಿತ್ಯ ಕೃಷಿಯನ್ನರಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಅವರನ್ನು ಅರಸಿ ಬಂದಿವೆ.
1 Postಸಿಂಧು ಜಗನ್ನಾಥ್
ಸಿಂಧು ಜಗನ್ನಾಥ್ ಉದ್ಯಮಿ. ಪ್ರಸ್ತುತ DSCA ಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ಅವರ ಆರಂಭಿಕ ಕಂಪನಿ "ಪ್ರಥಮ SRSTI" ಮತ್ತು ಆರ್ಕಿಟೆಕ್ಚರ್ ಸ್ಟುಡಿಯೊವನ್ನು ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಒಲವಿದ್ದು, “ಕನ್ನಡ ಪುಸ್ತಕ ಪರಿಚಯ” ಎಂಬ ಪಾಡ್ಕಾಸ್ಟ್ ಆರಂಭಿಸಿದ್ದಾರೆ
1 Postಸಿಂಧುರಾವ್ ಟಿ.
ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ
10 Postsಸಿರಿ ಹುಲಿಕಲ್
ಸಿರಿ ಹಾಸನದ ಹುಲಿಕಲ್ಲಿನವರು. ಹನ್ನೊಂದು ವರ್ಷ ಸೌದಿಯ ರಿಯಾದ್ ವಾಸದ ನಂತರ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. "ನಡೆದಷ್ಟು ದಾರಿ ದೂರ" ಇವರ ಪ್ರಕಟಿತ ಕಥಾ ಸಂಕಲನ. ಓದೋದು ಇಷ್ಟದ ಹವ್ಯಾಸ.
1 Postಸೀಮಾ ಎಸ್ ಹೆಗಡೆ
ಹುಟ್ಟಿದ್ದು ಬೆಳೆದದ್ದು ಮಲೆನಾಡಿನ ಹಳ್ಳಿಯ ರೈತ ಕುಟುಂಬವೊಂದರಲ್ಲಿ. ಓದಿದ್ದು ಅರ್ಥಶಾಸ್ತ್ರ. ಈಗ ಇರುವುದು ನೆದರ್ಲ್ಯಾಂಡ್ಸ್ ನ ಆಮ್ಸ್ಟೆರ್ಡಾಮ್ ನಲ್ಲಿ.
11 Postsಸೀಮಾ ಸಮತಲ
ಸೀಮಾ ಕುವೆಂಪು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದು, ಬರಹ, ಸುತ್ತಾಟ, ಭಾಷಾಂತರದಲ್ಲಿ ಆಸಕ್ತಿ. ಸದ್ಯ ಹೈದರಾಬಾದಿನ ನಿವಾಸಿ.
4 Postsಸುಜಯ್ ಪಿ.
ಸುಜಯ್ ಮೂಲತಃ ಪುತ್ತೂರಿನವರು. ಸದ್ಯ ಮೈಸೂರಿನಲ್ಲಿ ಕೆಲಸ. ಓದು ಮತ್ತು ಸುತ್ತಾಟ ಇವರಿಗೆ ಖುಷಿಕೊಡುವ ಸಂಗತಿಗಳು.
2 Postsಸುಜಾತಾ ಎಚ್.ಆರ್
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ 'ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.
35 Postsಸುದರ್ಶನ್
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.
78 Postsಸುಧಾ ಆಡುಕಳ
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
42 Postsಸುಧಾ ಚಿದಾನಂದಗೌಡ
ಕಥೆಗಾರ್ತಿ, ಕವಯಿತ್ರಿ. ‘ಬಯಲ ಧ್ಯಾನ’ ಇವರ ಕವಿತಾ ಸಂಕಲನ. ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿದ್ದಾರೆ.
1 Postಸುಧಾಕರ ದೇವಾಡಿಗ ಬಿ
ಸುಧಾಕರ ದೇವಾಡಿಗ ಬಿ ಇವರು ಕುಂದಾಪುರ ಸಮೀಪದ ಕೋಟೇಶ್ವರದವರು. ಪ್ರಸ್ತುತ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಲಲಿತ ಪ್ರಬಂಧಗಳನ್ನು ಕುರಿತ ಅಧ್ಯಯನಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ‘ಉಳಿದ ಆಕಾಶʼ ಎಂಬುದು ಪ್ರಕಟಿತ ಕೃತಿಯಾಗಿದೆ.
2 Postsಸುನಂದಾ ಪ್ರಕಾಶ ಕಡಮೆ
ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ.
5 Postsಸುನಿತಾ ಮೂರಶಿಳ್ಳಿ
ಸುನಿತಾ ಮೂರಶಿಳ್ಳಿ ಮೂಲತಃ ಧಾರವಾಡದವರು. ಇವರಿಗೆ ಸಂಗೀತ ಹಾಗೂ ಶರಣ ಸಾಹಿತ್ಯದಲ್ಲಿ ಅಭಿರುಚಿ. ಚಿದ್ಬಯಲು, ಸಿಡಿಗಳಲಿ ಶರಣರ ವಚನಗಳಿಗೆ ಧ್ವನಿ ನೀಡಿದ್ದಾರೆ. "ಅರಿವಿನತ್ತ ಎನ್ನ ಚಿತ್ತ" ಎಂಬ ಶರಣ ಸಾಹಿತ್ಯದ ಲೇಖನಗಳ ಸಂಗ್ರಹ ಪ್ರಕಟವಾಗಿದೆ.
1 Postಸುನೈಫ್ ವಿಟ್ಲ
ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ
4 Postsಸುಬ್ರಾಯ ಚೊಕ್ಕಾಡಿ
ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯವರು. ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ(ಕವನ ಸಂಕಲನಗಳು) ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು (ವಿಮರ್ಶಾ ಕೃತಿಗಳು) ಸಂತೆಮನೆ (ಕಾದಂಬರಿ) ಇವಲ್ಲದೇ ಹಲವು ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ
1 Postಸುಮತಿ ಮುದ್ದೇನಹಳ್ಳಿ
ಅಮೆರಿಕಾದ ಒಹಾಯೋ ರಾಜ್ಯದಲ್ಲಿ ವಾಸಿಸುತ್ತಿರುವ ಸುಮತಿ ಮುದ್ದೇನಹಳ್ಳಿ ಇ೦ಗ್ಲಿಷ್ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದವರು. ವೃತ್ತಿಯಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರು. ಪ್ರವೃತ್ತಿಯಲ್ಲಿ, ಪರಿಸರ ಸ್ನೇಹಿ ಜೀವನ ವಿಧಾನಗಳಲ್ಲಿ ಆಸಕ್ತಿ, ಅದರ ಕಲಿಕೆ, ಮತ್ತು ಪ್ರಯೋಗ. 'ಅವರವರ ಭಕುತಿಗೆ' ಕೃತಿಯ ಸಹ ಸ೦ಪಾದಕಿ ಮತ್ತು ಲೇಖಕಿ.
2 Postsಸುಮನಾ ಲಕ್ಷ್ಮೀಶ್
<div dir="auto">ಸುಮನಾ ಲಕ್ಷ್ಮೀಶ ಹಿರಿಯ ಪತ್ರಕರ್ತರು. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈಗ ಅಪ್ಪಟ ಕೃಷಿಕರು. ಸಾಹಿತ್ಯ ಓದು- ಕವನ ಬರೆಯುವುದು ಹವ್ಯಾಸ. ಸಂಗೀತ, ರಂಗಭೂಮಿ ಆಸಕ್ತಿಯ ವಿಷಯಗಳು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಾಸ.</div>
1 Postಸುಮಾವೀಣಾ
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
52 Postsಸುಮಿತ್ ಮೇತ್ರಿ
ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು. ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ. ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ (ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತ) ಮತ್ತು ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಇವರ ಪ್ರಕಟಿತ ಕವನ ಸಂಕಲನಗಳು.
2 Postsಸುವರ್ಣ ಚೆಳ್ಳೂರು
ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚೆಳ್ಳೂರು ಗ್ರಾಮದವರು. ಪ್ರಸ್ತುತ 'ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿ.
3 Postsಸೃಜನ್
ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ . ರಾಮ್ ಗೋಪಾಲ್ ವರ್ಮ ' ನನ್ನಿಷ್ಟ' ಮೊದಲ ಅನುವಾದ. 'ಪಚ್ಚೆ ರಂಗೋಲಿ' ಮೊದಲ ಅನುವಾದ ಕಥೆ. ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ .
3 Postsಸೌರಭಾ ಕಾರಿಂಜೆ
ಸೌರಭಾ ಕಾರಿಂಜೆ ಕಥೆಗಾರ್ತಿ. ಮೂಲತಃ ಉಪ್ಪಿನಂಗಡಿಯವರು. ಸಧ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
2 Postsಸ್ಮಿತಾ ಅಮೃತರಾಜ್ ಸಂಪಾಜೆ
ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ನಿವಾಸಿ. ಗೃಹಿಣಿ, ಕೃಷಿಕ ಮಹಿಳೆ. 'ಕಾಲ ಕಾಯುವುದಿಲ್ಲ', 'ತುಟಿಯಂಚಿನಲ್ಲಿ ಉಲಿದ ಕವಿತೆಗಳು' ಸೇರಿದಂತೆ ಮೂರು ಕವನ ಸಂಕಲನ ಹಾಗೂ ಮೂರು ಲಲಿತ ಪ್ರಬಂಧಗಳು ಪ್ರಕಟವಾಗಿವೆ.
3 Postsಸ್ಮಿತಾ ಮಾಕಳ್ಳಿ
ಸ್ಮಿತಾ ಮಾಕಳ್ಳಿ ಮೂಲತಃ ತಿಪಟೂರಿನವರು, ಸದ್ಯ ಬೆಂಗಳೂರಿನಲ್ಲಿ ವಾಸ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರ ಡಿಪ್ಲೋಮಾ ಪದವಿ. ಸದ್ಯ ಅದೇ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ‘ಕೈಗೆಟಕುವ ಕೊಂಬೆʼ ಇವರ ಪ್ರಕಟಿತ ಕೃತಿ.
8 Postsಸ್ಮಿತಾ ರಾಘವೇಂದ್ರ
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರಾದ ಸ್ಮಿತಾ ರಾಘವೇಂದ್ರ ಭಟ್ ಗೃಹಿಣಿ. ಬರವಣಿಗೆ ಇವರ ಹವ್ಯಾಸ. "ಕನಸು ಕನ್ನಡಿ" ಇವರ ಪ್ರಕಟಿತ ಗಜಲ್ ಸಂಕಲನ.
4 Postsಹಟ್ಟಿ ಸಾವಿತ್ರಿ ಪ್ರಭಾಕರ ಗೌಡ
ಗದಗಿನ ಲಕ್ಕುಂಡಿ ಮೂಲದ ಸಾವಿತ್ರಿ, ತುಮಕೂರು ಜಿಲ್ಲೆಯ ನಾಗಸಂದ್ರ ಗ್ರಾಮದಲ್ಲಿ ಶಿಕ್ಷಕಿ. ಏಳೂವರೆ ವರ್ಷ ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವುದು ಇವರ ಕನಸು. ಓದು, ಪ್ರಯಾಣ, ಸಣ್ಣ ಕಥೆ ಮತ್ತು ಪ್ರಬಂಧ ಬರವಣಿಗೆ ಇವರ ಹವ್ಯಾಸ.
1 Postಹಮೀರ್ ಮುಗಿಲು ಕೆ.ಎಲ್.
ನಾಲ್ಕನೇ ತರಗತಿಯಿಂದಲೇ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕಥೆ ಕಾದಂಬರಿಗಳನ್ನು ಬರೆಯುವ ಆಸಕ್ತಿ ತೋರಿಸುತ್ತಿದ್ದ ಹಮೀರ್ ಮುಗಿಲು ಇದೀಗ ಹತ್ತನೆ ತರಗತಿಯ ಪರೀಕ್ಷೆ ಮುಗಿಸಿ ರಜೆಯ ಖುಷಿಯಲ್ಲಿದ್ದಾರೆ. ಇವರ ಊರು ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ ತಾಲೂಕುಗಳ ಗಡಿಯಲ್ಲಿರುವ ಪುರಪ್ಪೆಮನೆ. ಇದು ಹಮೀರ್ ಮುಗಿಲು ಕನ್ನಡದಲ್ಲಿ ಬರೆದ ಮೊದಲ ಕಥೆ.
1 Postಹೃಷಿಕೇಶ್ ಬಹದ್ದೂರ್ ದೇಸಾಯಿ
ಮೂಲ ಊರು ಅಗಡಿ.ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅಗಡಿ, ಹಾನಗಲ್ಲು, ಪಣಜಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಗಳಲ್ಲಿ ಓದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್ ನ ನಂತರ ಈಗ ಕೆಲಸ ಮಾಡುತ್ತಿರುವುದು ಬೆಳಗಾವಿಯಲ್ಲಿ. ಓದಿದ್ದು ಆಂಗ್ಲ ಸಾಹಿತ್ಯ. ಜಾಹಿರಾತು ಕಂಪನಿಗಳಲ್ಲಿ ಕಾಪಿ ರೈಟಿಂಗ್ ಮಾಡಬೇಕೆಂದು ಹೊರಟವನು ಪತ್ರಕರ್ತ ನಾಗಿದ್ದು ಅಚಾನಕ್.
3 Postsಹೇಮಾ .ಎಸ್
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ 'ಹೆಸರಿಲ್ಲದ ಹೂ' ಪ್ರಕಟಿತ ಸಂಕಲನ..
37 Postsಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಓದುಗರ ಮೆಚ್ಚು
ನಮ್ಮ ಫೇಸ್ ಬುಕ್
ನಮ್ಮ ಟ್ವಿಟ್ಟರ್
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ
ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read Moreಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
ಸಾದೃಶಾಭಾಸ ಪದಗಳೊಂದಿಗೆ ಸೆಣಸಾಟ: ಸುಮಾವೀಣಾ ಸರಣಿNov 25, 2024 | ದಿನದ ಅಗ್ರ ಬರಹ
-
ಸಮಾಜ ಮತ್ತು ದೇವರ ಕುದುರೆ: ಸಚಿನ್ ಎ ಜೆ ಬರಹNov 23, 2024 | ದಿನದ ಅಗ್ರ ಬರಹ
-
ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆNov 23, 2024 | ದಿನದ ಕವಿತೆ
-
ಮಕ್ಕಳ ಆಟ: ಕೆ. ಸತ್ಯನಾರಾಯಣ ಪ್ರವಾಸ ಸರಣಿNov 22, 2024 | ಪ್ರವಾಸ